ಸಿಎಂ ಬಸವರಾಜ್ ಬೊಮ್ಮಾಯಿಯನ್ನು ನಾಯಿಗೆ ಹೋಲಿಸಿದ ವಿಚಾರ.

ನಾಯಿ ನಿಯತ್ತಿನ ಪ್ರಾಣಿ, ಒಂದು ತುತ್ತು ಅನ್ನ ಹಾಕಿದರೆ ಅದು ಜೀವನ ಪರಿಯಂತ ನಿಯತ್ತಿನಲ್ಲಿ ಇರುತ್ತೆ.

ನಿಯತ್ತು ಇಲ್ಲದೇ ಇರುವವರು ಕಾಂಗ್ರೆಸ್ ನವರು.

ಉಂಡು ಮನೆಗೆ ದ್ರೋಹ ಬಗೆಯುವವರು ಯಾರು ಎಂದು ಸಿದ್ದರಾಮಯ್ಯ ನವರಿಗೆ ಚೆನ್ನಾಗಿ ಗೊತ್ತಿದೆ

ಜನತಾದಳದಲ್ಲಿ ಇದ್ದು ಅದಕ್ಕೆ ದ್ರೋಹ ಬಗೆದವರು ಯಾರು.

ಪರಮೇಶ್ವರ್ ಎಲ್ಲಿ ಮುಖ್ಯಮಂತ್ರಿ ಆಗಿ ಬಿಡುತ್ತಾರೆ ಎಂದು ಅವರನ್ನು ಸೋಲಿಸಿದವರು ಯಾರು.

ಅನ್ನೊದನ್ನು ಸಿದ್ದರಾಮಯ್ಯ ನವರು ತಮ್ಮ ಆತ್ಮಕ್ಕೆ ಪ್ರಶ್ನೆ ಮಾಡಿಕೊಳ್ಳಲಿ.

ಆಗ ನಿಯತ್ತು ಯಾರಿಗೆ ಇದೆ ಯಾರಿಗೆ ಇಲ್ಲ ಎಂಬುದು ಬಹಳ ಸ್ಪಷ್ಟವಾಗುತ್ತೆ.

ತನಗೆ ಅಧಿಕಾರ ಇದ್ದರೆ ಎಲ್ಲವೂ ಸರಿ, ಇಲ್ಲದಿದ್ದರೆ ನನ್ನದು ಬಂಡಾಯ ಎಂಬ ಮನಸ್ಥಿತಿಯನ್ನು ನಿಯತ್ತಿಗೆ ಹೋಲಿಕೆ ಮಾಡಲು ಆಗುವುದಿಲ್ಲ.

ದೇಶ ಕಾಯುವ ಜನ, ರಾಜ್ಯದ ಹಿತ ಕಾಯುವ ಜನರನ್ನು ನಾಯಿಗೆ ಹೋಲಿಸಿದರೆ ಅದನ್ನು ನಾವು ಸ್ವೀಕಾರ ಮಾಡುತ್ತೇವೆ.

ಅತೀ ಹೆಚ್ಚು ರೈಲ್ವೆಗೆ ಹಣ ಕೊಟ್ಟಿದ್ದು, ಅತೀ ಹೆಚ್ಚು ನ್ಯಾಷನಲ್ ಹೈವೆಗೆ ಹಣ ಕೊಟ್ಟಿದ್ದು, ಅದು ಕೇಂದ್ರದಲ್ಲಿ ಇರುವ ನರೇಂದ್ರ ಮೋದಿಯವರ ಸರಕಾರ.

ಕರ್ನಾಟಕಕ್ಕೆ ಅತೀ ಹೆಚ್ಚು ಅನುದಾನ ಕೊಟ್ಟಿರುವುದು ಬಿಜೆಪಿ ಸರಕಾರ.

ರಾಜ್ಯದ, ದೇಶದ ಹಿತಾಸಕ್ತಿ ಬಂದಾಗ ನಾವೆಲ್ಲಾ ರಾಜಾಹುಲಿಗಳೇ.

ದೇಶ ಕಾಯುವ ವಿಷಯ ಬಂದಾಗ ನಾವೆಲ್ಲಾ ನಿಯತ್ತಿನ ನಾಯಿಗಳೇ.

ದೇವನಹಳ್ಳಿಯಲ್ಲಿ ಸಿಟಿ ರವಿ ಹೇಳಿಕೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬದುಕಿದ್ದಾಗ ಸಾವಿರಾರು ಜೀವಗಳಿಗೆ ನೆರವಾದ ಅಪ್ಪು

Fri Jan 6 , 2023
ಪುನೀತ್ ರಾಜ್‌ಕುಮಾರ್ ಇದ್ದಾಗಲೂ ಸಾವಿರಾರು ಜನರಿಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ನೆರವಾಗಿದ್ದರು. ಅಪ್ಪು ಅಗಲಿದ ಬಳಿಕವೂ ತಮ್ಮ ಸೇವೆ ಮುಂದುರೆಸಿದ್ದಾರೆ.ಅಪ್ಪು, ಸ್ವರ್ಗದಿಂದಲೂ ಪರೋಕ್ಷವಾಗಿ ತಮ್ಮ ಸೇವೆ ಮುಂದುವರೆಸಿದ್ದಾರೆ, ಇದಕ್ಕೆ ತಾಜಾ ಉದಾಹರಣೆಯೊಂದು ಇಲ್ಲಿದೆ, ಇಂದು (ಜನವರಿ 06) ಹಾವೇರಿಯಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದಲ್ಲಿ ವ್ಯಕ್ತಿಯೊಬ್ಬರು ಕೇವಲ ಒಂದು ಗಂಟೆಯಲ್ಲಿ ನೂರು ಅಪ್ಪು ಚಿತ್ರಗಳನ್ನು ಮಾರಾಟ ಮಾಡಿದ್ದಾರೆ.ಆ ಮೂಲಕ ತಮ್ಮ ತುತ್ತಿನ ಚೀಲ ತುಂಬಿಸಿಕೊಂಡಿದ್ದಾರೆ.ಇಂದು ಬೆಳಿಗ್ಗೆ ಹಾವೇರಿ ಸಮ್ಮೇಳನ ಉದ್ಘಾಟನೆಯಾಗಿದ್ದು ಮಳಿಗೆಗಳು ಸಹ […]

Advertisement

Wordpress Social Share Plugin powered by Ultimatelysocial