ಸಿಎಸ್ ಕೆ ಫ್ರಾಂಚೈಸಿಗೆ ಧೋನಿ ಮೊದಲ ಆಯ್ಕೆಯ ನಾಯಕನಾಗಿರಲಿಲ್ಲ:ಮಾಜಿ ಸಿಎಸ್ ಕೆ ಆಟಗಾರ ಸುಬ್ರಹ್ಮಣ್ಯಮ್ ಬದ್ರಿನಾಥ್

ಭಾರತದ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರು 2008 ರಲ್ಲಿ ಐಪಿಎಲ್ ಆರಂಭವಾದಾಗಿನಿಂದ ಚೆನ್ನೈ ಸೂಪರ್ ಕಿಂಗ್ಸ್‌ ನಲ್ಲಿದ್ದಾರೆ. ಮುಂಬರುವ 2022 ಸಾಲಿನ ಕೂಟದಲ್ಲೂ ಅವರು ಮತ್ತೊಮ್ಮೆ ಸಿಎಸ್ ಕೆ ತಂಡವನ್ನು ಮುನ್ನಡೆಸಲಿದ್ದಾರೆ.ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಫ್ರಾಂಚೈಸಿಯನ್ನು ಇದುವರೆಗೆ ನಾಲ್ಕು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಆದರೆ ಸಿಎಸ್ ಕೆ ಫ್ರಾಂಚೈಸಿಗೆ ಧೋನಿ ಮೊದಲ ಆಯ್ಕೆಯ ನಾಯಕನಾಗಿರಲಿಲ್ಲ ಎಂದು ಮಾಜಿ ಸಿಎಸ್ ಕೆ ಆಟಗಾರ ಸುಬ್ರಹ್ಮಣ್ಯಮ್ ಬದ್ರಿನಾಥ್ ಹೇಳಿದ್ದಾರೆ.ಬದ್ರಿನಾಥ್ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡುತ್ತಾ, ಸಿಎಸ್‌ ಕೆ ಫ್ರಾಂಚೈಸಿಯು ವೀರೆಂದ್ರ ಸೆಹವಾಗ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಿತ್ತು, ಆದರೆ ನಂತರ ಧೋನಿಯ ಆಯ್ಕೆ ನಡೆಯಿತು ಎಂದಿದ್ದಾರೆ.2008 ರಲ್ಲಿ ಐಪಿಎಲ್ ಪ್ರಾರಂಭವಾದಾಗ ಚೆನ್ನೈ ಸೂಪರ್ ಕಿಂಗ್ಸ್‌ಗೆ ಮೊದಲ ಆಯ್ಕೆ ಯಾರೆಂದು ನೀವು ನೋಡಿದರೆ, ಅದು ವೀರೇಂದ್ರ ಸೆಹವಾಗ್. ಸೆಹವಾಗ್ ಅವರನ್ನು ಆಯ್ಕೆ ಮಾಡಲು ಮ್ಯಾನೇಜ್‌ಮೆಂಟ್ ಖಚಿತವಾಗಿ ನಿರ್ಧರಿಸಿತ್ತು, ಆದರೆ ಸೆಹವಾಗ್ ಅವರು ಡೆಲ್ಲಿ ಡೇರ್ ಡೆವಿಲ್ಸ್ ತಂಡ ಸೇರಲು ಬಯಸಿದರು” ಎಂದು ಬದ್ರಿನಾಥ್ ಹೇಳಿದರು.2008 ರಲ್ಲಿ ಎಂಎಸ್ ಧೋನಿ ಅತ್ಯಂತ ದುಬಾರಿ ಆಟಗಾರರಾಗಿದ್ದರು, ಅವರನ್ನು 6 ಕೋಟಿ ರೂಪಾಯಿಗಳಿಗೆ ಸಿಎಸ್ ಕೆ ಖರೀದಿಸಿತು ಎಂದು ಮಾಜಿ ಸಿಎಸ್ ಕೆ ಆಟಗಾರ ಬದ್ರಿನಾಥ್ ಮೆಲುಕು ಹಾಕಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಇನ್ನಷ್ಟು ಬಿಗಿಗೊಳಿಸಲಾಗುವುದು:ಸಚಿವ ಪ್ರಭು ಚೌಹಾಣ್ 

Sun Dec 19 , 2021
ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಇನ್ನಷ್ಟು ಬಿಗಿಗೊಳಿಸಲಾಗುವುದು ಎಂದು ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್  ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಇನ್ನಷ್ಟು ಬಿಗಿಗೊಳಿಸಲಾಗುವುದು.ಗೋಹತ್ಯೆ ನಿಷೇಧ ಜಾರಿಯಾದ ನಂತರ ಸಾವಿರಾರು ಗೋವುಗಳನ್ನು ರಕ್ಷಣೆ ಮಾಡಲಾಗಿದೆ. ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಗೋಮಾಳ ಜಾಗದಲ್ಲಿ ಗೋಶಾಲೆಗಳನ್ನು ತೆರೆಯಲು ಸೂಚನೆ ನೀಡಲಾಗಿದೆ ಎಂದರು.ಬೆಳಗಾವಿಯಲ್ಲಿ ಎಂ.ಇ.ಎಸ್ ಪುಂಡಾಟ ಹೆಚ್ಚಾಗುತ್ತಿದೆ.ಎಂಇಎಸ್ ಆಟಕ್ಕೆ ಸರ್ಕಾರ ಬ್ರೇಕ್ ಹಾಕಲಿದೆ. ಈಗಾಗಲೇ ಎಂಇಇಎಸ್ ಬ್ಯಾನ್ ಮಾಡುವ ವಿಚಾರ ಚರ್ಚೆ […]

Advertisement

Wordpress Social Share Plugin powered by Ultimatelysocial