ಐಎಂಎ ಪ್ರಕರಣದಲ್ಲಿ ರೋಷನ್ ಬೇಗ್ ಅರೆಸ್ಟ್

ಬಹುಕೋಟಿ ಹಣ ವಂಚನೆ ಐಎಂಎ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಲ್ಲಿ ರೋಷನ್ ಬೇಗ್ ರನ್ನ ವಶಕ್ಕೆ ಪಡೆಯಲಾಗಿದೆ…ಎಸ್ ಇದರ ಕುರಿತಂತೆ ಇನ್ನಷ್ಟು ಮಾಹಿತಿಯನ್ನ ನೋಡೋಣ ಈ ಸ್ಟೋರಿಯಲ್ಲಿ .ಬಹುಕೋಟಿ ಹಣ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂದೆ ಮಾಜಿ ಸಚಿವ ರೋಷನ್ ಬೇಗ್ರನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಜೊತೆಗೆ ಕೆಲವೊಂದಿಷ್ಟು ರಾಜಕೀಯ ವ್ಯಕ್ತಿಗಳು ಹೆಸರುಗಳು ಹೊರಬಂದಿದ್ದಾವೆ ಎನ್ನಲಾಗ್ತಿದೆ.ರೋಷನ್ ಬೇಗ್ ರನ್ನ ಬೆಳಗ್ಗೆಯೆ ಸಿಬಿಐ ವಿಚಾರಣೆಗೆ ಒಳಪಡಿಸಿದ್ದರು ಇದಾದ ನಂತರ ಹೆಚ್ಚಿನ ವಿಚಾರಣೆಗಾಗಿ ಅವರನ್ನ ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗ್ತಿದೆ…ನ್ಯಾಯಲಯದ ಮುಂದೆ ಹಾಜರುಪಡಿಸಿ 14 ದಿನಗಳ ಕಾಲ ಸಿಬಿಐ ವಶಕ್ಕೆ ಪಡೆದುಕೊಂಡಿದ್ದಾರೆ .
ಐಎಂಎ ಸಂಸ್ಥೆಯ ಮಾಲಿಕ ಮನ್ಸೂರ್ ಖಾನ್ ನನ್ನಿಂದ ರೋಷನ್ ಬೇಗ್ ಹಣ ಪಡೆದುಕೊಂಡಿದ್ದರು ಹಣವನ್ನ ವಾಪಸ್ ಕೇಳಿದಾಗ ರೌಡಿಗಳಿಂದ ನನಗೆ ಜೀವ ಬೆದರಿಕೆ ಹಾಕಿಸಿದ್ದಾಋಎ ಅಂತ ಆರೋಪವನ್ನ ಮಾಡಿದ್ದರು ಒಟ್ಟಾರೆಯಾಗಿ ಮನ್ಸೂರ್ ಖಾನ್ ನಿಂದ 200 ಕೋಟಿಯಷ್ಟು ಹಣವನ್ನ ರೋಷನ್ ಬೇಗ್ ಪಡೆದಿದ್ದರು ಎನ್ನವ ಆರೋಪ ಎಸ್ಐಟಿ ವಿಚಾರಣೆ ವೇಳೆಯು ಕೇಳಿಬಂದಿತ್ತು.

ಅಕ್ಟೋಬರ್ ನಲ್ಲಿ ಮನ್ಸೂರ್ ಖಾನ್ ಗೆ ಷರತ್ತು ಬದ್ದ ಜಾಮಿನನ್ನ ಕೋರ್ಟ್ ನೀಡಿತ್ತು, ಮನ್ಸೂರ್ ಮಾಡಿದ್ದ ಆರೋಪಕ್ಕೆ ಕೆಲವೊಂದಿಷ್ಟು ಮಾಹಿತಿಗಳು ದೊರೆತ ನಂತರ ರೋಷನ್ ಬೇಗ್ರನ್ನ ವಿಚಾರನೆಗೆ ಒಳಪಡಿಸಿ ನಂತರ ವಶಕ್ಕೆ ಪಡೆಯಲಾಗಿದೆ ಅಂತಿದ್ದಾವೆ ಮೂಲಗಳು.ಫೆಬ್ರವರಿಯಲ್ಲಿ ಈ ಕೇಸನ್ನ ರಾಜ್ಯ ಸರ್ಕಾರ ಸಿಬಿಐಗೆ ವಹಿಸಿತ್ತು…..ರೋಚಕತೆಯನ್ನ ಕೂಡ ಈ ಕೇಸ್ ಪಡೆದ ನಂತರದ ಬೆಳವಣಿಗೆಯಲ್ಲಿ ರಾಜಕೀಯ ವ್ಯಕ್ತಗಳ ಹಾಗು ಸಮಾಜದುದ್ದಾರಕರು ಅಂತಾ ಕರೆಸಿಕೊಂಡವರ ಹೆಸರು ಕೇಳಿ ಬರ್ತಾಯಿತ್ತು ಹಾಗಾಗಿ ಈಗ ರೋಷನ್ ಬೇಗ್ ವಿಚಾರಣೆ ಅಥವಾ ಬಂಧನ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ

ಇದನ್ನು ಓದಿ:ಅನಿರ್ದಿಷ್ಟ ಮುಷ್ಕರ ಹಾಗೂ ಭಾರತ್ ಬಂದ್ ಗೆ ಕರೆ ನೀಡಿದ್ದ ರೈತರು

 

 

Please follow and like us:

Leave a Reply

Your email address will not be published. Required fields are marked *

Next Post

ನಗರ ಪೊಲೀಸ್ ಕಟ್ಟಡ ಉದ್ಘಾಟನೆ: ಸಿಎಂ ಬಿಎಸ್ ವೈ ಯಿಂದ ಉದ್ಘಾಟನೆ

Tue Nov 24 , 2020
ಅತ್ಯಂತ ಅದ್ಭುತವಾಗಿ ನಿರ್ಮಾಣ ಮಾಡಲಾಗಿರುವ ನೂತನ ಪೋಲಿಸ್ ಆಯುಕ್ತರ ಕಚೇರಿಯನ್ನು ಇಂದು ಸಿಎಂ ಯಡಿಯೂರಪ್ಪ ಉದ್ಘಾಟನೆ ಮಾಡಿದ್ದಾರೆ. ಮೈಸೂರು ಜಿಲ್ಲೆಯ ಪ್ರವಾಸ ಕೈಗೊಂಡಿರುವ  ಸಿಎಂ‌ ಯಡಿಯೂರಪ್ಪ ,ವಿಮಾನದ ಮೂಲಕ ಮೈಸೂರಿಗೆ ಆಗಮಿಸಿದರು. ನಜರ್ ಬಾದ್​​ನ ಬ್ಯಾಂಡ್ ಹೌಸ್ ಮುಂಭಾಗದಲ್ಲಿ ನಿರ್ಮಾಣವಾಗಿರುವ ನೂತನ ನಗರ ಪೋಲಿಸ್ ಆಯುಕ್ತರ ಕಚೇರಿಯಲ್ಲಿ ಉದ್ಘಾಟನೆ ಮಾಡಿದ್ದಾರೆ. ಇದನ್ನು ಓದಿ : ದೇವರ ಮನೆಯಲ್ಲಿ ಹೆಡೆ ಎತ್ತಿ ಬುಸುಗುಟ್ಟಿದ ನಾಗಪ್ಪ. Please follow and like us:

Advertisement

Wordpress Social Share Plugin powered by Ultimatelysocial