ಕಾಂಗ್ರೆಸ್ ಚಲಾವಣೆಯಲ್ಲಿ ಇಲ್ಲದ ಸವಕಲು ನಾಣ್ಯ: ಸಿ.ಟಿ.ರವಿ ವ್ಯಂಗ್ಯ

ಕಾಂಗ್ರೆಸ್ ಚಲಾವಣೆಯಲ್ಲಿ ಇಲ್ಲದ ಸವಕಲು ನಾಣ್ಯ: ಸಿ.ಟಿ.ರವಿ ವ್ಯಂಗ್ಯ

ಚಿಕ್ಕಮಗಳೂರು: ಕಾಂಗ್ರೆಸ್ ಚಲಾವಣೆಯಲ್ಲಿ ಇಲ್ಲದ ಸವಕಲು ನಾಣ್ಯ. ಸಿದ್ದು, ಡಿಕೆಶಿ, ಸೋನಿಯಾಗಾಂಧಿ, ಪರಮೇಶ್ವರ್ ಯಾರ ನಾಯಕತ್ವದಲ್ಲಾದರು ಎಲೆಕ್ಷನ್ ಮಾಡಲಿ, ಯಾರ ನೇತೃತ್ವದಲ್ಲಿ ಹೋದರೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಶಾಸಕ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ನಿಲುವು ಏನೆಂದು ವಿಧಾನಸಭೆ ಅಧಿವೇಶನದಲ್ಲೇ ನೋಡಿದ್ದೇವೆ. ಕಾಂಗ್ರೆಸ್ ನಿಲುವುಗಳೇ ಕಾಂಗ್ರೆಸ್ ಪಕ್ಷಕ್ಕೆ ಮಾರಕವಾಗಿವೆ. ಅವರ ನಿಲುವು, ತತ್ವಗಳಿಂದ ಕಾಂಗ್ರೆಸ್ ಸೋಲುತ್ತಿದೆ, ಅವರ ತತ್ವ-ನಿಲುವು ಜನಹಿತಕ್ಕೆ ಮಾರಕವಾಗಿದೆ. ಅವರ ತತ್ವ-ನಿಲುವು ಓಲೈಕೆ ರಾಜನೀತಿ ಅದಕ್ಕೆ ಅವರು ವಿಫಲರಾಗುತ್ತಾರೆ, ಮತ್ತೇನೂ ಇಲ್ಲ ಎಂದರು.

ಹೆಬ್ಬೆಟ್ಟಿನ ಜನ ಕೂಡ ಮತ್ತೊಬ್ಬರ ಬಳಿ ಕೇಳಿ ಹೆಬ್ಬೆಟ್ಟು ಒತ್ತುತ್ತಾರೆ. ಹೆಬ್ಬೆಟ್ಟಿನ ಜನರಿಗಾದರೂ ತಿಳುವಳಿಕೆ ಇರುತ್ತದೆ, ಇವರದ್ದು ಬರೀ ನಾಟಕ. 2016ರಲ್ಲಿ ಮತಾಂತರ ಡ್ರಾಫ್ಟ್ ಗೆ ಸಹಿ ಹಾಕಿ, ನಾನು ಹಾಕಿಲ್ಲ ಅಂದರು. ಗೊತ್ತಿಲ್ಲದೆ ಸಹಿ ಹಾಕಿದ್ದೇನೆ ಅಂದರು ಎಂದು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯರನ್ನು ವ್ಯಂಗ್ಯಮಾಡಿದರು.

ಮೇಕೆದಾಟು ವಿಚಾರವಾಗಿ ಕಾಂಗ್ರೆಸ್ ಪಾದಯಾತ್ರೆ, ಉರುಳು ಸೇವೆ ಎನೂ ಬೇಕಾದರೂ ಮಾಡಬಹುದು, ಮಾಡಿಕೊಳ್ಳಲಿ. ಕೇಂದ್ರದಲ್ಲಿ 2004 ರಿಂದ 2014 ರವರೆಗೂ ಕಾಂಗ್ರೆಸ್ ಸರ್ಕಾರವಿತ್ತು. ಅನುಮತಿ ಕೊಟ್ಟಿದ್ದರಾ.? 1996 ರಲ್ಲಿ ಪ್ರಸ್ತಾವನೆ, ಮಂಜೂರಾತಿ ಮಾಡಿಸಿದ್ದೆವು ಎಂದು ಎಚ್.ಡಿ.ಕೆ ಹೇಳಿದ್ದಾರೆ. 2004 ರಿಂದ 2014 ಕಾಂಗ್ರೆಸ್ ಸರ್ಕಾರ ಇತ್ತಲ್ಲ ಯಾಕೆ ಅನುಮತಿ ನೀಡಿಲ್ಲ ಇವರ ಅಡಳಿತ ಅವಧಿಯಲ್ಲಿ ತೆಗೆದುಕೊಂಡ ಕ್ರಮ ಏನು ಎಂದು ಪ್ರಶ್ನಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪ್ರತಿಪಕ್ಷಗಳ ನಡವಳಿಕೆಯಿಂದ ನೋವಾಗಿ ರಾಜೀನಾಮೆಗೆ ಮುಂದಾಗಿದ್ದೆ: ಸಭಾಪತಿ ಬಸವರಾಜ ಹೊರಟ್ಟಿ

Sat Dec 25 , 2021
ಹುಬ್ಬಳ್ಳಿ: ಪರಿಷತ್‌ನಲ್ಲಿ ಶುಕ್ರವಾರ ಪ್ರತಿಪಕ್ಷಗಳು ನಡೆದುಕೊಂಡ ರೀತಿ ನನಗೆ ನೋವುಂಟು ಮಾಡಿತ್ತು. ಹೀಗಾಗಿ, ರಾಜೀನಾಮೆಗೆ ಮುಂದಾಗಿದ್ದೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಶನಿವಾರ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಷತ್‌ನಲ್ಲಿ ನಿನ್ನೆ ಪ್ರತಿಪಕ್ಷಗಳು ನಡೆದುಕೊಂಡ ರೀತಿ ನನಗೆ ನೋವುಂಟು ಮಾಡಿತ್ತು. ಹೀಗಾಗಿ, ರಾಜೀನಾಮೆಗೆ ಮುಂದಾಗಿದ್ದೆ. ಕಡೆಗೆ ಪ್ರತಿಪಕ್ಷಗಳ ನಾಯಕರು ನನ್ನನ್ನು ಭೇಟಿ ಮಾಡಿ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿ ಕ್ಷಮೆ ಕೇಳಿದರು ಎಂದು ಹೇಳಿದ್ದಾರೆ. ಸದನದಲ್ಲಿ 3 […]

Advertisement

Wordpress Social Share Plugin powered by Ultimatelysocial