ಅಲ್ಪಸಂಖ್ಯಾತರ ಮತ ಸೆಳೆಯುವುದಕ್ಕೆ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಬಲ ಪ್ರದರ್ಶನ ನಡೆಸಿತು.

 

ಕೊಪ್ಪಳದ ಹೊಸಪೇಟೆ ರಸ್ತೆಯಲ್ಲಿರುವ ಮೇಘರಾಜ ಕಲ್ಯಾಣ ಮಂಟಪದಲ್ಲಿ ಅಲ್ಪಸಂಖ್ಯಾತರ ಚಿಂತನ ಸಭೆಯ ಜರುಗಿಸುವ ಮೂಲಕ ಅಲ್ಪಸಂಖ್ಯಾತರ ಮತ ಸೆಳೆಯುವುದಕ್ಕೆ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಬಲ ಪ್ರದರ್ಶನ ನಡೆಸಿತು. ಕಾರ್ಯಕ್ರಮಕ್ಕೆ ಆಗಮಿಸಿದ ಕೆಪಿಸಿಸಿ ರಾಜ್ಯ ಘಟಕದ ಅಧ್ಯಕ್ಷ ಅಬ್ದುಲ್ ಗಫರ್ ಖಾನ್ ಕಾಂಗ್ರೆಸ್ ಪರ ಜಿಲ್ಲಾ ಅಲ್ಪಸಂಖ್ಯಾತರಲ್ಲಿ ಮತ ಯಾಚೆನೆ ಮಾಡಿದರು. ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಕಾಂಗ್ರೆಸ್ ಪಕ್ಷವನ್ನ ಬೆಂಬಲಿಸಿ.
ಸರ್ವ ಧರ್ಮಗಳ ಪರ ಆಡಳಿತ ನಡೆಸುವ ಪಕ್ಷ ಯಾವುದಾದರೂ ಇದ್ರೆ ಅದು ನಮ್ಮ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಬಿಜೆಪಿ ಪಕ್ಷವು ಧರ್ಮ ಧರ್ಮಗಳ ನಡುವೆ ಬೆಂಕಿ ಹಚ್ಚಿ ಕೋಮುಗಲಭೆಯನ್ನು ಸೃಷ್ಟಿಸುತ್ತಿದೆ. ಸಮಾಜದಲ್ಲಿ ಶಾಂತಿಯನ್ನ ಕದಡುವ ಪ್ರಯತ್ನ ಮಾಡುತ್ತಿದೆ. ಶಾಂತಿ ನೆಲೆಸಬೇಕಾದ್ರೆ ಕಾಂಗ್ರೆಸ್ ಪಕ್ಷವನ್ನ ಬೆಂಬಲಿಸಿ ಎಂದು ಕರೆ ನೀಡಿದರು. ಇದೆ ಸಂದರ್ಭದಲ್ಲಿ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಮಾತನಾಡಿ, ಕ್ಷೇತ್ರದಲ್ಲಿ ಅಲ್ಪಂಖ್ಯಾತರ ಸಮಾಜದ ಅಭಿವೃದ್ದಿಗೆ ಹೆಚ್ಚು ಒತ್ತನ್ನು ನೀಡಿ ಕಾಂಗ್ರೆಸ್ ಶ್ರಮಿಸಿದೆ ಎಂದರು. ಈ ಸಂದರ್ಭದಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತರ ಉಸ್ತುವಾರಿ ಜೀನೆಲ್ ಗಾಲಾ, ಮಾಜಿ ಶಾಸಕರಾದ ಕೆ.ಬಸವರಾಜ ಹಿಟ್ನಾಳ, ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಎಸ್.ಬಿ.ನಾಗರಳ್ಳಿ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಅಲ್ಪಸಂಖ್ಯಾತ ಮುಖಂಡರ, ಕಾರ್ಯಕರ್ತುರು ಬೆಂಬಲಿಗರು ಭಾಗವಹಿಸಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

1 ದಿನದಲ್ಲಿ ರೂ 3,30,32,32,00,000 ಗಳಿಸಿದ ಅದಾನಿ | Adani

Thu Mar 2 , 2023
ಮುಂಬೈ: ಕಳೆದ ಹಲವು ದಿನಗಳಿಂದ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಅದಾನಿ ಸಮೂಹದ ಷೇರುಗಳಲ್ಲಿ ನಿರಂತರ ಕುಸಿತದ ನಂತರ ಮಂಗಳವಾರ ಚೇತರಿಕೆ ಕಂಡುಬಂದಿದೆ. ಇಂದು ಬುಧವಾರ, ಅದಾನಿ ಸಮೂಹದ ಷೇರುಗಳು ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಷೇರು ಮಾರುಕಟ್ಟೆಯಲ್ಲಿ ಪ್ರತಿ ಷೇರಿಗೆ 1500 ರೂ ಕಂಡು ಬಂದಿದೆ. ಇಂದು ಅದಾನಿ ಗ್ರೂಪ್‌ನ ಷೇರುಗಳು ಎಷ್ಟು ವೇಗವಾಗಿ ಬೆಳೆದವು ಎಂದರೆ ಅದಾನಿ ಒಂದೇ ದಿನದಲ್ಲಿ ಸುಮಾರು 3,30,32,32,00,000 ರೂ. ಅಲನ್ ಮಸ್ಕ್ ಕೂಡ […]

Advertisement

Wordpress Social Share Plugin powered by Ultimatelysocial