ಚೀನಿಕಾಯಿ ಬಹಳ ಪೋಷಕಾಂಶವಾದ ತರಕಾರಿ!

ಚೀನಿಕಾಯಿ ಬಹಳ ಪೋಷಕಾಂಶವಾದ ತರಕಾರಿಯಾದರೂ, ಹೆಚ್ಚಿನವರಿಗೆ ಅದು ಇಷ್ಟವಾಗುವುದಿಲ್ಲ. ಆದರೆ, ಬೇಸಿಗೆಯಲ್ಲಿ ಈ ಚೀನಿಕಾಯಿ ಸೇವಿಸುವುದರಿಂದ ಬಹಳಷ್ಟು ಪ್ರಯೋಜನಗಳಿವೆ. ಇದರಲ್ಲಿ ಫೈಬರ್, ನೀರು, ವಿಟಮಿನ್-ಎ, ವಿಟಮಿನ್-ಬಿ, ಕಬ್ಬಿಣ, ಮೆಗ್ನೀಸಿಯಮ್, ಆಂಟಿಆಕ್ಸಿಡೆಂಟ್ ಮುಂತಾದ ಅನೇಕ ಗುಣಗಳಿದ್ದು, ನಾನಾ ಸಮಸ್ಯೆಗಳಿಗೆ ಪರಿಹಾರವಾಗಿ ಕಾರ್ಯನಿರ್ವಹಿಸುತ್ತದೆ.

ಹಾಗಾದರೆ ಚೀನಿಕಾಯಿಯ ಪ್ರಯೋಜನಗಳೇನು ಎಂಬುದನ್ನು ಇಲ್ಲಿ ತಿಳಿಯೋಣ.

ಚೀನಿಕಾಯಿ ಸೇವನೆಯಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ತೂಕ ನಷ್ಟಕ್ಕೆ ಪರಿಣಾಮಕಾರಿ:
ತೂಕ ನಷ್ಟಕ್ಕೆ ಚೀನಿಕಾಯಿ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಕ್ಯಾಲೋರಿಗಳಲ್ಲಿ ತುಂಬಾ ಕಡಿಮೆ ಮತ್ತು ಫೈಬರ್ನಲ್ಲಿ ಹೆಚ್ಚು. ಇದನ್ನು ಸೇವಿಸುವುದರಿಂದ, ನಿಮ್ಮ ಹೊಟ್ಟೆಯು ದೀರ್ಘಕಾಲದವರೆಗೆ ತುಂಬಿರುತ್ತದೆ ಮತ್ತು ನಿಮಗೆ ಹಸಿವು ಕಡಿಮೆಯಾಗಿದೆ. ಈ ಮೂಲಕ ಜಂಕ್ ಫುಡ್ ಸೇವನೆಯನ್ನು ಮಿತಗೊಳಿಸಿ, ನಿಮ್ಮ ತೂಕವನ್ನು ನಿಯಂತ್ರಣದಲ್ಲಿಡಲು ಹಾಗೂ ಕಳೆದುಕೊಳ್ಳಲು ಸಹಾಯ ಮಾಡುವುದು.

ದೇಹವನ್ನು ಹೈಡ್ರೇಟ್ ಆಗಿಡುವುದು:

ಚೀನಿಕಾಯಿ ಸೇವನೆಯಿಂದ ನಿಮ್ಮ ದೇಹದಲ್ಲಿ ನೀರಿನ ಕೊರತೆಯನ್ನು ನೀಗಿಸಿಕೊಳ್ಳಬಹುದು. ಬೇಸಿಗೆ ಕಾಲದಲ್ಲಿ ದೇಹವನ್ನು ಎಷ್ಟು ಹೈಡ್ರೇಟ್ ಆಗಿಟ್ಟುಕೊಂಡರೂ ಸಾಲದು, ಬಿಸಿಲಿನ ತಾಪಕ್ಕೆ ನಿರ್ಜಲೀಕರಣ ಉಂಟಾಗುವುದು ಸಾಮಾನ್ಯ. ಆದ್ದರಿಂದ ನಿಮ್ಮ ಆಹಾರದಲ್ಲಿ ಈ ಚೀನಿಕಾಯಿಯನ್ನು ಸೇರಿಸಲು ಪ್ರಯತ್ನಿಸಿ. ಇದು ನಿಮ್ಮ ದೇಹವನ್ನು ಹೈಡ್ರೇಟ್ ಆಗಿಡುವುದಲ್ಲದೇ, ಯಾವಾಗಲೂ ಉಲ್ಲಾಸದಾಯಕವಾಗಿರಲು ಸಹಾಯ ಮಾಡುವುದು.

ರಕ್ತದಲ್ಲಿನ ಸಕ್ಕರೆ ನಿಯಂತ್ರಣ:

ಚೀನಿಕಾಯಿ ಮಧುಮೇಹ ಇರುವವರಿಗೆ ಬಹಳ ಒಳ್ಳೆಯದು. ಇದರ ಸೇವನೆಯಿಂದ ದೇಹದ ಇನ್ಸುಲಿನ್ ಅನ್ನು ನಿಯಂತ್ರಿಸಬಹುದು. ಈ ಮೂಲಕ ನಿಮ್ಮ ದೇಹದಲ್ಲಿನ ರಕ್ತದಲ್ಲಿನ ಸಕ್ಕರೆಯನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಡಯಾಬಿಟಿಸ್ ಸಮಸ್ಯೆ ಇರುವವರು ಈ ಚೀನಿಕಾಯಿಯನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದು ಉತ್ತಮವಾದ ಆಯ್ಕೆಯಾಗಿದೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು:

ಇತ್ತೀಚಿನ ದಿನಗಳಲ್ಲಿ ರೋಗ ನಿರೋಧಕ ಶಕ್ತಿಯ ಅವಶ್ಯಕತೆ ಎಷ್ಟಿದೆ ಎಂಬುದು ಎಲ್ಲರಿಗೂ ಚೆನ್ನಾಗಿ ತಿಳಿದಿದೆ. ಅದೇ ರೀತಿ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳಲು ಚೀನಿಕಾಯಿಯನ್ನು ನಿಮ್ಮ ಆಹಾರದ ಭಾಗವಾಗಿಸಿ. ಇದರಲ್ಲಿ ವಿಟಮಿನ್-ಸಿ, ಕಬ್ಬಿಣ, ಮೆಗ್ನೀಸಿಯಮ್, ಥಯಾಮಿನ್, ರೈಬೋಫ್ಲಾವಿನ್ ಮತ್ತು ಸತು ಇರುವುದರಿಂದ, ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸಲು ಬಹಳ ಸಹಕಾರಿಯಾಗಿದೆ.

ರಕ್ತಹೀನತೆ ತಡೆಯುವುದು:

ಕಬ್ಬಿಣದ ಕೊರತೆಯಿಂದ ಉಂಟಾಗುವ ರಕ್ತಹೀನತೆಯನ್ನು ಗುಣಪಡಿಸಲು ಚೀನಿಕಾಯಿ ಸೇವನೆಯು ಸಹಾಯ ಮಾಡುತ್ತದೆ. ಇದಲ್ಲದೆ, ಹೀರೆಕಾಯಿ ವಿಟಮಿನ್-ಬಿ 6 ನಲ್ಲಿ ಸಮೃದ್ಧವಾಗಿದೆ, ಇದು ಕಬ್ಬಿಣದ ಜೊತೆಗೆ ದೇಹದಲ್ಲಿನ ಕೆಂಪು ರಕ್ತ ಕಣಗಳನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಚರ್ಮಕ್ಕೆ ಪ್ರಯೋಜನಕಾರಿ:

ಆರೋಗ್ಯಕರ ಚರ್ಮದ ರಹಸ್ಯವು ಹೊಟ್ಟೆಯಲ್ಲಿ ಅಡಗಿದೆ ಎಂಬುದು ಸುಳ್ಳಲ್ಲ. ನಾವು ಏನು ಸೇವಿಸುತ್ತೀವೋ, ಅದು ಮುಖದಲ್ಲಿ ಗೋಚರವಾಗುವುದು. ಹೊಟ್ಟೆಯಲ್ಲಿ ಸ್ವಲ್ಪ ಅಡಚಣೆಯು ನಿಮ್ಮ ಮುಖದ ಮೇಲೆ ದದ್ದು, ಮೊಡವೆ, ನಿರ್ಜೀವ ಚರ್ಮದಂತಹ ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು. ಚೀನಿಕಾಯಿ ಹೊಟ್ಟೆಗೆ ತುಂಬಾ ಪ್ರಯೋಜನಕಾರಿ. ವಾರದಲ್ಲಿ ಎರಡರಿಂದ ಮೂರು ಬಾರಿ ಇದನ್ನು ಸೇವಿಸುವುದರಿಂದ ಹೊಟ್ಟೆ ಸ್ವಚ್ಛವಾಗಿರುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ನನ್ನ ತಪ್ಪು ಏನೂ ಇಲ್ಲ,

Sat Apr 23 , 2022
ಶಿವಮೊಗ್ಗ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ನನ್ನ ತಪ್ಪು ಏನೂ ಇಲ್ಲ, ಒಂದು ಪರ್ಸೆಂಟ್ ನನ್ನ ತಪ್ಪಿದ್ದರೂ ಶಿಕ್ಷೆಯಾಗಲಿ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಪ್ರಕರಣದಲ್ಲಿ ನನ್ನ ತಪ್ಪಿಲ್ಲ. ನಾನು ಆರೋಪ ಮುಕ್ತನಾಗುತ್ತೇನೆ. ಸಂತೋಷ್ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಯುತ್ತಿದೆ. ಅಧಿಕಾರಿಗಳು ಎಲ್ಲಾ ರೀತಿಯಲ್ಲಿಯೂ ತನಿಖೆ ನಡೆಸಲಿದ್ದಾರೆ ಎಂದರು. ಪ್ರಕರಣದಲ್ಲಿ ನಾನು ನಿರ್ದೋಷಿಯಾಗಿ ಹೊರಬರುತ್ತೇನೆ. ನನ್ನ ವಿರುದ್ಧದ ಆರೋಪ ಸುಳ್ಳು. ತನಿಖೆ […]

Advertisement

Wordpress Social Share Plugin powered by Ultimatelysocial