ತಮಿಳುನಾಡು, ಆಂಧ್ರದಲ್ಲಿ ಕೊರೊನಾ ಹೆಚ್ಚಾಗಿದೆ

ದೆಹಲಿಯ ನಿಜಾಮುದ್ದೀನ್ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದವರು ಸಹಕಾರ ನೀಡಲ್ಲ ಅಂದ್ರೆ ಇವರ ಮನಸ್ಥಿತಿ ಏನೆಂದು ಅರ್ಥ ಮಾಡಿಕೊಳ್ಳಬೇಕಾಗಿದೆ. ಎಂದು ಬಿಜೆಪಿ ಶಾಸಕ ಸೋಮಸೇಖರ್ ರೆಡ್ಡಿ ಆರೋಪ ಮಾಡಿದ್ದಾರೆ. ಬಳ್ಳಾರಿಯಲ್ಲಿ ಮಾತನಾಡಿದ ಅವರು, ಇದರಿಂದ ತಮಿಳುನಾಡು, ಆಂಧ್ರದಲ್ಲಿ ಕೊರೊನಾ ಹೆಚ್ಚಾಗಿದೆ. ಆದರೆ ಎಲ್ಲರೂ ಉಗ್ರರ ಮನಸ್ಥಿತಿಯವರು ಎಂದು ಹೇಳಲ್ಲ. ಬಳ್ಳಾರಿ ಸೇರಿ ಕೆಲವು ಕಡೆ ಜನರು ಸ್ಪಂದನೆ ನೀಡುತ್ತಿದ್ದಾರೆ. ಎಲ್ಲರೂ ಚಿಕಿತ್ಸೆಗೆ ಸ್ಪಂದಿಸಿದರೆ ಸೋಂಕಿತರು ಹೆಚ್ಚಾಗುತ್ತಿರಲಿಲ್ಲ ಯಾರು ಏನೇ ಮಾಡಿದರೂ ಭಗವಂತ ನಮ್ಮನ್ನ ಕಾಪಾಡುತ್ತಾನೆ, ಈ ಮಣ್ಣಿನಲ್ಲಿ ಹುಟ್ಟಿದವರೆಲ್ಲ ಈ ದೇಶಕ್ಕೆ ಗೌರವ ಕೊಡಬೇಕು. ಭಾರತ ದೇಶಕ್ಕಾಗಿ ಪ್ರತಿಯೊಬ್ಬರು ಪಣ ತೊಡಬೇಕು. ಆದರೆ ಪ್ರಧಾನಿ ಮೋದಿ ಹೇಳಿದಂತೆ ದೀಪ ಹಚ್ಚುತ್ತೇವೆ. ಕೆಲವರು ದೀಪ ಹಚ್ಚಲ್ಲ ಅಂದ್ರೆ ಏನೂ ಮಾಡಕ್ಕ ಆಗಲ್ಲ. ಅವರು ಹಚ್ಚದಿರುವ ದೀಪವನ್ನು ನಾವು ಹಚ್ಚಿ ಕವರ್ ಮಾಡ್ತೇವೆ. ನಮ್ಮ ಮನೆಯಲ್ಲಿ 150 ದೀಪ ಹಚ್ಚುತ್ತೇನೆ ಎಂದು ಹೇಳಿದರು.

 

ವರದಿ: ಪೊಲಿಟಿಕಲ್ ಬ್ಯೂರೊ ಸ್ಪೀಡ್ ನ್ಯೂಸ್ ಕನ್ನಡ

Please follow and like us:

Leave a Reply

Your email address will not be published. Required fields are marked *

Next Post

ಬಾಲ್ಕನಿಯಲ್ಲೇ ಸಾಮಾಜಿಕ ಅಂತರ ಕಾಯ್ದುಕೊಂಡು ದೀಪ ಬೆಳಗಿಸಿ

Sun Apr 5 , 2020
ಬೆಂಗಳೂರಿನಲ್ಲಿ 144 ನಿಷೇಧಾಜ್ಞೆ ಜಾರಿಯಲ್ಲಿದ್ದು , ಗುಂಪು ಸೇರುವುದನ್ನು ನಿಷೇಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮನೆಯಿಂದ ಯಾರೂ ಹೊರಗೆ ಬರಬಾರದು. ಈಗಾಗಲೇ ಹೀಗಾಗಿ ಮನೆಯ ಮುಂದೆ, ಬಾಲ್ಕನಿಯಲ್ಲೇ ಸಾಮಾಜಿಕ ಅಂತರ ಕಾಯ್ದುಕೊಂಡು ದೀಪ ಬೆಳಗಿಸಿ. ಮನೆಯಿಂದ ಯಾರೂ ಹೊರಗೆ ಬರಬೇಡಿ. ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಸೇರಿ ದೀಪ ಬೆಳಗಿಸುವುದು ನಾಲ್ಕಕ್ಕಿಂತ ಹೆಚ್ಚು ಜನ ಸೇರುವುದು, ಪಟಾಕಿ ಹಚ್ಚುವುದು ಮಾಡಬಾರದು.ಯಾವುದೇ ವ್ಯಕ್ತಿ […]
bhaskar rao

Advertisement

Wordpress Social Share Plugin powered by Ultimatelysocial