ಸಿಎಂ ಬಸವರಾಜ್​​ ಬೊಮ್ಮಾಯಿಗೆ ಮಂಡ್ಯ ಉಸ್ತುವಾರಿ ದೊಡ್ಡ ಮಂಡೆ ಬಿಸಿ ತಂದಿಟ್ಟಿದೆ.

 

 

 

ಸಿಎಂ ಬಸವರಾಜ್​​ ಬೊಮ್ಮಾಯಿಗೆ ಮಂಡ್ಯ ಉಸ್ತುವಾರಿ ದೊಡ್ಡ ಮಂಡೆ ಬಿಸಿ ತಂದಿಟ್ಟಿದೆ. ಗೋಬ್ಯಾಕ್​​​ ಅಭಿಯಾನದಿಂದಲೇ ಸಚಿವ ಆರ್. ಅಶೋಕ್​, ತಮ್ಮ ಜವಾಬ್ದಾರಿಯಿಂದ ಕೆಳಗಿಳಿದಿದ್ರು. ಈಗ ತೆರವಾಗಿರೋ ಸ್ಥಾನಕ್ಕೆ ಯಾರನ್ನ ನೇಮಿಸಬೇಕೆಂಬುವುದೇ ಸಿಎಂಗೆ ಗೊಂದಲವಾಗಿತ್ತು.

ಇದರ ಮಧ್ಯೆ ಮಂಡ್ಯ ಕದನ ಭೂಮಿಗೆ ಉಪಚುನಾವಣಾ ಚಾಣಕ್ಯನ ಎಂಟ್ರಿಯಾಗಿದೆ. ಮಂಡ್ಯ ರಣ ರಣ ರಾಜಕಾರಣಕ್ಕೆ ಹೆಸರುವಾಸಿ.

ಗೌಡರ ಪಾರುಪತ್ಯದಲ್ಲಿ ನಿಂತು ರಾಜಕಾರಣ ಮಾಡೋದು ಅಷ್ಟು ಸುಲಭವಲ್ಲ. ಹೊಂದಾಣಿಕೆ, ಒಪ್ಪಂದ ರಾಜಕಾರಣ ಇಲ್ಲಿನ ಪಕ್ಷಾಭಿಮಾನಿಗಳಿಗೆ ಹಳಸಿದ ಊಟ. ಇಲ್ಲಿನ ರಾಜಕಾರಣಕ್ಕೆ ಜಿದ್ದಿನ ಬಾಡೂವೇ ಅನಿವಾರ್ಯ. ಆದ್ರೆ, ಕಳೆದ ತಿಂಗಳಷ್ಟೇ ನೇಮಕವಾಗಿದ್ದ ಆರ್​​.ಅಶೋಕ್​ಗೆ ಈ ಹೊಂದಾಣಿಕೆ ಆಟವೇ ಮುಳುವಾಯ್ತು. ಮಂಡ್ಯದ ಹೊಣೆ ಹೊತ್ತಿದ್ದ ಸಾಮ್ರಾಟ್​​​, ತಿಂಗಳೊಪ್ಪತ್ತರಲ್ಲೆ ತಂಗಳಾಗಿ ಪದ್ಮನಾಭನಗರಕ್ಕೆ ರಿಟರ್ನ್​​ ಆಗಿದ್ರು. ಅಂದಿನಿಂದ ಈಗಿನವರೆಗೂ ಸಿಎಂ ಬೊಮ್ಮಾಯಿಗೆ ಸಕ್ಕರೆ ನಾಡಿನ ಉಸ್ತುವಾರಿ ದೊಡ್ಡ ತಲೆ ಬಿಸಿ ತಂದಿಟ್ಟಿದೆ.

ಸಿಎಂ ಬೊಮ್ಮಾಯಿಗೆ ಮಂಡ್ಯ ಉಸ್ತುವಾರಿಯದ್ದೇ ಟೆನ್ಷನ್!

ಸಕ್ಕರೆ ನಾಡಿನ ಉಸ್ತಾಬರಿ ಒಲ್ಲೆ ಎಂದ ನಾರಾಯಣಗೌಡ

ಮಂಡ್ಯ ಉಸ್ತುವಾರಿ ಗೊಂದಲದಲ್ಲಿರೋ ಸಿಎಂ ಬೊಮ್ಮಾಯಿ ವಿರುದ್ಧವೇ ಸಚಿವ ನಾರಾಯಣಗೌಡ ಬೇಸರ ಹೊರಹಾಕಿದ್ದಾರೆ. ಮೂರ್ಮೂರು ತಿಂಗಳಿಗೆ ಉಸ್ತುವಾರಿ ಚೇಂಜ್​ ಮಾಡಿದ್ರೆ ಹೇಗೆ? ನನಗೆ ಶಿವಮೊಗ್ಗ ಇನ್ಚಾರ್ಜ್ ಇದೆ, ಮಂಡ್ಯ ಉಸ್ತುವಾರಿ‌ ಕೊಟ್ರೆ ನಾನು ಒಪ್ಪೊದಿಲ್ಲ ಅಂತ ನೇರವಾಗಿಯೇ ಹೇಳಿದ್ದಾರೆ. ಪರೋಕ್ಷವಾಗಿಯೇ ಸಚಿವ ಗೋಪಾಲಯ್ಯಗೆ ಮಂಡ್ಯ ಉಸ್ತುವಾರಿ ನೀಡಲು ನಾರಾಯಣಗೌಡ ಬ್ಯಾಟಿಂಗ್​ ಮಾಡಿದ್ದಾರೆ. ಆದ್ರೆ ಈ ಗೊಂದಲ ನಡುವೆ, ಸಕ್ಕರೆ ನಾಡಲ್ಲಿ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಾಲಿಟ್ಟಿದ್ದಾರೆ.

ಚುನಾವಣಾ ಕಾಲದಲ್ಲೇ ಮಂಡ್ಯದಲ್ಲಿ ವಿಜಯೇಂದ್ರ ಆಯಕ್ಟಿವ್​

ಮಂಡ್ಯ ಮುಖಂಡರು ಮತ್ತು ಟಿಕೆಟ್ ಆಕಾಂಕ್ಷಿಗಳೊಂದಿಗೆ ಸಭೆ

ಮಂಡ್ಯ ಉಸ್ತುವಾರಿ ಗೊಂದಲದ ಮಧ್ಯೆ, ಬಿ.ವೈ. ವಿಜಯೇಂದ್ರ ನಡೆ ಕುತೂಹಲ ಕೆರಳಿಸಿದೆ. ಎಲೆಕ್ಷನ್ ಹತ್ತಿರವಾಗುತ್ತಿದ್ದಂತೆ ಮಂಡ್ಯ ಭಾಗದಲ್ಲಿ ವಿಜಯೇಂದ್ರ ಆಯಕ್ಟೀವ್​ ಆಗಿದ್ದಾರೆ. ಫೆಬ್ರವರಿ 21 ಮತ್ತು 22 ರಂದು ವಿಜಯೇಂದ್ರ ಮಂಡ್ಯ ಪ್ರವಾಸ ಕೈಗೊಳ್ಳಲಿದ್ದಾರೆ. 21ರಂದು ಮೇಲುಕೋಟೆ ಕ್ಷೇತ್ರದಲ್ಲಿ ವಿಜಯೇಂದ್ರ ಪ್ರವಾಸ ಮಾಡಲಿದ್ದಾರೆ. ಈ ವೇಳೆ ಶಿವಕುಮಾರ ಸ್ವಾಮೀಜಿ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಭಾಗಿಯಾಗಿ, ನಂತರ ಟಿಕೆಟ್ ಆಕಾಂಕ್ಷಿಗಳು, ಮುಖಂಡರೊಂದಿಗೆ ಗೌಪ್ಯ ಸಭೆ ಮಾಡಲಿದ್ದಾರೆ ಎನ್ನಲಾಗ್ತಿದೆ. 22ರಂದು ಬಿಜೆಪಿ ಯುವ ಮೋರ್ಚಾ ಸಮಾವೇಶದಲ್ಲಿ ವಿಜಯೇಂದ್ರ ಭಾಗಿಯಾಗೋ ಸಾಧ್ಯತೆ ಇದೆ.

ವಿಜಯೇಂದ್ರ ಮಂಡ್ಯ ಪ್ರವಾಸದ ಹೊತ್ತಲ್ಲೇ ಹೊಸದೊಂದು ಚರ್ಚೆ ಶುರುವಾಗಿದೆ. K.R ಪೇಟೆ ಬೈ ಎಲೆಕ್ಷನ್​​ನಂತೆ ವಿಜಯೇಂದ್ರ ಮಂಡ್ಯ ಉಸ್ತುವಾರಿ ತೆಗೆದುಕೊಂಡ್ರಾ ಎಂಬ ಚರ್ಚೆ ಹುಟ್ಟಿಕೊಂಡಿದೆ. ಒಟ್ಟಾರೆ, K.R ಪೇಟೆ ಬೈ ಎಲೆಕ್ಷನ್ ಮಾದರಿಯಲ್ಲೇ ಮಂಡ್ಯದಲ್ಲೂ ಚುನಾವಣೆ ಎದುರಿಸಲು ಸೈಲೆಂಟ್ ಆಗಿಯೇ ರಣತಂತ್ರ ರೂಪಿಸಲಾಗಿದೆ ಎನ್ನಲಾಗ್ತಿದೆ. ಬಿಎಸ್​ವೈ ಮಾರ್ಗದರ್ಶನದಲ್ಲಿ ದಳ ಕೋಟೆ ಛಿದ್ರ ಮಾಡಲು ಕಮಲ ಪಡೆ ಪಕ್ಕಾ ಪ್ಲ್ಯಾನ್ ಮಾಡಿದ್ಯಾ ಅನ್ನೋ ಮಾತುಗಳು ಸಹ ಗುಲ್ಲೆದ್ದಿವೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಡಾ.ರಾಜ್ ಕುಮಾರ್ ಅವರಂತೆಯೇ ಇಂದು ನಿಧನರಾದ ಹಿರಿಯ ನಿರ್ದೇಶಕ ಭಗವಾನ್ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ.

Mon Feb 20 , 2023
  ಡಾ.ರಾಜ್ ಕುಮಾರ್ ಅವರಂತೆಯೇ ಇಂದು ನಿಧನರಾದ ಹಿರಿಯ ನಿರ್ದೇಶಕ ಭಗವಾನ್ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ. ಇದರಿಂದ ನಾಲ್ವರಿಗೆ ದೃಷ್ಟಿ ಬರಲಿದೆ. ಬೆಂಗಳೂರು: ಡಾ.ರಾಜ್ ಕುಮಾರ್ ಅವರಂತೆಯೇ ಇಂದು ನಿಧನರಾದ ಹಿರಿಯ ನಿರ್ದೇಶಕ ಭಗವಾನ್ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ. ಇದರಿಂದ ನಾಲ್ವರಿಗೆ ದೃಷ್ಟಿ ಬರಲಿದೆ. ಕಳದ ವರ್ಷ ಅಕಾಲಿಕ ಮರಣಕ್ಕೆ ತುತ್ತಾದ ಪುನೀತ್ ರಾಜಕುಮಾರ್ ಕೂಡ ನೇತ್ರದಾನ ಮಾಡಿದ್ದರು. ಈ ಮೂಲಕ ಅವರ ಅಭಿಮಾನಿಗಳಿಗೆ ಮಾದರಿ ಆಗಿದ್ದರು. […]

Advertisement

Wordpress Social Share Plugin powered by Ultimatelysocial