ಪಂಜಾಬ್ ನಲ್ಲಿ ಕಾಂಗ್ರೆಸ್ ಗೆ ಬಹುಮತ ಕೊರತೆ ಸಾಧ್ಯತೆ ಇದೆ.

ನವದೆಹಲಿ, ಜನವರಿ 30: ಪಂಜಾಬ್, ಉತ್ತರಾಖಂಡ, ಗೋವಾ ಮತ್ತು ಮಣಿಪುರದಲ್ಲಿ ಫೆಬ್ರವರಿಯಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23 ಮತ್ತು ಮಾರ್ಚ್ 3 ಮತ್ತು 7 ರಂದು ಚುನಾವಣೆ ನಡೆಯಲಿದೆ. ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆಯಲಿದೆ.ಪಂಜಾಬ್‌ನಲ್ಲಿ ಫೆಬ್ರವರಿ 20 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.ಭಾರೀ ಕುತೂಹಲ ಕೆರಳಿಸಿರುವ ವಿಧಾನಸಭಾ ಚುನಾವಣೆಗೆ ವಾರಗಳಷ್ಟೇ ಬಾಕಿ ಉಳಿದಿದೆ. ಪಂಜಾಬ್‌ನಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಕೋಟೆಯನ್ನು ಉಳಿಸಬಹುದೇ ಅಥವಾ ಆಮ್ ಆದ್ಮಿ ಪಕ್ಷ (ಎಎಪಿ) ಕಾಂಗ್ರೆಸ್‌ ಕೋಟೆಯನ್ನು ಉರುಳಿಸಬಹುದೇ ಎಂಬ ಪ್ರಶ್ನೆ ಈಗ ನಮ್ಮ ಮುಂದಿದೆ. ಮಾಜಿ ಸಿಎಂ ಅಮರಿಂದರ್ ಸಿಂಗ್ ಪಕ್ಷವಾದ ಪಂಜಾಬ್ ಲೋಕ ಕಾಂಗ್ರೆಸ್ (ಪಿಎಲ್‌ಸಿ) ಮತ್ತು ಸುಖದೇವ್ ಸಿಂಗ್ ಧಿಂಡ್ಸಾ ನೇತೃತ್ವದ ಎಸ್‌ಎಡಿ ಜೊತೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಮೈತ್ರಿ ಯಾವ ಪರಿಣಾಮವನ್ನು ಬೀರುತ್ತದೆ ಎಂಬುವುದನ್ನು ಕೂಡಾ ನಾವು ಕಾದು ನೋಡಬೇಕಾಗಿದೆ. ಈ ನಡುವೆ ಹಲವಾರು ಮಾಧ್ಯಮಗಳು ಚುನಾವಣಾ ಪೂರ್ವ ಸಮೀಕ್ಷೆಯನ್ನು ನಡೆಸಿದೆ.   ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯ ಪ್ರಕಾರ ಪಂಜಾಬ್‌ನಲ್ಲಿ ಕಾಂಗ್ರೆಸ್ ಚುನಾವಣಾ ರೇಸ್‌ನಲ್ಲಿ ಮುಂಚೂಣಿಯಲ್ಲಿಯೇ ಇರಲಿದೆ. ಆದರೆ ಬಹುಮತದ ಕೊರತೆ ಕಾಂಗ್ರೆಸ್‌ಗೆ ಕಾಣುವ ಸಾಧ್ಯತೆ ಇದೆ. ಈ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್‌ ಎಷ್ಟು ಸ್ಥಾನವನ್ನು ಪಂಜಾಬ್‌ನಲ್ಲಿ ಗಳಿಸಲಿದೆ ಎಂದು ತಿಳಿಯಲು ಮುಂದೆ ಓದಿ..
ಕಾಂಗ್ರೆಸ್‌ಗೆ ಬಹುಮತದ ಕೊರತೆ?

ಪಂಜಾಬ್‌ನಲ್ಲಿ ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಆದರೆ ಬಹುಮತದ ಕೊರತೆ ಕಾಣಿಸಿಕೊಳ್ಳಬಹುದು ಎಂದು ಇಂಡಿಯಾ ಟಿವಿ ಚುನಾವಣಾ ಪೂರ್ವ ಸಮೀಕ್ಷೆಯು ಹೇಳಿದೆ. ಇಂಡಿಯಾ ಟಿವಿ-ಗ್ರೌಂಡ್ ಝೀರೋ ಒಪಿನಿಯನ್ ಪೋಲ್ ಪ್ರಕಾರ, ಪಂಜಾಬ್‌ನಲ್ಲಿ ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಬಹುದು. ಆದರೆ ಗಡಿ ರಾಜ್ಯದಲ್ಲಿ ಬಹುಮತದ ಕೊರತೆ ಕಾಣಿಸಿಕೊಳ್ಳಲಿದೆ. ಕಾಂಗ್ರೆಸ್ ಸುಮಾರು 50-52 ಸ್ಥಾನಗಳನ್ನು ಗೆಲ್ಲಬಹುದು, ಎಸ್‌ಎಡಿ-ಬಿಎಸ್‌ಪಿ 30-32 ಸ್ಥಾನಗಳನ್ನು ಪಡೆಯಬಹುದು, ಎಎಪಿ 29-31 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ, ಬಿಜೆಪಿ 1-3 ಸ್ಥಾನಗಳನ್ನು ಮತ್ತು ಇತರರು 1-3 ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆ ಹೇಳುತ್ತದೆ. ಪಂಜಾಬ್‌ನಲ್ಲಿ ಫೆಬ್ರವರಿ 20 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

 

Please follow and like us:

Leave a Reply

Your email address will not be published. Required fields are marked *

Next Post

ಇಲ್ಲಿನೋಡಿ ವಾಹನ ಸವಾರರಿಗೆ ಗುಡ್‌ ನ್ಯೂಸ್‌ :"ರಾಜ್ಯ ಸರ್ಕಾರದಿಂದ ಭ್ರಷ್ಠಾಚಾರ ತಡೆಗೆ ಬಿಗ್‌ ಬ್ರೇಕ್‌": ಇನ್ಮುಂದೆ Online ಮೂಲಕವೇ LLR, DL

Mon Jan 31 , 2022
ಕೆಎನ್‌ಎನ್‌ ಡಿಜಿಟಲ್‌ ಡೆಸ್ಕ್‌ : ರಾಜ್ಯದ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ(ಆರ್‌ಟಿಒ)ನಡೆಯುತ್ತಿರುವ ಭ್ರಷ್ಟಾಚಾರ ನಿಯಂತ್ರಿಸುವುದು ಮತ್ತು ಸಾರ್ವಜನಿಕರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ವಾಹನ ಕಲಿಕಾ ಪರವಾನಿಗೆ(ಎಲ್‌ಎಲ್), ಚಾಲನಾ ಪರವಾನಿಗೆ ನವೀಕರಣ ಸೇರಿದಂತೆ ಹಲವು ಸೇವೆಗಳನ್ನು ಆನ್ಲೈನ್ ಮೂಲಕ ಒದಗಿಸಲು ರಾಜ್ಯ ಸರ್ಕಾರ ಮುಂದಾಗಿದೆ    ಏನೇನು ಸೌಲಭ್ಯ ಒದಗಿಸುತ್ತದೆ ..?ಚಾಲನಾ ಪರವಾನಿಗೆ ನವೀಕರಣ, ಕಲಿಕಾ ಚಾಲನಾ ಪರವಾನಿಗೆ, ಚಾಲನಾ ಪರವಾನಿಗೆಯಲ್ಲಿನ ವಿಳಾಸ ಮತ್ತು ಹೆಸರಿನಲ್ಲಿದ್ದ ದೋಷಗಳನ್ನು ಬದಲಾವಣೆ, ನಕಲು ಚಾಲನಾ ಪರವಾನಿಗೆ […]

Advertisement

Wordpress Social Share Plugin powered by Ultimatelysocial