ಉತ್ತರಾಖಂಡ ರಾಜ್ಯದ ಬ್ರಾಂಡ್ ಅಂಬಾಸಿಡರ್ ಆಗಿ ಬ್ಯಾಟ್ಸ್‌ಮನ್ ರಿಷಬ್ ಪಂತ್ ನೇಮಕ

ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಅವರನ್ನು ಉತ್ತರಾಖಂಡ ರಾಜ್ಯದ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಲಾಗಿದೆ.ಈ ಬಗ್ಗೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಮಾಹಿತಿ ನೀಡಿದ್ದು, ರಾಜ್ಯದ ರಾಯಭಾರಿಯಾಗಿ ಪಂತ್ ನೇಮಕಗೊಳ್ಳುವ ಮೂಲಕ ಯುವಕರನ್ನು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಲಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ…ರಾಜ್ಯದ ಯುವಕರನ್ನು ಕ್ರೀಡೆ ಮತ್ತು ಸಾರ್ವಜನಿಕ ಆರೋಗ್ಯದ ಕಡೆಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಭಾರತದ ಅತ್ಯುತ್ತಮ ಕ್ರಿಕೆಟ್ ಆಟಗಾರರಲ್ಲಿ ಒಬ್ಬರು, ಯುವಕರ ರೋಲ್ ಮಾಡೆಲ್ ಮತ್ತು ಉತ್ತರಾಖಂಡದ ಪುತ್ರ ರಿಷಬ್ ಪಂತ್ ಅವರನ್ನು ನಮ್ಮ ಸರ್ಕಾರವು ‘ರಾಜ್ಯ ಬ್ರಾಂಡ್ ಅಂಬಾಸಿಡರ್’ ಆಗಿ ನೇಮಿಸಿದೆ ಎಂದು ಅವರು ಧಾಮಿ ಹೇಳಿದ್ದಾರೆ.ಇನ್ನು ತಮ್ಮನ್ನು ಸರ್ಕಾರದ ರಾಯಭಾರಿಯಾಗಿ ನೇಮಕ ಮಾಡಿದ ಕುರಿತು ಸಂತಸ ವ್ಯಕ್ತಪಡಿಸಿರುವ ರಿಷಬ್ ಪಂತ್, ‘ಫಿಟ್ನೆಸ್‌ನತ್ತ ಜನರನ್ನು ಪ್ರೇರೇಪಿಸಲು ತಮ್ಮ ಕೈಲಾದ ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತಂದೆಯ ಜನ್ಮದಿನಕ್ಕೆ ನಟಿ ಸುಶ್ಮಿತಾ ಸೇನ್‌ ಭಾವುಕ ಪೋಸ್ಟ್‌

Mon Dec 20 , 2021
ನವದೆಹಲಿ: ತಂದೆ ಶುಬೀರ್ ಸೇನ್‌ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಬಾಲಿವುಡ್‌ ನಟಿ ಸುಶ್ಮಿತಾ ಸೇನ್ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೊಗಳೊಂದಿಗೆ ತಂದೆಯ ಕುರಿತು ಭಾವುಕ ಬರಹವನ್ನು ಪೋಸ್ಟ್ ಮಾಡಿರುವ ಸುಶ್ಮಿತಾ ಸೇನ್‌, ‘ಹುಟ್ಟುಹಬ್ಬದ ಶುಭಾಶಯಗಳು ಬಾಬಾ. ಅತ್ಯಂತ ಪ್ರೀತಿಯ ಮತ್ತು ಕರುಣಾಮಯಿ ವ್ಯಕ್ತಿ ನೀವು. ನಿಮ್ಮ ಆರೋಗ್ಯ ಮತ್ತು ಸಂತೋಷಕ್ಕಾಗಿ ನಾನು ಯಾವಾಗಲೂ ಆಶಿಸುತ್ತೇನೆ. ನೀವು ನನ್ನ ತಂದೆಯಾಗಿರುವುದಕ್ಕೆ, ನನ್ನ ಮಕ್ಕಳಿಗೆ ತಾತನಾಗಿ ದೊರೆತಿರುವುದಕ್ಕೆ ನಾವೆಲ್ಲರೂ […]

Advertisement

Wordpress Social Share Plugin powered by Ultimatelysocial