ಚಳಿಗಾಲದಲ್ಲಿ ನಮ್ಮ ಆರೋಗ್ಯವನ್ನು ಕಾಪಾಡುವ ಆಹಾರ ಪದ್ಧತಿಗಳು

 

 

ನಮ್ಮ ಭಾರತೀಯ ಕಾಲಮಾನದ ಪ್ರಕಾರ ನಾವು ನಮ್ಮ ದೇಹವನ್ನು ಬೆಚ್ಚಗಿಡಲು ಬಯಸುವ ಕಾಲ ಎಂದರೆ ಅದು ಚಳಿಗಾಲ. ಈ ಕಾಲದಲ್ಲಿ ಬಹಳಷ್ಟು ಹಸಿವು ಕೂಡ ಆಗುತ್ತದೆ. ಆದ್ದರಿಂದ ನಾವು ಸಾಮಾನ್ಯವಾಗಿ ಎಣ್ಣೆಯಲ್ಲಿ ಕರಿದ ಆಹಾರವನ್ನು ಸೇವಿಸುತ್ತೇವೆ ಮತ್ತು ಚಹಾ, ಕಾಫಿ ಕುಡಿಯುತ್ತೇವೆ. ನಮಗೆಲ್ಲ ನಮ್ಮ ಆಹಾರ ಪದ್ಧತಿಯ ಬಗ್ಗೆ ತಿಳಿದಿದ್ದರು ಕೂಡಾ ನಾವು ಪಾಶ್ಚಿಮಾತ್ಯ ಆಹಾರ ಪದ್ಧತಿಗಳಿಂದ ಪ್ರಭಾವಿತರಾಗಿ ನಾವು ನಮ್ಮ ಆಹಾರ ಪದ್ಧತಿಗಳನ್ನು ಮರೆತು ಬಿಟ್ಟಿದ್ದೇವೆ. ಚಳಿಗಾಲದಲ್ಲಿ ನಮಗೆ ಕೀಲುನೋವು, ಚರ್ಮರೋಗ, ಕುದಲು ಉದುರುವಿಕೆ, ಕೈಕಾಲು ಉಬ್ಬು (ಬಾಹು)ವುದು ಹೆಣ್ಣು ಮಕ್ಕಳ ಸಮಸ್ಯೆಗಳು ಹೆಚ್ಚಾಗುವುದರಿಂದ ಈ ಎಲ್ಲಾ ಸಮಸ್ಯೆಗಳನ್ನು ವಿರುದ್ಧ ಹೋರಾಡಲು ನಾವು ಉತ್ತಮವಾದ ಆಹಾರವನ್ನು ಸೇವಿಸುವುದು ತುಂಬಾ ಅವಶ್ಯಕವಾಗಿದೆ.
ನಾವು ಚಳಿಗಾಲದಲ್ಲಿ ಸೇವಿಸಬೇಕಾದ ಉತ್ತಮ ಆಹಾರಗಳು

  1. ಸಜ್ಜೆ : ನಾವು ಸಾಂಪ್ರಾದಾಯಿಕವಾಗಿ ತಯ್ಯಾರಿಸುವ ರೊಟ್ಟಿ, ಕಿಚಡಿ, ಲಡ್ಡು ಅಥವಾ ಥಾಲಿ ಪಿಠಗಳಲ್ಲಿ ಫೈಬರ ವಿಟಮಿನ್ ಬಿ ಕಬ್ಬಿಣ ಮತ್ತು ಖನಿಜಗಳಿಂದ ಸಮೃದ್ಧವಾಗಿರುವ ಆಹಾರಗಳನ್ನು ಸೇವಿಸುವುದರಿಂದ ಕೂದಲು ಉದುರಿವಿಕೆ ಮತ್ತು ಸುಸ್ಕತೆಯನ್ನು ತಡೆಯಲು ಸಹಕಾರಿಯಾಗಿ ಮಧುಮೇಹಳಿಗೆ ಅತ್ಯಂತ ಉಪಯುಕ್ತವಾದ ಆಹಾರವಾಗಿದೆ.
  2. ಅಂಟು : ಸಾಪ್ರಾದಾಯಿಕವಾಗಿ ಹಲವು ಬೀಜಗಳೊಂದಿಗೆ ಬೆಲ್ಲ ಮತ್ತು ತುಪ್ಪವನ್ನು ಸೇರಿಸಿ ಲಡ್ಡುವಾಗಿ ತಯ್ಯಾರಿಸಲಾಗುತ್ತದೆ. ಈ ಅಂಟಿನ ಆಹಾರವು ಸಾಮಾನ್ಯವಾಗಿ ಚಳಿಗಾಲದಲ್ಲಿ ಋತುಚಕ್ರವನ್ನು ನಿಯಂತ್ರಿಸಲು ಹೆಚ್ಚಿನ ಶಕ್ತಿಯನ್ನು ಓದಗಿಸುತ್ತದೆ ಮತ್ತು ಕೀಲು ನೋವುಗಳನ್ನು ಕಡಿಮೆ ಮಾಡುತ್ತದೆ.
  3. ಹಸಿರು ತರಕಾರಿ : ನಾವು ಮಳೆಗಾಲದಲ್ಲಿ ತಿನ್ನಲಾಗದ ಎಲ್ಲಾ ರೀತಿಯ ಹಸಿರು ತರಕಾರಿಗಳನ್ನು ಸೇವಿಸಲು ಚಳಿಗಾಲವು ಅತ್ಯಂತ ಸೂಕ್ತವಾಗಿದೆ. ನಮಗೆ ಸ್ಥಳಿಯವಾಗಿ ದೊರೆಯುವ ಹಸಿರು ತರಕಾರಿಗಳಾದ ಪಾಲಕ, ಮೆಂತ್ಯ, ಬಟಾಣಿ ಮತ್ತು ತಾಜ ಕಾಳಗಳನ್ನು ಸೇವಿಸುವುರಿಂದ ನಮಗೆ ಪೈಟೋನ್ಯೂಟ್ರಿಯನ್ ವಿಟಮಿನ್ ಎಲ್ಲಾ ರೀತಿಯ ಪೆÇೀಷಕಾಂಶು ಮತ್ತು ನಾರಿನೌಂಶಗಳು ದೊರೆಯುತ್ತವೆ.
  4. ಬೇರು ತರಕಾರಿಗಳು : ಸಾಮಾನ್ಯವಾಗಿ ನಾವು ಸೇವಿಸುವ ಬೇರುಗಳುಳ್ಳ ತರಕಾರಿಗಳಾದ ಗಜರಿ (ಕ್ಯಾರೇಟ್), ಮುಲ್ಲಂಗಿ ಮತ್ತು ಬೀಟ್‍ರೋಟ್‍ಗಳು ನಮ್ಮ ದೇಹಕ್ಕೆ ಅತ್ಯಗತ್ಯವಾದ ಪೆÇೀಷಕಾಂಶಗಳು ಮತ್ತು ವಿಟಾಮಿನ್ ಬಿ ಮತ್ತು ಇ (ಇ) ಗಳನ್ನು ಓದಗಿಸುತ್ತದೆ. ನಾವು ಸೇವಿಸುವ ಆಹಾರವನ್ನು ಸರಿಯಾಗಿ ಜೀರ್ಣವಾಗಲು ಸಹಾಯ ಮಾಡುತ್ತದೆ ಮತ್ತು ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
  5. ಹಣ್ಣುಗಳು : ಅತ್ಯುತ್ತಮ ನೀರೋಧಕಗಳು ಮತ್ತು ಫೈಬರ್ ಪೆÇೀಷಕಾಂಶಗಳನ್ನು ಒದಗಿಸುವ ಸೇಬು, ಪೇರಲ್ (ಜಾಪಳ ಹಣ್ಣು ಮತ್ತು ಸಿತಾಫಲ ಮುಂತಾದ ಹಣ್ಣುಗಳು ಋತುವಿನಲ್ಲಿ ಕಾಲಕಾಲಕ್ಕೆ ದೊರೆಯುವ ಸ್ಥಳಿಯ ಹಣ್ಣುಗಳನ್ನು ಸೇವಿಸುವುದರಿಂದ ಉತ್ತಮವಾದ ಆಹಾರವನ್ನು ಕಾಪಾಡಿಕೊಳ್ಳಬಹುದು.6. ಎಳ್ಳು : ಸಾಂಪ್ರಾದಯಕವಾಗಿ ಚಕ್ಕಿ ಮತ್ತು ಲಡ್ಡುಗಳ ರೂಪಗಳಲ್ಲಿ ತಯ್ಯಾರಿಸಿ ಸೇವಿಸುವುದರಿಂದ ನಮ್ಮ ದೇಹಕ್ಕೆ
    ಫೈಬರ ಮತ್ತು ಕ್ಯಾಲಸಿಯಂ ಪೆÇೀಷಕಾಂಶಳು ದೊರೆಯುವುದರಿಂದ ನಮ್ಮ ದೇಹದ ಉಷ್ಣತೆಯನ್ನು ಹೆಚ್ಚಿಸಿ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಅದರ ಜೊತೆಗೆ ಕೋಲೆಸ್ಟ್ರಾಲ್ (ಬೊಜ್ಜು) ಕಡಿಮೆ ಮಾಡಿ
    ಜೀರ್ಣಕ್ರಿಯೆಗೆ ಸಾಹಾಯ ಮಾಡುತ್ತದೆ ಹಾಗೂ ನಮ್ಮ ಮೊಳೆಗಳಿಗೆ ಶಕ್ತಿಯನ್ನು ತುಂಬಿ ಚರ್ಮರೋಗ ಬರದ ಹಾಗೆ ರಕ್ಷಿಸಿ ಕೂದಲು ಉದುರುವುದನ್ನು ತಡೆಯುವ ಶಕ್ತಿ ಒದಗಿಸುತ್ತದೆ.
  6. ಕಡಲೆಕಾಯಿ : ನಮ್ಮ ಹೆಚ್ಚಿನ ಪ್ರದೇಶಗಳಲ್ಲಿ ಸ್ಥಳೀಯವಾಗಿ ದೊರೆಯುವ ಕಾಳುಗಳನ್ನು ಬೇಯಿಸಿ ಅಥವಾ ಹುರಿದು ಸೇವಿಸುವುದರಿಂದ ನಮ್ಮ ದೇಹಕ್ಕೆ ಫೈಬರ್, ಪೆÇ್ರೀಟಿನ್ ಮತ್ತು ಕೊಬ್ಬಿನಾಂಶಗಳು ಉತ್ತಮವಾಗಿ
    ದೊರೆಯುತ್ತದೆ. ಇದರಿಂದ ನಮ್ಮ ಹೃದಯದ ಆರೋಗ್ಯವನ್ನು ರಕ್ಷಿಸಿಕೊಳ್ಳುವುದರ ಜೊತೆಗೆ ದೇಹದ ತೂಕವನ್ನು ಕಾಪಾಡಿಕೊಳ್ಳಬಹುದಾಗಿದೆ.
  7. ತುಪ್ಪ ಮತ್ತು ಬೆಣ್ಣೆ : ಸಾಂಪ್ರಾದಾಯಕವಾಗಿ ಮನೆಯಲ್ಲಿ ತಯಾರಿಸುವ ಬೆಣ್ಣೆ ಮತ್ತು ತುಪ್ಪವನ್ನು ಸೇವಿಸುವುದರಿಂದ ವಿಟಾಮಿನ ‘ಡಿ’ ಯಂತಹ ಜೀವಸತ್ವಗಳನ್ನು ಹೀರಿಕೊಳ್ಳಲು ಕೊಬ್ಬಿನಾಂಶ ಬಹಳ ಅತ್ಯಗತ್ಯ.
    ಇವುಗಳನ್ನು ಸೇವಿಸುವುದರಿಂದ ನಮ್ಮ ಜೀರ್ಣ ಕ್ರಿಯೆಗೆ ಸಹಾಯ ಮಾಡಿ ನಮ್ಮ ದೇಹದ ರೋಗ ನಿರೋಧಕ ಶಕ್ಷಿಯನ್ನು ಹೆಚ್ಚಿಸುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

16ರಂದು ಸ್ವಾಮಿ ಸಮರ್ಥ ಮಂದಿರದಲ್ಲಿ ಶಂಕರಸ್ವಾಮಿ

Fri Jan 13 , 2023
ಕಲಬುರಗಿ,ಜ.13-ತಾಲ್ಲೂಕಿನ ಅವರಾದ (ಬಿ) ಗ್ರಾಮದಲ್ಲಿ ಪರಮ ಪೂಜ್ಯ ಲಿಂಗೈಕ್ಯ ಶ್ರೀ ಶಂಕರ ಸ್ವಾಮಿ ಮಹಾರಾಜರಿಂದ ಸಂಸ್ಥಾಪಿತವಾÀದ ಶ್ರೀ ಸ್ವಾಮಿ ಸಮರ್ಥ ಮಂದಿರದಲ್ಲಿ ಜ.16 ರಂದು “ಲಿಂಗೈಕ್ಯ ಪೂಜ್ಯ ಶ್ರೀ ಶಂಕರಸ್ವಾಮಿ ಮಹಾರಾಜರ 19ನೇ ವರ್ಷದ ಪುಣ್ಯಸ್ಮರಣೋತ್ಸವ” ಕಾರ್ಯಕ್ರಮವನ್ನು ಆಚರಿಸಲು ನಿರ್ಧರಿಸಲಾಗಿದೆ. ಅದರಂತೆ ಜ.16 ರಂದು ಅನೇಕ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಂದಿನ ಮುಖ್ಯ ಕಾರ್ಯಕ್ರಮದಲ್ಲಿ ಬೆಳಿಗ್ಗೆ 7.30 ರಿಂದ 11.30 ಗಂಟೆಯವರೆಗೆ ಮುಂಬ್ಯೆನಿಂದ ಆಗಮಿಸುವ ಭಕ್ತಾದಿಗಳಿಂದ “ಮಹಾಭಿಷೆಕ” ಹಾಗೂ ಮಹಾ […]

Advertisement

Wordpress Social Share Plugin powered by Ultimatelysocial