ಕೋವಿಡ್‌-19: ದೇಶದಲ್ಲಿ 4,041 ಮಂದಿಗೆ ಸೋಂಕು, 21 ಸಾವಿರ ದಾಟಿದ ಸಕ್ರಿಯ ಪ್ರಕರಣ

ನವದೆಹಲಿ:ಭಾರತದಲ್ಲಿ ಕಳೆದ 24ಗಂಟೆಯಲ್ಲಿ 4,041 ಕೋವಿಡ್ 19 ಸೋಂಕು ಪ್ರಕರಣ ದೃಢವಾಗಿದ್ದು, ಹತ್ತು ಮಂದಿ ಸಾವನ್ನಪ್ಪಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ (ಜೂನ್ 03) ಬಿಡುಗಡೆಗೊಳಿಸಿರುವ ಅಂಕಿ-ಅಂಶದಲ್ಲಿ ತಿಳಿಸಿದೆ.

ದೇಶದಲ್ಲಿನ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 21, 177ಕ್ಕೆ ಏರಿಕೆಯಾಗಿದೆ.

ಗುರುವಾರ ಭಾರತದಲ್ಲಿ 3,712 ಕೋವಿಡ್ 19 ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ದೇಶದಲ್ಲಿನ ಕೋವಿಡ್ ಪ್ರಕರಣಗಳ ಸಂಖ್ಯೆ 3 ತಿಂಗಳ ಬಳಿಕ 4 ಸಾವಿರ ದಾಟಿದಂತಾಗಿದೆ.

ಭಾರತದಲ್ಲಿನ ಕೋವಿಡ್ 19 ಸೋಂಕು ಪ್ರಕರಣಗಳ ಒಟ್ಟು ಸಂಖ್ಯೆ 4,31,68,585ಕ್ಕೆ ಏರಿಕೆಯಾಗಿದೆ. 24 ಗಂಟೆಯಲ್ಲಿ 10 ಮಂದಿ ಸಾವನ್ನಪ್ಪಿದ್ದು, ದೇಶಾದ್ಯಂತ ಈವರೆಗೆ ಕೋವಿಡ್ 19 ಸೋಂಕಿನಿಂದ ಸಾವನ್ನಪ್ಪಿರುವವರ ಒಟ್ಟು ಸಂಖ್ಯೆ 5,24,651ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ದೇಶದಲ್ಲಿನ ಕೋವಿಡ್ 19 ಚೇತರಿಕೆ ಪ್ರಮಾಣ 98.74ರಷ್ಟಿದೆ. ಒಂದೇ ದಿನದಲ್ಲಿ ಭಾರತದಲ್ಲಿ 1,668 ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. ದೇಶದಲ್ಲಿನ ಪ್ರತಿದಿನ ಪಾಸಿಟಿವಿಟಿ ದರ ಶೇ.0.60ರಷ್ಟಿದೆ. ವಾರದ ಪಾಸಿಟಿವಿಟಿ ದರ ಶೇ.0.56ರಷ್ಟಿದೆ ಎಂದು ಅಂಕಿಅಂಶ ತಿಳಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನೇಪಾಳ ವಿಮಾನ ದುರಂತ, ಹಿಂದೂ ದೇವಾಲಯದಲ್ಲಿ ಭಾರತೀಯ ಪ್ರಯಾಣಿಕರ ಮೃತದೇಹ ಅಂತ್ಯಸಂಸ್ಕಾರ

Fri Jun 3 , 2022
ಕಾಠ್ಮಂಡು(ಜೂ. 03): ಟೇಕಾಫ್ ಆಗಿ 15 ನಿಮಿಷಕ್ಕೇ ಕಾಣೆಯಾದ ನೇಪಾಳದ (Nepal) ವಿಮಾನ ಕ್ರಾಶ್ ಆಗಿದ್ದು ಇದರಲ್ಲಿ ಭಾರತದ ನಾಲ್ವರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ನೇಪಾಳದ ಪರ್ವತ ಪ್ರದೇಶವಾದ ಮುಸ್ತಾಂಗ್ ಜಿಲ್ಲೆಯಲ್ಲಿ ವಿಮಾನ ಅಪಘಾತದಲ್ಲಿ (Plane Crash) ಸಾವನ್ನಪ್ಪಿದ ನಾಲ್ವರು ಭಾರತೀಯರ ಮೃತದೇಹಗಳನ್ನು ಇಲ್ಲಿನ ಪವಿತ್ರ ಪಶುಪತಿನಾಥ ದೇವಸ್ಥಾನದಲ್ಲಿ (Pasupathinatha Temple) ಗುರುವಾರ ಅಂತ್ಯಸಂಸ್ಕಾರ ಮಾಡಲಾಯಿತು. ತಾರಾ ಏರ್‌ನ ಕೆನಡಾ ನಿರ್ಮಿತ ಟರ್ಬೊಪ್ರೊಪ್ ಟ್ವಿನ್ ಓಟರ್ 9N-AET ವಿಮಾನವು ನಾಲ್ವರು ಭಾರತೀಯರು, […]

Advertisement

Wordpress Social Share Plugin powered by Ultimatelysocial