ಕಾಂಗ್ರೆಸ್​ ನವ ಸಂಕಲ್ಪ ಶಿಬಿರ: ಮೊದಲ ದಿನವೇ ಸಭೆಗೆ ಹೈಕಮಾಂಡ್​ನ ಸಂದೇಶ ತಲುಪಿಸಿದ ಸುರ್ಜೆವಾಲ

 

ಬೆಂಗಳೂರು: ಒಂದು ಕುಟುಂಬಕ್ಕೆ ಒಂದೇ ಟಿಕೆಟ್​, 50 ವರ್ಷದೊಳಗಿನವರಿಗೆ ಮುಂದಾಳತ್ವ, ಒಬ್ಬರಿಗೆ ಒಂದೇ ಹುದ್ದೆಯಂತಹ ಪ್ರಮುಖ ತೀರ್ಮಾನ ಕೈಗೊಂಡ ಉದಯಪುರ ಎಐಸಿಸಿ ಚಿಂತನಾ ಶಿಬಿರದ ರ್ನಿಣಯವನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸುವ ಕಾಂಗ್ರೆಸ್​ನ ನವ ಸಂಕಲ್ಪ ಶಿಬಿರ ಗುರುವಾರ ಆರಂಭಗೊಂಡಿದೆ.

ದೇವನಹಳ್ಳಿಯ ರೆಸಾರ್ಟ್​ನಲ್ಲಿ ನಡೆಯುತ್ತಿರುವ ಈ ಶಿಬಿರ ಶುಕ್ರವಾರವೂ ನಡೆಯಲಿದೆ. ಮೊದಲ ದಿನದ ಸಭೆಯಲ್ಲಿ ರಾಜ್ಯ ಉಸ್ತುವಾರಿ ರಣದೀಪ್​ ಸಿಂಗ್​ ಸುರ್ಜೆವಾಲ ಅವರು ಹೈಕಮಾಂಡ್​ನ ಮಹತ್ವದ ಸಂದೇಶವನ್ನ ಸಭೆಗೆ ರವಾನಿಸಿದರು.

  • ಸಂಘಟನೆಯ ಎಲ್ಲಾ ಖಾಲಿ ಹುದ್ದೆ ತಕ್ಷಣ ಭರ್ತಿ ಮಾಡುವುದು. ಮುಂದಿನ 15 ದಿನಗಳಲ್ಲಿ ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿಯನ್ನು ಪೂರ್ಣಗೊಳಿಸಬೇಕು. ನಂತರ ಜಿಲ್ಲಾ, ಬ್ಲಾಕ್ ಹಾಗೂ ಇತರೆ ಘಟಕಗಳಲ್ಲಿ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಲಾಗುವುದು.
  • ಬೂತ್ ಬ್ಲಾಕ್ ನಡುವೆ ಇನ್ನೊಂದು ಸಮಿತಿ ರಚನೆ. ಬ್ಲಾಕ್ ಹಾಗೂ ಗ್ರಾಮ ಸಮಿತಿ ನಡುವೆ ಮಂಡಲ ಸಮಿತಿ ಇರಬೇಕು. ನೀವೆಲ್ಲರೂ ಜಿಲ್ಲಾ ಕಚೇರಿಯಲ್ಲಿ ಸಭೆ ಮಾಡಿ ಈ ಸಮಿತಿಯ ವ್ಯಾಪ್ತಿ ನಿರ್ಧರಿಸಬೇಕು. ನಂತರ ವಾರ್ಡ್ ಹಾಗೂ ಗ್ರಾಮ ಸಮಿತಿ ರಚನೆ.
  • ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಘಟಕಗಳಿಂದ 20 ದಿನಗಳಲ್ಲಿ ವಾರ್ ರೂಮ್ ಸ್ಥಾಪನೆ
  • ಎಐಸಿಸಿಯ ಐವತ್ತರ ಫರ್ಮುಲಾ ಅನುಷ್ಠಾನ.‌ ಪದಾಧಿಕಾರಿಗಳಲ್ಲಿ ಶೇ.50 ಮಂದಿ 50 ವರ್ಷ ವಯಸ್ಸಿನ ಒಳಗಿನವರಿರಬೇಕು. ಅನುಭವಕ್ಕೆ ಪ್ರಾಮುಖ್ಯತೆ ಇರಲಿದೆ. ಪಕ್ಷದ ಹಿರಿಯರನ್ನು ಕಡೆಗಣಿಸದೆ ಅವರ ಮಾರ್ಗದರ್ಶನ ಪಡೆಯುತ್ತಾ ಸೂಕ್ತ ಸ್ಥಾನಮಾನ ನೀಡಿ ಹೊಸ ಮುಖಗಳಿಗೆ ಅವಕಾಶ ನೀಡಲು ತೀರ್ಮಾನ.

 

  • ಎಸ್ಸಿ-ಎಸ್ಟಿ ಮೈನಾರಿಟಿ ಮಹಿಳೆಯರಿಗೆ ಸಮಿತಿಗಳಲ್ಲಿ ಆದ್ಯತೆ ಮೇಲೆ ಅವಕಾಶ ಕೊಡಬೇಕು. ಟಿಕೆಟ್ ಹಂಚಿಕೆಯಲ್ಲೂ ಇದನ್ನು ಪಾಲಿಸಬೇಕು.
  • ಸಂಘಟನೆಯಲ್ಲಿ ಟಾಪ್ ಟು ಬಾಟಮ್ ಯಾರೊಬ್ಬರೂ 5 ವರ್ಷದ ಜವಾಬ್ದಾರಿ ಮುಗಿದ ಕೂಡಲೇ ಬೇರೆಯವರಿಗೆ ಅವಕಾಶ ಕೊಡಬೇಕು. ಪಕ್ಷದಲ್ಲಿ ಯಾವುದೇ ಪದಾಧಿಕಾರಿಗಳ ಹುದ್ದೆಯ ಗರಿಷ್ಠ ಕಾಲಮಿತಿ 5 ವರ್ಷಗಳಿಗೆ ನಿಗದಿ ಮಾಡಲಾಗಿದೆ. ಅವಧಿ ಪೂರ್ಣಗೊಂಡ ನಂತರ ಸಂಘಟನೆಯಿಂದ ಹೊರ ನಡೆಯುವಂತಿಲ್ಲ. ಪಕ್ಷ ಬೇರೆ ಜವಾಬ್ದಾರಿಗಳನ್ನು ಕಲ್ಪಿಸಿಕೊಡಲಿದೆ. ಈ ಮೂಲಕ ಪಕ್ಷದಲ್ಲಿ ಬಹುತೇಕರಿಗೆ ಅವಕಾಶ ನೀಡಲು ಸಾಧ್ಯ. ಜಿಲ್ಲಾಧ್ಯಕ್ಷರಾಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ 5 ವರ್ಷ ಪೂರ್ಣಗೊಳಿಸಿರುವವರು ಬೇರೆಯವರಿಗೆ ಅವಕಾಶ ನೀಡುವತ್ತ ಗಮನಹರಿಸಬೇಕು.

 

  • ಟಿಕೆಟ್ ಹಂಚಿಕೆ ಗೊಂದಲಕ್ಕೆ ತೆರೆ ಎಳೆದ ಕಾಂಗ್ರೆಸ್. ಒನ್ ಫ್ಯಾಮಿಲಿ ಒನ್ ಟಿಕೆಟ್ ಕೊಡುವ ತೀರ್ಮಾನದಲ್ಲಿ ಸ್ಪಷ್ಟನೆ. ಎಲ್ಲರನ್ನೂ ತಿರಸ್ಕಾರಿಸಲಾಗಲ್ಲ.‌ ಕೆಲವರು ಪಕ್ಷದಲ್ಲಿ ಕೆಲಸ ಮಾಡುತ್ತಿರುತ್ತಾರೆ. ಆದರೆ, ನನ್ನ‌ ಮಗ ಅಮೆರಿಕಾದಿಂದ ಬಂದಿದ್ದಾನೆ, ಇನ್ನೆಲ್ಲಿಂದಲೋ ಬಂದಿದ್ದಾನೆ, ನನ್ನ ಪತ್ನಿಗೆ ಟಿಕೆಟ್ ಕೊಡಬೇಕೆಂಬ ಬೇಡಿಕೆಗೆ ಇನ್ನು ಮುಂದೆ ಅವಕಾಶ ಕೊಡಲ್ಲ. ಪಕ್ಷದ ನಾಯಕರ ಕುಟುಂಬ ಸದಸ್ಯರಿಗೆ ಏಕಾಏಕಿ ಕರೆತಂದು ಟಿಕೆಟ್ ನೀಡುವುದಿಲ್ಲ. ಮೊದಲು ಪಕ್ಷದ ಕೆಲಸದಲ್ಲಿ ತೊಡಗಿಸಿಕೊಂಡು ನಂತರ ಅವರು ಅವಕಾಶದ ಅರ್ಹತೆ ಪಡೆಯಬೇಕು.
  • ಈ ವರ್ಷ ದೇಶ 75ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದ್ದು, ಭಾರತ ರಾಷ್ಟ್ರೀಯ ಕಾಂಗ್ರೆಸ್ ಆಗಸ್ಟ್ 9ರಿಂದ 15ರವರೆಗೂ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ವಿವಿಧ ವಿಚಾರವಾಗಿ ಪಾದಯಾತ್ರೆ ನಡೆಸಲಾಗುವುದು.
  • ಮೂರು ತಿಂಗಳಿಗೊಮ್ಮೆ ಜಿಲ್ಲಾ ಕಾಂಗ್ರೆಸ್ ಸಮಿತಿ ಸಭೆ ನಡೆಯಬೇಕು. 6 ತಿಂಗಳಿಗೊಮ್ಮೆ ವರ್ಷಕ್ಕೆ ಎರಡು ಬಾರಿ ಪ್ರದೇಶ ಕಾಂಗ್ರೆಸ್ ಸಮಿತಿಯ ಸಭೆ ನಡೆಸಬೇಕು.
  • 150ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲುವಂತೆ ಪಕ್ಷ ಸಂಘಟಿಸಬೇಕು. ಪಕ್ಷಕ್ಕೆ ಈ ಸಂಖ್ಯಾ ಬಲ ಇದ್ದರೆ ಹೆಚ್ಚು ಪರಿಷತ್ ಹಾಗೂ ರಾಜ್ಯಸಭೆ ಸ್ಥಾನಗಳಿಗೆ ಆಯ್ಕೆ ಮಾಡುವ ಅವಕಾಶ ನಮಗೂ ಸಿಗುತ್ತದೆ. ಆಗ ನಿಮಗೆ ನಾವು ರಾಜ್ಯಸಭೆ, ವಿಧಾನ ಪರಿಷತ್ ಸ್ಥಾನಗಳಿಗೆ ಆಯ್ಕೆ ಮಾಡಬಹುದು…. ಹೀಗೆ ಹಲವು ಮಹತ್ತರ ಯೋಜನೆ ಬಗ್ಗೆ ರಣದೀಪ್​ ಸಿಂಗ್​ ಸುರ್ಜೆವಾಲ ಅವರು ಸಭೆಯಲ್ಲಿ ವಿವವರಿಸಿದರು.
  • ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

    https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿಮಾನ ದುರಂತ: ನೇಪಾಳದ ಪಶುಪತಿನಾಥ ದೇಗುಲದ ಸಮೀಪ ನಾಲ್ವರು ಭಾರತೀಯ ಅಂತ್ಯಕ್ರಿಯೆ

Thu Jun 2 , 2022
ಕಠ್ಮಂಡು: ನೇಪಾಳದ ಗುಡ್ಡಗಾಡು ಪ್ರದೇಶದಲ್ಲಿ ತಾರಾ ಏರ್ ಸಂಸ್ಥೆಯ ವಿಮಾನ ಭಾನುವಾರ ಪತನವಾಗಿ 22 ಮಂದಿ ಮೃತಪಟ್ಟಿದ್ದರು. ಇದೇವೇಳೆ ಪ್ರಾಣ ಕಳೆದುಕೊಂಡಿದ್ದ ನಾಲ್ವರು ಭಾರತೀಯರ ಅಂತ್ಯಕ್ರಿಯೆಯನ್ನು ಇಲ್ಲಿನ ಪವಿತ್ರ ಪಶುಪತಿನಾಥ ದೇವಾಲಯದ ಸಮೀಪ ಗುರುವಾರ ನೆರವೇರಿಸಲಾಗಿದೆ. ಕೆನಡಾದ ‘ಡಿ ಹ್ಯಾವಿಲ್ಯಾಂಡ್’ ನಿರ್ಮಿತ ಈ ವಿಮಾನದಲ್ಲಿ ನಾಲ್ವರು ಭಾರತೀಯರು, ಜರ್ಮನಿಯ ಇಬ್ಬರು, 13 ಮಂದಿ ನೇಪಾಳಿಗರು ಹಾಗೂ ಮೂವರು ಸಿಬ್ಬಂದಿ ಸೇರಿ 22 ಜನರು ಪೋಖರಾ ನಗರದಿಂದ ಮಧ್ಯ ನೇಪಾಳದ ಪ್ರಸಿದ್ಧ […]

Advertisement

Wordpress Social Share Plugin powered by Ultimatelysocial