‘ಚಿಂತಿ ಮಾಡಬೇಡ್ರಿ ಮುಂದಾ ನಾನ ಮುಖ್ಯಮಂತ್ರಿ’ ಸಿಎಂ ಬೊಮ್ಮಾಯಿ ಹೇಳಿಕೆಯಿಂದ ಬಿಜೆಪಿಯಲ್ಲಿ ಗೊಂದಲ!

ಬೊಮ್ಮಾಯಿ ನಾಯಕತ್ವದಲ್ಲೇ ಮುಂದಿನ ಚುನಾವಣೆ ಎನ್ನುತ್ತಿರುವ ಬಿಜೆಪಿ ನಾಯಕರು ಇದೇ ವೇಳೆಯಲ್ಲಿ ಸಾಮೂಹಿಕ ನಾಯಕತ್ವ ಎಂಬ ಸಂದೇಶ ಜಪಿಸುತ್ತಿದ್ದಾರೆ. ಈ ನಡುವೆ ಸಿಎಂ ಬಸವರಾಜ ಬೊಮ್ಮಾಯಿ ನಾನೇ ಮುಂದಿನ ಸಿಎಂ ಎಂದು ಹೇಳಿದ್ದಾರೆ. ಸಹಜವಾಗಿ ಚರ್ಚೆಯ ಡೋರ್ ಓಪನ್ ಆಗಿದೆ.

ನಮಗೆ ಆಶೀರ್ವಾದ ಮಾಡಿ ಎಂದು ಕೇಳಿದ ಸಿಎಂ

ಚುನಾವಣಾ ಅಖಾಡ ರಂಗೇರುತ್ತಿದೆ. ರಣಕಣದಲ್ಲಿ ರಾಜಕೀಯದ ಘಟಾನುಘಟಿ ನಾಯಕರು ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ. ರಾಷ್ಟ್ರೀಯ ಪಕ್ಷವಾದ ಬಿಜೆಪಿ ಹಾಗೂ ಕಾಂಗ್ರೆಸ್​ನಲ್ಲಿ ಮುಂದಿನ ಸಿಎಂ ಬಗ್ಗೆ ಲೆಕ್ಕಾಚಾರ ಶುರುವಾಗಿದೆ. ಕಾಂಗ್ರೆಸ್​ನಲ್ಲಿ ಮುಂದಿನ ಸಿಎಂ ಯಾರು ಅನ್ನೋ ಚರ್ಚೆಯ ಸುತ್ತ ಗೊಂದಲ ಇರೋದು ರಾಜ್ಯ ರಾಜಕಾರಣಕ್ಕೆ ಹೊಸದೇನಲ್ಲ. ಇದೀಗ ಇಂತದ್ದೇ ಗೊಂದಲದ ಗಾಳಿ ಬಿಜೆಪಿಯಲ್ಲು ಬೀಸಲು ಶುರುವಾದಂತೆ ಕಂಡುಬರುತ್ತಿದೆ.

ಮುಂದಿನ ಸಿಎಂ ಅಭ್ಯರ್ಥಿ ಘೋಷಿಸದೆ ಬಿಜೆಪಿ ಹೈಕಮಾಂಡ್ ಜಾಣ ನಡೆ ಅನುಸರಿಸುತ್ತಿದೆ. ಸಾಮೂಹಿಕ ನಾಯತ್ವದ ಮಂತ್ರ ಜಪಿಸುತ್ತಿದೆ. ಈ ನಡುವೆ ರಾಜ್ಯದಲ್ಲಿ ಮಿಂಚಿನ ಸಂಚಾರ ನಡೆಸುತ್ತಿರುವ ಸಿಎಂ ಬೊಮ್ಮಾಯಿ. ಮುಂದಿನ ಸಿಎಂ ನಾನೇ ಎಂದು ಹೇಳಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ನವ ಕರ್ನಾಟಕ, ನವ ಭಾರತ ನಿರ್ಮಾಣ ನಮ್ಮ ಕನಸು. ಮುರುಗೇಶ್ ನಿರಾಣಿ ಬೀಳಗಿಯಲ್ಲಿ ಸಾವಿರಾರು ಕೋಟಿ ಕೆಲಸವನ್ನ ಮಾಡಿದ್ದಾರೆ. ಆದ್ರೆ ಅಲ್ಲಿಗೆ ನನ್ನನ್ನೇ ಕರೆದುಕೊಂಡು ಹೋಗಿಲ್ಲ. ಚಿಂತಿ ಮಾಡಬ್ಯಾಡ್ರಿ, ಮುಂದೇ ನಾನೇ ಸಿಎಂ ಆಗ್ತೀನಿ. ನಾನೇ ಬರುತ್ತೀನಿ ಎಂದು ಕೇಂದ್ರ ಸಚಿವ ನಿರಾಣಿಗೆ ಸಿಎಂ ಬೊಮ್ಮಾಯಿ ನಗುನಗುತ್ತಲೇ ಕಾಲೆಳೆದರು.

‘ಮುಂದೇ ನಾನೇ ಸಿಎಂ ಆಗ್ತೀನಿ’

ಬೀಳಗಿ ಕ್ಷೇತ್ರದಲ್ಲಿ ನೀರಾವರಿ ಸೇರಿದಂತೆ ಸಾವಿರಾರು ಅಭಿವೃದ್ಧಿಯನ್ನು ಮುರುಗೇಶ್​ ನಿರಾಣಿ ಮಾಡಿದ್ದಾರೆ. ಆದರೆ ಮುರುಗೇಶ್​ ನನ್ನ ಕರೆದುಕೊಂಡು ಹೋಗಿಲ್ಲ ಅಲ್ಲಿಗೆ. ಎಲ್ಲಿ ಕರೆದುಕೊಂಡು ಹೋದರೇ ಗೊತ್ತಾಗುತ್ತೆಂದು ಕರೆದುಕೊಂಡು ಹೋಗಿಲ್ಲ. ಚಿಂತಿ ಮಾಡಬೇಡ್ರಿ ಮುಂದಾ ನಾನ ಮುಖ್ಯಮಂತ್ರಿಯಾಗಿ ಬರುತ್ತೀನಿ.

ಬಸವರಾಜ್ ಬೊಮ್ಮಾಯಿ, ಸಿಎಂ

ಇನ್ನು ಮೊನ್ನೆ ಮೊನ್ನೆಯಷ್ಟೇ ಮಾಜಿ ಸಿಎಂ ಯಡಿಯೂರಪ್ಪ ನೀಡಿದ್ದ ಹೇಳಿಕೆ ಹಾಗೂ ಇದೀಗ ಸಿಎಂ ಬೊಮ್ಮಾಯಿ ನೀಡಿರೋ ಹೇಳಿಕೆ ಭಿನ್ನವಾಗಿದೆ. ಮುಂದಿನ ಸಿಎಂ ಬಗ್ಗೆ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಚುನಾವಣಾ ಫಲಿತಾಂಶ ಪ್ರಕಟವಾದ ನಂತರವೇ ಮುಂದಿನ ಸಿಎಂ ಘೋಷಿಸಲಾಗುತ್ತೆ ಎಂದು ಯಡಿಯೂರಪ್ಪ ದೆಹಲಿಯತ್ತ ಕೈ ತೋರಿಸಿದ್ದರು. ಆದ್ರೀಗ ಬೊಮ್ಮಾಯಿ ನಾನೇ ಮುಂದೇ ಸಿಎಂ ಆಗ್ತೀನಿ ಎಂದಿದ್ದಾರೆ.

ಅನೌನ್ಸ್​ ಮಾಡೋದು ಬಾಯಿ ತಪ್ಪಿ ಹೇಳಿದ್ದೀನಿ. ಬಟ್ ತೀರ್ಮಾನ ಮಾಡೋದು ಕೇಂದ್ರದ ಚುನಾವಣಾ ಸಮಿತಿ ಮಾಡುತ್ತೆ. ಹೀಗಾಗಿ ಯಾವುದೇ ಹೆಸರು ಹೇಳುವುದು ಸೂಕ್ತವಲ್ಲ. ಸಮಿತಿ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳುತ್ತೆ.

ಬಿ.ಎಸ್​ ಯಡಿಯೂರಪ್ಪ, ಮಾಜಿ ಸಿಎಂ

ಇದು ಗೊಂದಲದ ಪರಿಸ್ಥಿತಿಯಾಧಾರಿತ ಹೇಳೀಕೆ ಅನ್ನುವುದು ಕೇಸರಿ ಟೀಮ್​ನಲ್ಲಿ ಚರ್ಚೆ ಶುರುವಾಗಿದೆ. ಇದನ್ನ ವಿಪಕ್ಷಗಳು ಅಸ್ತ್ರವಾಗಿಸಿಕೊಳ್ಳಲು ಯೋಚಿಸಬಹುದು. ಹೀಗಾಗಿ ಮಾತನಾಡೋ ಪ್ರತೀ ಮಾತಲ್ಲು ಎಚ್ಚರ ಅಗತ್ಯ ಮುಖ್ಯ. ಸದ್ಯ ಇದೀಗ ಬೊಮ್ಮಾಯಿ-ಬಿಎಸ್​ವೈ ಭಿನ್ನ ರಾಗ ಹೊಸ ಚರ್ಚೆಗೆ ದಾರಿ ಮಾಡಿ ಕೊಟ್ಟಿದೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದೇವೇಗೌಡರನ್ನು ಭೇಟಿ ಮಾಡಲು ಪ್ರಧಾನಿ ಮೋದಿ ಚಿಂತನೆ!

Wed Mar 22 , 2023
ಬೆಂಗಳೂರು: ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರು ಅನಾರೋಗ್ಯಕ್ಕೀಡಾಗಿದ್ದಾರೆ. ಸದ್ಯ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರೋ ದೇವೇಗೌಡರನ್ನು ಹಲವು ನಾಯಕರು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ಆದರೆ ಹಲವು ಬಾರಿ ರಾಜ್ಯಕ್ಕೆ ಭೇಟಿ ನೀಡಿದ್ದ ಪ್ರದಾನಿ ನರೇಂದ್ರ ಮೋದಿ ದೇವೇಗೌಡರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಲೇ ಇಲ್ಲ. ಹೀಗಾಗಿ ಮುಂದಿನ ಬಾರಿ ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮಿಸಿದ್ರೆ, ದೇವೇಗೌಡರನ್ನು ಭೇಟಿ ಮಾಡಿಸಲು ಬಿಜೆಪಿ ನಾಯಕರು ಚಿಂತಿಸಿದ್ದಾರೆನ್ನಲಾಗಿದೆ. ಯಾಕಂದ್ರೆ ಹಿರಿಯ ರಾಜಕೀಯ ನಾಯಕರೊಬ್ಬರು ಅನಾರೋಗ್ಯಕ್ಕೀಡಾದ್ರೂ ಕನಿಷ್ಠ ಆರೋಗ್ಯ […]

Advertisement

Wordpress Social Share Plugin powered by Ultimatelysocial