ಅಸ್ಸಾಂನಲ್ಲಿ ಕೆಲ ದಿನಗಳ ಹಿಂದಷ್ಟೇ ನಿಜ ಜೀವನದಲ್ಲಿಯೂ ಮುನ್ನಾಭಾಯ್​ ಎಂಬಿಬಿಎಸ್​ ಘಟನೆಯೊಂದು ನಡೆದಿತ್ತು!

ಅಸ್ಸಾಂನಲ್ಲಿ ಕೆಲ ದಿನಗಳ ಹಿಂದಷ್ಟೇ ನಿಜ ಜೀವನದಲ್ಲಿಯೂ ಮುನ್ನಾಭಾಯ್ಆ ದರೆ ಇದೀಗ ಈ ನಿಜಜೀವನದ ಮುನ್ನಾಭಾಯ್​ ಬಹುತೇಕ ಎಲ್ಲರನ್ನೂ ಮೂರ್ಖರನ್ನಾಗಿಸಿದ್ದಾರೆ ಎಂದು ತಿಳಿದು ಬಂದಿದೆ.ಕಳೆದೊಂದು ವಾರದಿಂದ 24 ವರ್ಷದ ಪಠಾಛಾರ್​ ಕುಚ್ಚಿಯ ರಾಹುಲ್​ ಕುಮಾರ್​​ ಮಾಧ್ಯಮಗಳಲ್ಲಿ ಸುದ್ದಿಯಲ್ಲಿದ್ದರು.ಒಂಟಿ ಮಹಿಳೆಯ ಪುತ್ರನೆಂದು ಹಾಗೂ ಟೀ ಮಾರಾಟ ಮಾಡುತ್ತಾ ಹೊಟ್ಟೆಪಾಡು ಸಾಗಿಸುತ್ತಿರುವ ಈ 24 ವರ್ಷದ ಯುವಕ ಮೊದಲ ಪ್ರಯತ್ನದಲ್ಲಿಯೇ ನೀಟ್​ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಪ್ರತಿಷ್ಠಿತ ಏಮ್ಸ್​ನಲ್ಲಿ ಸೀಟು ಪಡೆದಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಇದೀಗ ಇದೊಂದು ಕಟ್ಟುಕತೆ ಎಂದು ತಿಳಿದುಬಂದಿದೆ.ನೀಟ್​​ ಪರೀಕ್ಷೆಗೆ ಹಾಜರಾಗಿದ್ದ ಆಸ್ಸಾಂನ ವಿದ್ಯಾರ್ಥಿಗಳ ಗುಂಪೊಂದು ರಾಹುಲ್​ ಅವರ ಹೇಳಿಕೆಗಳು ನಕಲಿ ಎಂದು ಮಾಧ್ಯಮಗಳ ಎದುರು ಸಾಬೀತುಪಡಿಸಿವೆ. ಫ್ಯಾಕ್ಟ್​ ಚೆಕ್ ನಲ್ಲಿ​ ಈತ ಬೇರೆಯವರ ದಾಖಲೆಗಳನ್ನು ತೋರಿಸಿ ತನಗೆ ಏಮ್ಸ್​ನಲ್ಲಿ ಸೀಟು ಸಿಕ್ಕಿದೆ ಎಂದು ತಪ್ಪು ಕತೆ ಹೇಳಿದ್ದ ಎಂದು ತಿಳಿದುಬಂದಿದೆ.ರಾಹುಲ್​ ತೋರಿಸಿರುವ ಪ್ರವೇಶ ಪತ್ರದಲ್ಲಿ ನೀಟ್​ ಪರೀಕ್ಷೆಗೆ ಅವರ ರೋಲ್​ ಸಂಖ್ಯೆ2303001114 ಎಂದು ನಮೂದಾಗಿತ್ತು. ಆದರೆ ಕ್ರಾಸ್​ ವೆರಿಫಿಕೇಶನ್​ ಮಾಡಿದ ವೇಳೆಯಲ್ಲಿ ಇದು ಹರಿಯಾಣದ ಕಿರಣ್​ಜೀತ್​ ಕೌರ್​ ರೋಲ್​ ಸಂಖ್ಯೆ ಎಂದು ತಿಳಿದುಬಂದಿದೆ. ಕಿರಣ್​ಜೀತ್​ ಕೌರ್​​ ನೀಟ್​ ಪರೀಕ್ಷೆಯಲ್ಲಿ AIR 11656 ರ್ಯಾಂಕ್​ ಪಡೆದಿದ್ದರು.ಈ ರಾಹುಲ್​ ಏಮ್ಸ್​ನಲ್ಲಿ ಸೀಟು ಪಡೆದ ಸುದ್ದಿ ಎಷ್ಟರ ಮಟ್ಟಿಗೆ ವೈರಲ್​ ಆಗಿತ್ತು ಅಂದರೆ ಆಸ್ಸಾಂ ಮುಖ್ಯಮಂತ್ರಿ ಹಿಮಂತಬಿಸ್ವಾ ಶರ್ಮಾ ರಾಹುಲ್​​ನ ಸಂಪೂರ್ಣ ಶಿಕ್ಷಣ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಹೇಳಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

HEALTH TIPS:ಕಣ್ಣಿನ ಆರೋಗ್ಯವನ್ನು ಸುಧಾರಿಸಲು 5 ಆಯುರ್ವೇದ ಆಹಾರ ಸಲಹೆಗಳು;

Fri Feb 11 , 2022
ಮನೆಯಿಂದ ಕೆಲಸ ಮತ್ತು ಆನ್‌ಲೈನ್ ತರಗತಿಗಳೊಂದಿಗೆ, ನಮ್ಮ ಪರದೆಯ ಸಮಯವು ತೀವ್ರವಾಗಿ ಹೆಚ್ಚಾಗಿದೆ. ಸಾಂಕ್ರಾಮಿಕ ರೋಗವು ಎಲ್ಲವನ್ನೂ ಡಿಜಿಟಲ್ ಮಾಡಿದೆ ಆದರೆ ಕಣ್ಣುಗಳ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡಿದೆ. ಕಣ್ಣಿನ ವ್ಯಾಯಾಮವನ್ನು ಅಭ್ಯಾಸ ಮಾಡುವುದು, ನೀಲಿ ಬೆಳಕಿಗೆ ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡುವ ಕನ್ನಡಕಗಳನ್ನು ಧರಿಸುವುದು ಮತ್ತು ನಿಯಮಿತವಾಗಿ ಕಣ್ಣಿನ ತಪಾಸಣೆಗಳನ್ನು ಮಾಡುವುದು ಅತ್ಯಗತ್ಯ. ಸರಿಯಾದ ರೀತಿಯ ಆಹಾರದೊಂದಿಗೆ, ನೀವು ಕಣ್ಣಿನ ಸಮಸ್ಯೆಗಳನ್ನು ಕೊಲ್ಲಿಯಲ್ಲಿ ಇರಿಸಬಹುದು. ಇದನ್ನು Instagram ಗೆ ತೆಗೆದುಕೊಂಡು, […]

Advertisement

Wordpress Social Share Plugin powered by Ultimatelysocial