ಬರುವ ಬಜೆಟ್ಟಿನಲ್ಲಿ‌ಮಾಳಿ‌ ಸಮಾಜಕ್ಕೆ ನಿಗಮ ಘೋಷಣೆ : ಸಿ. ಎಂ ಬೊಮ್ಮಾಯಿ.

 

ಪ್ರಜಾಪ್ರಭುತ್ವದಲ್ಲಿ ನಮ್ಮ‌ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಜಾಗೃತರಾಗಿ ಕೂಡಬೇಕು, ಕಡಿಮೆ ಭೂಮಿಯಲ್ಲಿ ಅತೀ ಹೆಚ್ಚು ಬೆಳೆ ಬೆಳೆದು ಜಗತ್ತಿಗೆ ಅನ್ನ, ಹೂವು, ಕಾಯಿಪಲ್ಲೆ ಕೊಟ್ಟ ಮಾಳಿ/ಮಾಲಗಾರ ಸಮಾಜಕ್ಕೆ ಬರುವ ಬಜೆಟ್ಟಿನಲ್ಲಿ ನಿಗಮ ಘೋಷಣೆ ಮಾಡಿ ಅವರ ಸರ್ವಾಂಗೀಣ ಅಭಿವೃದ್ದಿಗಾಗಿ ನಾನು ಬೆಂಬಲವಾಗಿ ಇರ್ತಿನಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.ಅವರು ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಮುಗಳಖೋಡ ಗ್ರಾಮದಲ್ಲಿ ಜರುಗಿದ ಕರ್ನಾಟಕ ರಾಜ್ಯ ಮಾಳಿ/ಮಾಲಗಾರ ಸಮಾಜದ ರಾಜ್ಯಮಟ್ಟದ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಾ ಮಾಳಿ ಸಮಾಜದ ಸೇವೆ ನಾವೆಲ್ಲ ಪಡೀತಾಯಿದಿವಿ, ಸಮಗ್ರ‌ ಕೃಷಿಯನ್ನು ನಿಜ ಜೀವನದಲ್ಲಿ ಅಳವಡಿಸಕೊಂಡವರು ಮಾಲಗಾರರು, ಮಾಳಿ‌ ಸೇರಿದಂತೆ ಇತರ ಹಿಂದುಳಿದ ವೃತ್ತಿಪರ ಸಮಾಜಗಳಿಗೆ ಕಳೆದ ಬಜೆಟ್ಟಿನಲ್ಲಿ ಸುಮಾರು 400 ಕೋಟಿ ರೂ ಒದಗಿಸಿದ್ದೆನೆ.ಬರುವ ಬಜೆಟ್ಟಿನಲ್ಲಿ ಸಮಾಜಕ್ಕೆ ನಿಗಮವನ್ನು ಮಾಡೇ ಮಾಡ್ತೀನಿ. ಇದು ನನ್ನ ಸಮಾಜ ಈ ರಾಜ್ಯದ ಎಲ್ಲ ದುಡಿಯುವ ಸಮಾಜಗಳು ನಮ್ಮ ಸಮಾಜ, ಕರ್ನಾಟಕದ ಆರ್ಥಿಕ ಅಭಿವೃದ್ದಿ ಸಣ್ಣ ಸಣ್ಣ ಸಮಾಜಗಳ ಕಾಯಕ‌ ಸಮಾಜದಿಂದ ಆಗಿದೆ, ದುಡಿಯುವ ವರ್ಗಕ್ಕೆ ಅತಿ ಹೆಚ್ಚ ಸಹಾಯ ಸಹಕಾರ ಕೊಡುವುದು ನನ್ನ ಉದ್ದೇಶ, ಮುಂದಿನ‌ ಬಜೆಟ್ಟಿನಲ್ಲಿ ಈ ತರಹದ ಸಣ್ಣ ಸಮಾಜಕ್ಕೆ ಕೊಡುಗೆ ಕೊಡುವುದೇ ನನ್ನ ಉದ್ದೇಶ ಎಂದರು. ಭಾರತ ದೇಶದಲ್ಲಿ ಶಿಕ್ಷಣಕ್ರಾಂತಿ ಮಾಡಿದ ಫುಲೆ ದಂಪತಿಗಳ ಆಶೀರ್ವಾದದಿಂದ ಮಾಳಿ ಸಮಾಜ ಮುಂದೆ ಬರಲಿದೆ ಎಂದರು.ಅನಂತರ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು, ಬಾಲಚಂದ್ರ ಜಾರಕಿಹೊಳಿ, ಪಿ. ರಾಜೀವ, ಸಿದ್ದು ಸವದಿ, ಶಶಿಕಲಾ ಜೊಲ್ಲೆ ಅವರು ಮಾತನಾಡಿದರು. ಈ ವೇಳೆ ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ, ಅಣ್ಣಾಸಾಬ ಜೊಲ್ಲೆ, ಈರಣ್ಣ ಕಡಾಡಿ, ದುರ್ಯೋಧನ ಐಹೊಳೆ, ಮಹಾದೇವಪ್ಪ ಯಾದವಾಡ, ಸುಭಾಶ ಗುತ್ತೇದಾರ, ಮುರುಗೇಶ ನಿರಾಣಿ, ಕೆ ಮುಕಡಪ್ಪ, ಶ್ರೀಕಾಂತ ಕುಲಕರ್ಣಿ, ಮಹಾಂತೇಶ ಕವಟಗಿಮಠ, ಶ್ರೀಮಂತ ಪಾಟೀಲ, ನರೇಂದ್ರ ಬಾಬು, ಡಾ ಸಿ ಬಿ ಕುಲಗೋಡ, ಗಿರೀಶ ಬುಟಾಳಿ ಮುರಗೆಪ್ಪಾ ಮಾಲಗಾರ ಸೇರಿದಂತೆ ಲಕ್ಷಾಂತರ ಜನ‌ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಗಾಳಿ ಜನಾರ್ದನ ರೆಡ್ಡಿಯನ್ನು ಭೇಟಿಯಾಗಿದ್ದು ವದಂತಿ ಸುಳ್ಳು : ಪ್ರತಾಪ್ ಗೌಡ ಪಾಟೀಲ್.

Tue Dec 27 , 2022
ಮಸ್ಕಿ  : ನಾನು ಪ್ರವಾಸ ಇದ್ದ ಕಾರಣದಿಂದಾಗಿ ನನ್ನ ರಾಜಕೀಯ ಪ್ರಯಾಣದ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯಕರ್ತರಲ್ಲಿ ಗೊಂದಲಉಂಟು ಮಾಡಿತು ಪ್ರತಾಪ್ ಗೌಡ ಪಾಟೀಲ್ ಗಾಲಿ ಜನಾರ್ದನ ರೆಡ್ಡಿ ರಾತ್ರೋರಾತ್ರಿ ಭೇಟಿಯಾಗಿದ್ದಾರೆ ಎಂದು ಸುಳ್ಳು ವದಂತಿ ಕೇಳಿಬಂದಿದ್ದು ಮಂಗಳವಾರ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಅವರ ನಿವಾಸದಲ್ಲಿ ಮಾತನಾಡಿದ ಅವರು ನಾನು ಯಾವುದೇ ರೀತಿಯಾಗಿ ಗಾಲಿ ಜನಾರ್ದನ್ ರೆಡ್ಡಿ ಅವರನ್ನು ಭೇಟಿಯಾಗಿಲ್ಲ ಕ್ಷೇತ್ರದಲ್ಲಿ ಸುಳ್ಳು ವದಂತಿ ಹಬ್ಬಿದೆ ಇದೆಲ್ಲ […]

Advertisement

Wordpress Social Share Plugin powered by Ultimatelysocial