ಕೊರೊನಾ ಸೋಂಕು ಪತ್ತೆ; 24 ಗಂಟೆಯಲ್ಲಿ 24 ಜನರು ಮಹಾಮಾರಿಗೆ ಬಲಿ

 

ನವದೆಹಲಿ: ದೇಶದಾದ್ಯಂತ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 16 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. 24 ಗಂಟೆಯಲ್ಲಿ 16,135 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ.ಆದರೆ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, 24 ಗಂಟೆಯಲ್ಲಿ 24 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ.

ಈ ಮೂಲಕ ದೇಶದಲ್ಲಿ ಈವರೆಗೆ ಕೋವಿಡ್ ಗೆ ಸಾವನ್ನಪ್ಪಿದವರ ಸಂಖ್ಯೆ 5,25,223ಕ್ಕೆ ಏರಿಕೆಯಾಗಿದೆ.

ಇನ್ನು ದೇಶದಲ್ಲಿ 1,13,864 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, 24 ಗಂಟೆಯಲ್ಲಿ 13,958 ಜನರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ ಈವರೆಗೆ 4,28,79,477 ಜನರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ.

ನಿನ್ನೆ 1,78,383 ಜನರಿಗೆ ವ್ಯಾಕ್ಸಿನ್ ನೀಡಲಾಗಿದ್ದು, ದೇಶದಲ್ಲಿ ಈವರೆಗೆ 1,97,98,21,197 ಡೋಸ್ ಲಸಿಕೆ ಹಾಕಲಾಗಿದೆ. 24 ಗಂಟೆಯಲ್ಲಿ 3,32,978 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇಂಧನ ಕೊರತೆಯಿಂದ ಶಾಲೆಗಳನ್ನೇ ಮುಚ್ಚಿದ ಶ್ರೀಲಂಕಾ!

Mon Jul 4 , 2022
  ಕೊಲಂಬೋ, ಜು.4: ದೇಶದಲ್ಲಿ ಇಂಧನ ಬಿಕ್ಕಟ್ಟಿನ ಸಂಕಷ್ಟದಿಂದಾಗಿ ಶ್ರೀಲಂಕಾದ ಶಿಕ್ಷಣ ಸಚಿವಾಲಯವು ಜುಲೈ 4 ರಿಂದ ಎಲ್ಲಾ ಸರ್ಕಾರಿ ಮತ್ತು ರಾಜ್ಯ ಅನುಮೋದಿತ ಖಾಸಗಿ ಶಾಲೆಗಳಿಗೆ ರಜೆಯ ವಾರವನ್ನು ಘೋಷಿಸಿದೆ. ರಜೆಯ ಮುಂದಿನ ಅವಧಿಯ ನಂತರ ಶಾಲೆಯು ಆರಂಭವಾಗುತ್ತದೆ ಎಂದು ಶ್ರೀಲಂಕಾದ ಶಿಕ್ಷಣ ಸಚಿವರು ಹೇಳಿದ್ದಾರೆ. ಈ ಹಿಂದೆ ಜೂನ್ 18ರಂದು ಶ್ರೀಲಂಕಾ ಸರ್ಕಾರವು ಎಲ್ಲಾ ಶಾಲೆಗಳನ್ನು ಒಂದು ವಾರ ಮುಚ್ಚುವುದಾಗಿ ಘೋಷಿಸಿತ್ತು. ಶ್ರೀಲಂಕಾ ಶಿಕ್ಷಣ ಸಚಿವಾಲಯವು ಕೊಲಂಬೋ […]

Advertisement

Wordpress Social Share Plugin powered by Ultimatelysocial