ಬಾಹ್ಯಾಕಾಶ ನಿಲ್ದಾಣ ಪ್ರವೇಶಿಸಿದ ಗಗನಯಾತ್ರಿಗಳು : ಚೀನಾ

ಬೀಜಿಂಗ್‌: ಬಾಹ್ಯಾಕಾಶ ನೌಕೆ ‘ಶೆನ್‌ಶಾವ್‌-13’ನ ಯಶಸ್ವಿ ಉಡಾವಣೆಯ ಗಂಟೆಗಳ ನಂತರ ಮಹಿಳೆ ಸೇರಿ ಮೂವರು ಗಗನಯಾತ್ರಿಗಳು ಶನಿವಾರ ಬಾಹ್ಯಾಕಾಶ ನಿಲ್ದಾಣ ‘ಟಿಯಾನ್ಹೆ’ ಪ್ರವೇಶಿಸಿದ್ದಾರೆ ಎಂದು ಚೀನಾ ಬಾಹ್ಯಾಕಾಶ ಸಂಸ್ಥೆ ಹೇಳಿದೆ.astroಗಳಾದ ಝೈ ಜಿಗಾಂಗ್‌, ವಾಂಗ್‌ ಯಾಪಿಂಗ್‌ ಮತ್ತು ಯೆ ಗುವಾಂಗ್ಫು ಅವರು ನಿರ್ಮಾಣ ಹಂತದಲ್ಲಿರುವ ಬಾಹ್ಯಾಕಾಶ ನಿಲ್ದಾಣದ ರೇಡಿಯಲ್‌ ಪೋರ್ಟಲ್‌ ಅನ್ನು ಯಶಸ್ವಿಯಾಗಿ ಜೋಡಿಸಿದರು ಎಂದೂ ಸಂಸ್ಥೆ ಹೇಳಿದೆ.

ಬಾಹ್ಯಾಕಾಶ ನಿಲ್ದಾಣದ ನಿರ್ಮಾಣವನ್ನು ಪೂರ್ಣಗೊಳಿಸಲು ಗಗನಯಾತ್ರಿಗಳು ಆರು ತಿಂಗಳ ಕಾಲ ಇಲ್ಲಿ ಉಳಿಯಲಿದ್ದಾರೆ. ಚೀನಾ ಇತಿಹಾಸದಲ್ಲೇ ಇದು ಸುದೀರ್ಘ ಅವಧಿಯ ಮಾನವಸಹಿತ ಯೋಜನೆಯಾಗಿದೆ. ವಾಂಗ್‌ ಅವರು ಚೀನಾ ಬಾಹ್ಯಾಕಾಶಕ್ಕೆ ಭೇಟಿ ನೀಡಿದ ಮೊದಲ ಚೀನಿ ಮಹಿಳಾ ಗಗನಯಾತ್ರಿ ಎನಿಸಿಕೊಂಡಿದ್ದಾರೆ.ಶನಿವಾರ ನಸುಕಿನ ಜಾವ ಉಡಾವಣೆಗೊಂಡ ಬಾಹ್ಯಾಕಾಶ ನೌಕೆಯು ಕಕ್ಷೀಯ ಸ್ಥಿತಿಯನ್ನು ಪೂರ್ಣಗೊಳಿಸಿದ ನಂತರ, ‘ಟಿಯಾನ್ಹೆ’ ಬಾಹ್ಯಾಕಾಶ ನಿಲ್ದಾಣದಲ್ಲಿ ಇಳಿಯಿತು.ಇಡೀ ಪ್ರಕ್ರಿಯೆಯು ಸುಮಾರು 6.50 ಗಂಟೆ ಸಮಯ ತೆಗೆದುಕೊಂಡಿತು ಎಂದು ಚೀನಾ ಮಾನವಸಹಿತ ಬಾಹ್ಯಾಕಾಶ ಸಂಸ್ಥೆ (ಸಿಎಂಸಿಎ) ಹೇಳಿದೆ.

Please follow and like us:

Leave a Reply

Your email address will not be published. Required fields are marked *

Next Post

19 ತಿಂಗಳ ಬಳಿಕ ದಾಂಡೇಲಿಯಲ್ಲಿ ಮತ್ತೆ ಆರಂಭವಾದ ರಾಫ್ಟಿಂಗ್

Sat Oct 16 , 2021
ಬೆಂಗಳೂರು: 19 ತಿಂಗಳ ಕೋವಿಡ್ (Covid )ಪ್ರೇರಿತ ವಿರಾಮದ ನಂತರ, ಕಳೆದ ವಾರ ರಾಜ್ಯಸರ್ಕಾರ ಜಂಗಲ್ ಲಾಡ್ಜ್ ಮತ್ತು ರಿಸಾರ್ಟ್ಸ್ ಲಿಮಿಟೆಡ್ (ಜೆಎಲ್ ಆರ್) ಅಂತಿಮವಾಗಿ ದಾಂಡೇಲಿ ಬಳಿಯ ಗಣೇಶ ಗುಡಿಯಲ್ಲಿ ಬಹು ಬೇಡಿಕೆಯ ನದಿ ರಾಫ್ಟಿಂಗ್ ಜಲ ಕ್ರೀಡೆಯನ್ನು ಪುನರಾರಂಭಿಸಿತು. 11 ಕಿ.ಮೀ ರಾಫ್ಟಿಂಗ್ (rafting) ಪ್ರವಾಸವು ಎಂಟು ರಾಪಿಡ್ ಗಳನ್ನು ಹೊಂದಿದೆ. ಪಶ್ಚಿಮ ಘಟ್ಟಗಳ ಕಾಳಿ ನದಿಯಲ್ಲಿ ಇರುವ ಪ್ರವಾಸಿ ಕೇಂದ್ರವಾದ ಗಣೇಶ-ಗುಡಿಯಿಂದ ತೆಪ್ಪಗಳು ಹೊರಟು ಮೌಲಂಗಿಯನ್ನು ತಲುಪುತ್ತವೆ. […]

Advertisement

Wordpress Social Share Plugin powered by Ultimatelysocial