ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು.

 

ಇಂದಿನ ಯುವ ಪೀಳಿಗೆ ತಮ್ಮಲ್ಲಿರುವ ಕೌಶಲ್ಯವನ್ನು ಬಳಸಿಕೊಂಡು ಉತ್ತಮ ಶಿಕ್ಷಣ ಪಡೆಯುವುದರ ಮೂಲಕ ಉದ್ಯೋಗವಂತರಾಗುವುದರೊಂದಿಗೆ ದೇಶದ ಅಭಿವೃದ್ದಿ ಕೈ ಜೋಡಿಸಬೇಕು ಎಂದು ತಹಶಿಲ್ದಾರ ಪರಶುರಾಮ ಸತ್ತಿಗೇರಿ ಕರೆ ನೀಡಿದರು.

ನಗರದ ತಾಯಿ ಪಾರ್ವತಿ ಬಳಗ ಕಲಾ ಮತ್ತು ವಾಣಿಜ್ಯ ಬಾಲಕಿಯರ ಪದವಿ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಇವರ ಸಹಯೋಗದಲ್ಲಿ ರಾಷ್ಟ್ರೀಯ ಯುವ ಜನೋತ್ಸವ ಮತ್ತು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದ ಯುವಜನತೆಯಿಂದ ದೇಶ ಹೆಚ್ಚು ಅಭಿವೃದ್ಧಿ ಪಥದತ್ತ ಸಾಗಬಲ್ಲದು. ಯುವಜನತೆಗೆ ಒಂದು ಆಶಾಕಿರಣವಾಗಬೇಕು. ಇಂದಿನ ಯುವ ಪೀಳಿಗೆಯಲ್ಲಿ ಜಾಗೃತಿ ಅತ್ಯವಶ್ಯಕವಾಗಿದ್ದು, ಯುವಕರು ವಿವೇಕಾಂದರ ಜೀವನ ಚರಿತ್ರೆ ಹಾಗೂ ಚಿಂತನೆ ಮಾಡಬೇಕಾಗಿದೆ. ವಿದ್ಯಾರ್ಥಿಗಳು-ಯುವಕರು ಸ್ವಾಮಿ ವಿವೇಕಾನಂದರ ವಿಶೇಷತೆಗಳನ್ನು ಮನನ ಮಾಡಿಕೊಳ್ಳಬೇಕು. ಯುವಜನೋತ್ಸವ ಎಲ್ಲರಿಗೂ ಕೂಡ ಪ್ರೇರಣೆ ನೀಡುವಂತಾಗಲಿ ಎಂದು ಅವರು ಹೇಳಿದರು.

ಈ ಕಾಲೇಜಿನಲ್ಲಿ ಇಲ್ಲಿ ಕಲಿತ ಅನೇಕರು ಉನ್ನತ ಹುದ್ದೆಯನ್ನು ಅಲಂಕರಿಸಿ ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾರೆ ಈ ಕಾಲೇಜು ನನಗೆ ತುಂಬಾ ಇಷ್ಟ ಕಾಲೇಜಿನ ಉನ್ನತೀಕರಣಕ್ಕೆ ಕೈ ಜೋಡಿಸುವುದಾಗಿ ಅವರು ಹೇಳಿದರು.

ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ಪೆಂಟಗನ್' ಚಿತ್ರದಲ್ಲಿ ಕನ್ನಡಪರ ಹೋರಾಟಗಾರನ ಪಾತ್ರದಲ್ಲಿ ನಟ ಕಿಶೋರ್ ನಟನೆ.

Tue Jan 17 , 2023
ಪೆಂಟಗನ್ ಐದು ಕಥೆಗಳನ್ನು ಒಳಗೊಂಡ, ಐವರು ನಿರ್ದೇಶಕರು ನಿರ್ದೇಶನ ಮಾಡಿರುವ ಚಿತ್ರವಾಗಿದ್ದು, ಚಿತ್ರದ 5ನೇ ಟೀಸರ್ ಜನವರಿ 18 ರಂದು ಬಿಡುಗಡೆಯಾಗಲಿದೆ. ಪೆಂಟಗನ್ ಐದು ಕಥೆಗಳನ್ನು ಒಳಗೊಂಡ, ಐವರು ನಿರ್ದೇಶಕರು ನಿರ್ದೇಶನ ಮಾಡಿರುವ ಚಿತ್ರವಾಗಿದ್ದು, ಚಿತ್ರದ 5ನೇ ಟೀಸರ್ ಜನವರಿ 18 ರಂದು ಬಿಡುಗಡೆಯಾಗಲಿದೆ. ‘ಪೆಂಟಗನ್’ ಐದು ಕಥೆಗಳುಳ್ಳ ಅಂಥಾಲಾಜಿ ಸಿನಿಮಾ ಆಗಿದ್ದು, ಒಂದೊಂದು ಕಥೆಯನ್ನು ಒಬ್ಬೊಬ್ಬರು ನಿದೇಶನ ಮಾಡಿದ್ದಾರೆ. ಗುರು ದೇಶಪಾಂಡೆ ನಿರ್ದೇಶನ ಮಾಡಿರುವ ಕಥೆಯಲ್ಲಿ ಮುಖ್ಯಪಾತ್ರವನ್ನು ಕಿಶೋರ್ […]

Advertisement

Wordpress Social Share Plugin powered by Ultimatelysocial