ಕಳೆದ 24 ಗಂಟೆಗಳಲ್ಲಿ ಹೊಸದಾಗಿ ಕೋವಿಡ್‌-19 ದೃಢಪಟ್ಟ 2,380

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಹೊಸದಾಗಿ ಕೋವಿಡ್‌-19 ದೃಢಪಟ್ಟ 2,380 ಪ್ರಕರಣಗಳು ವರದಿಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 13,433ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಕೋವಿಡ್‌ ಕಾಣಿಸಿಕೊಂಡಾಗಿನಿಂದ ಇದುವರೆಗೆ ಒಟ್ಟು 4,30,49,974 ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ.

ಇಂದು (ಗುರುವಾರ) ಬೆಳಗ್ಗೆ 8ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ 56 ಸೋಂಕಿತರು ಸಾವಿಗೀಡಾಗಿದ್ದಾರೆ. ಇದರೊಂದಿಗೆ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ ಒಟ್ಟು 5,22,062ಕ್ಕೆ ತಲುಪಿದೆ.

ಈವರೆಗೆ ವರದಿಯಾಗಿರುವ ಒಟ್ಟು ಪ್ರಕರಣಗಳ ಪೈಕಿ ಸಕ್ರಿಯ ಪ್ರಕರಣಗಳ ಪ್ರಮಾಣ ಶೇ 0.03 ರಷ್ಟಿದೆ. ಚೇತರಿಕೆ ಪ್ರಮಾಣ ಶೇ 98.76ರಷ್ಟಿದೆ ಎಂದೂ ಸಚಿವಾಲಯ ತಿಳಿಸಿದೆ.

ದೇಶದಲ್ಲಿ ವರದಿಯಾದ ಕೋವಿಡ್ ಪ್ರಕರಣಗಳ ಸಂಖ್ಯೆ 2020ರ ಆಗಸ್ಟ್‌ 7ರಂದು 20 ಲಕ್ಷದ ಗಡಿ ದಾಟಿತ್ತು. ಈ ಸಂಖ್ಯೆ ಅದೇ ವರ್ಷ ಆಗಸ್ಟ್‌ 23ರಂದು 30ಲಕ್ಷಕ್ಕೆ, ಸೆಪ್ಟೆಂಬರ್‌ 5ರಂದು 50 ಲಕ್ಷಕ್ಕೆ ಏರಿಕೆಯಾಗಿತ್ತು. ಡಿಸೆಂಬರ್‌ 19ರಂದು ಒಂದು ಕೋಟಿಗೆ ಏರಿತ್ತು.

ಕಳೆದ ವರ್ಷದ (2021) ಮಾರ್ಚ್‌ 4ರಂದು ಎರಡು ಕೋಟಿ ಹಾಗೂ ಜೂನ್‌ 23ರಂದು ಮೂರು ಕೋಟಿ ಪ್ರಕರಣಗಳು ವರದಿಯಾಗಿದ್ದವು. ಈ ವರ್ಷ ಜನವರಿ 26ರಂದು 4 ಕೋಟಿ ಗಡಿ ದಾಟಿತ್ತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಮಸ್ತ ಕೇರಳ ಮತ ವಿದ್ಯಾಭ್ಯಾಸ ಬೋರ್ಡ್ ನಡೆಸಿದ ಪಬ್ಲಿಕ್ ಪರೀಕ್ಷೆಯಲ್ಲಿ ಹೊರೈಝನ್ !

Thu Apr 21 , 2022
ವಿಟ್ಲ, ಎ.21: ಸಮಸ್ತ ಕೇರಳ ಮತ ವಿದ್ಯಾಭ್ಯಾಸ ಬೋರ್ಡ್ ನಡೆಸಿದ ಪಬ್ಲಿಕ್ ಪರೀಕ್ಷೆಯಲ್ಲಿ ಹೊರೈಝನ್ ಪಬ್ಲಿಕ್ ಸ್ಕೂಲ್‌ ನ ಏಳನೇ ಮತ್ತು ಹತ್ತನೇ ತರಗತಿಯ ವಿದ್ಯಾರ್ಥಿಗಳು ಶೇ.100 ಫಲಿತಾಂಶವನ್ನು ದಾಖಲಿಸಿರುತ್ತಾರೆ. ಐದನೇಯ ತರಗತಿಯ ಝುಹೈಬ್ ರಹಿಮಾನ್, ಏಳನೇ ತರಗತಿಯ ಫಾತಿಮತ್ ಸಲ್ಮಾ, ಖದೀಜತ್ ಮಿನ್‌ಹಾ, ಫಾತಿಮತ್ ರಿಫಾ, ಆಯಿಶತ್ ಮುರ್ಷಿದಾ ಹಾಗೂ ಹತ್ತನೇ ತರಗತಿಯ ಹಝ್ರತ್ ಆಲಿಯ, ಫಾತಿಮತ್ ಮುಶ್ರಿಫಾ ಉನ್ನತ ಶ್ರೇಣಿಯಲ್ಲಿ (ಡಿಸ್ಟಿಂಕ್ಷನ್) ತೇರ್ಗಡೆಯಾಗಿರುತ್ತಾರೆ ಎಂದು ಪ್ರಕಟನೆ ತಿಳಿಸಿದೆ. […]

Advertisement

Wordpress Social Share Plugin powered by Ultimatelysocial