ಕಾಲೇಜು ಆವರಣದಲ್ಲಿ ಹೈಡ್ರಾಮಾ ಹಿಜಾಬ್ ವಿವಾದ; ಕಣ್ಣೀರಿಟ್ಟ ಗ್ರಂಥಪಾಲಕಿ;

ಬೀದರ್: ರಾಜ್ಯದ ವಿವಿಧ ಜಿಲ್ಲೆಗಳ ಕಾಲೇಜುಗಳಲ್ಲಿ ಹಿಜಾಬ್ ವಿವಾದ ಮುಂದುವರೆದಿದ್ದು, ಯಾದಗಿರಿ, ಬಳ್ಳಾರಿ, ಶಿವಮೊಗ್ಗ, ಬೆಳಗಾವಿ ಸೇರಿದಂತೆ ಹಲವೆಡೆಗಳಲ್ಲಿ ಹಿಜಾಬ್ ಗಾಗಿ ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದಾರೆ.

ಈ ನಡುವೆ ಬಳ್ಳಾರಿ ಸರಳಾದೇವಿ ಕಾಲೇಜಿನಲ್ಲಿ ಗ್ರಂಥಪಾಲಕಿಯೊಬ್ಬರು ಹಿಜಾಬ್ ಧರಿಸಲು ಅವಕಾಶ ನಿಡುವಂತೆ ಕೋರಿ ಕಾಲೇಜು ಆವರಣದಲ್ಲಿ ಕಣ್ಣೀರಿಟ್ಟ ಘಟನೆ ನಡೆದಿದೆ.

ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸಿದ ಗ್ರಂಥಪಾಲಕಿಗೆ ಕಾಲೇಜು ಸಿಬ್ಬಂದಿಗಳು ಹಾಗೂ ಪೊಲೀಸರು ತಡೆದಿದ್ದು, ಹಿಜಾಬ್ ತೆಗೆಯುವಂತೆ ಸೂಚಿಸಿದ್ದಾರೆ. ಇದಕ್ಕೆ ಕಾಲೇಜು ಆವರಣದಲ್ಲಿಯೇ ಬಿಕ್ಕಿಬಿಕ್ಕಿ ಅಳಲು ಆರಂಭಿಸಿದ ಗ್ರಂಥಪಾಲಕಿ, ಹಿಜಾಬ್ ತೆಗೆಯುವುದಿಲ್ಲ ಎಂದು ಹಠ ಹಿಡಿದಿದ್ದಾರೆ. ಮಹಿಳಾ ಪೊಲೀಸರು ಗ್ರಂಥಪಾಲಕಿಗೆ ಮನವೊಲಿಸಲು ಯತ್ನಿಸಿದ್ದಾರೆ. ಆದಾಗ್ಯೂ ಪಟ್ಟು ಸಡಿಲಿಸದ ಗ್ರಂಥಪಾಲಕಿ ಗಳಗಳನೆ ಅತ್ತಿದ್ದಾರೆ. ಗ್ರಂಥಪಾಲಕಿ ವರ್ತನೆಗೆ ಪೊಲೀಸರೇ ಅವಾಕ್ಕಾಗಿದ್ದಾರೆ.

ಈ ನಡುವೆ ಬಳ್ಳಾರಿ ಮಹಿಳಾ ಕಾಲೇಜಿನಲ್ಲಿಯೂ ವಿದ್ಯಾರ್ಥಿನಿಯರು ಹಿಜಾಬ್ ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಕಾಲೇಜಿಗೆ ಧಾರ್ಮಿಕ ಗುರುತು ಧರಿಸಿ ಹೋಗುವಂತಿಲ್ಲ ಎನ್ನುವುದಾದರೆ ಹಿಂದೂ ವಿದ್ಯಾರ್ಥಿನಿಯರು ಕುಂಕುಮ, ಸಿಂಧೂರ ತೆಗೆದು ಬರಲಿ. ಅವರಿಗೆ ಮಾತ್ರ ಯಾಕೆ ಅವಕಾಶ ಎಂದು ಪ್ರಶ್ನಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಪಾಕಿಸ್ತಾನದ ಸಂಸದ ತನ್ನ 18 ವರ್ಷದ ಪತ್ನಿಯೊಂದಿಗೆ ಇರುವ ಖಾಸಗಿ ವಿಡಿಯೋ ವೈರಲ್ ಆಗಿದೆ!!

Thu Feb 17 , 2022
ಪಾಕಿಸ್ತಾನದ ಸಂಸದರೊಬ್ಬರು ಮತ್ತು ಅವರ 18 ವರ್ಷದ ಪತ್ನಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದಾರೆ. ಈ ಜೋಡಿ ಪ್ರಪಂಚದಾದ್ಯಂತ ಚರ್ಚೆಯಾಗುತ್ತಿದೆ. ಯಾಕೆಂದರೆ ಆ ಸಂಸದನಿಗೆ ಇದು ಮೂರನೇ ಮದುವೆಯಾಗಿದ್ದು, ಅವರೂ ಕೂಡ ತುಂಬಾ ಚಿಕ್ಕ ಹುಡುಗಿಯನ್ನು ಮದುವೆಯಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಜೋಡಿಯ ಬಗ್ಗೆ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಪಾಕಿಸ್ತಾನದ ಸಂಸದ ಅಮೀರ್ ಲಿಯಾಖತ್ ಹುಸೇನ್ ಮತ್ತು ಅವರ ಪತ್ನಿ ಸೈಯದಾ ದಾನಿಯಾ ಶಾ ನಡುವಿನ ಕೆಲವು ಖಾಸಗಿ ಕ್ಷಣಗಳ ವೀಡಿಯೊಗಳು […]

Advertisement

Wordpress Social Share Plugin powered by Ultimatelysocial