ತ್ರಿಪುರಾದಲ್ಲಿ ವಿಧಾನಸಭೆ ಚುನಾವಣೆ ರಂಗೇರುತ್ತಿದ್ದು,

ತ್ರಿಪುರಾದಲ್ಲಿ ವಿಧಾನಸಭೆ ಚುನಾವಣೆ ರಂಗೇರುತ್ತಿದ್ದು, ಎಲ್ಲ ಪಕ್ಷಗಳು ಭರದ ಸಿದ್ದತೆಗಳನ್ನು ನಡೆಸಿವೆ. ಇದೇ ವೇಳೆ ಶನಿವಾರ ಕಾಂಗ್ರೆಸ್ ತನ್ನ 17 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಮಾಜಿ ಮುಖ್ಯಮಂತ್ರಿ ಸಮೀರ್ ರಂಜನ್ ಬರ್ಮನ್ ಅವರ ಪುತ್ರ ಸುದೀಪ್ ರಾಯ್ ಬರ್ಮನ್ ಹೆಸರೂ ಸೇರಿದೆ.

ಪಕ್ಷದ ಹೈಕಮಾಂಡ್ ನಿರ್ಧಾರದಂತೆ ಸಮೀರ್ ರಂಜನ್ ಬರ್ಮನ್ ಅವರು ರಾಜಧಾನಿ ಅಗರ್ತಲಾದಿಂದ ಸ್ಪರ್ಧಿಸಲಿದ್ದಾರೆ.

ಜನವರಿ 21 ರಂದು ಚುನಾವಣಾ ಆಯೋಗವು ತ್ರಿಪುರಾದಲ್ಲಿ ವಿಧಾನಸಭಾ ಚುನಾವಣೆಗೆ ಅಧಿಸೂಚನೆಯನ್ನು ಹೊರಡಿಸಿತು. ಜನವರಿ 30 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಅಭ್ಯರ್ಥಿಗಳು ತಮ್ಮ ನಾಮಪತ್ರವನ್ನು ಫೆಬ್ರವರಿ 2 ರವರೆಗೆ ಹಿಂಪಡೆಯಬಹುದು. ನಂತರ ಫೆಬ್ರವರಿ 16 ರಂದು ಮತದಾನ ನಡೆಯಲಿದೆ ಮತ್ತು ಅದರ ಫಲಿತಾಂಶಗಳು ಮಾರ್ಚ್ 2 ರಂದು ಮೇಘಾಲಯ ಮತ್ತು ನಾಗಾಲ್ಯಾಂಡ್ ಜೊತೆಗೆ ಘೋಷಣೆಯಾಗಲಿದೆ. ಚುನಾವಣಾ ಆಯೋಗದ ಪ್ರಕಾರ ಮಾರ್ಚ್ 4 ರೊಳಗೆ ಸಂಪೂರ್ಣ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

ತ್ರಿಪುರದ 2018ರ ಚುನಾವಣೆಯತ್ರಿಪುರಾದಲ್ಲಿ ಸಂಪೂರ್ಣ ಬಹುಮತದೊಂದಿಗೆ ಬಿಜೆಪಿ ಸರ್ಕಾರವಿದೆ. 2018 ರಲ್ಲಿ ಬಿಜೆಪಿ ತನ್ನ ಮಿತ್ರ ಪಕ್ಷವಾದ IPFT ಜೊತೆಗೆ 60 ರಲ್ಲಿ 43 ಸ್ಥಾನಗಳನ್ನು ಗೆದ್ದಿತ್ತು. ಇದರಲ್ಲಿ ಬಿಜೆಪಿ 35 ಮತ್ತು ಐಪಿಎಫ್‌ಟಿ 8 ಸ್ಥಾನಗಳನ್ನು ಪಡೆದುಕೊಂಡಿದೆ. 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಪಡೆಯಲು ವಿಫಲವಾಗಿತ್ತು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹರಿಪ್ರಿಯಾ-ವಸಿಷ್ಠ ಮದುವೆ ಹೇಗೆ ನಡೀತು..?

Sat Jan 28 , 2023
ಸ್ಯಾಂಡಲ್​ವುಡ್​ನ ಚಿಟ್ಟೆ ಎಂದು ಖ್ಯಾತಿಯಾಗಿರೋ ವಸಿಷ್ಠ ಸಿಂಹ ಹಾಗೂ ಕನ್ನಡ ಚಿತ್ರರಂಗದ ಖ್ಯಾತ ನಟಿ ಹರಿಪ್ರಿಯಾ ಜೊತೆ ಎರಡು ದಿನಗಳ ಹಿಂದೆಯಷ್ಟೇ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಇದೀಗ ಈ ಜೋಡಿ ತಮ್ಮ ಮದುವೆಯ ಸುಂದರ ವಿಡಿಯೋವೊಂದನ್ನು ಶೇರ್​​ ಮಾಡಿಕೊಂಡಿದ್ದಾರೆ. ಜನವರಿ 26ರಂದು ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಸಿಂಹಪ್ರಿಯ ವಿವಾಹ ಜರುಗಿತ್ತು. ಡಾಲಿ, ಶಿವಣ್ಣ ಸೇರಿ ಹಲವರು ನಟ, ನಟಿಯರು ಈ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನವಜೋಡಿಯನ್ನ ಆಶೀರ್ವಾದಿಸಿದ್ದರು. ಇವತ್ತು […]

Advertisement

Wordpress Social Share Plugin powered by Ultimatelysocial