ನಿಂತಿದ್ದ ಸ್ವಿಫ್ಟ್ ಕಾರ್ ಗೆ ಜಾಗ್ವಾರ್ ಡಿಕ್ಕಿ- ಸರಣಿ ಅಪಘಾತ ಓರ್ವ ಮಹಿಳೆ ಸಾವು

ಬೆಂಗಳೂರಿನ ನೈಸ್ ರಸ್ತೆಯಲ್ಲಿ ಸರಣಿ ಅಪಘಾತ ಸಂಭವಿಸಿ ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಳಕಗೆ ಬಂದಿದೆ.ಅಪಘಾತದ ರಭಸಕ್ಕೆ ಸ್ವಿಫ್ಟ್‌ ಕಾರಿನಲ್ಲಿದ್ದ ಮಹಿಳೆ ಶಶಿಕಲಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು, ಅಪಘಾತದಲ್ಲಿ ಶಶಿಕಲಾ ಪತಿ ಗಂಗಾಧರಯ್ಯಗೆ ಗಾಯಗಳಾಗಿದೆ. ನಿಲ್ಲಿಸಿದ್ದ ಸ್ವಿಫ್ಟ್ ಕಾರ್​ಗೆ ಜಾಗ್ವಾರ್ ಕಾರು ಡಿಕ್ಕಿ ಹೊಡೆದ ಬಳಿಕ ಸ್ವಿಫ್ಟ್‌ ಕಾರ್​ ಲಾರಿಯೊಂದಕ್ಕೆ ಡಿಕ್ಕಿಯಾಗಿದೆ. ಈ ವೇಳೆ, ವೈಕುಂಠ ಏಕಾದಶಿ ಪೂಜೆಗೆಂದು ತೆರಳುತ್ತಿದ್ದ ಶಶಿಕಲಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಸದ್ಯ, ಅಪಘಾತದ ಬಳಿಕ ಜಾಗ್ವಾರ್ ಕಾರ್​ನಲ್ಲಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಬ್ಬರ ವಿಚಾರಣೆ ನಡೆಸಲಾಗುತ್ತಿದೆ.

ಇದನ್ನೂ ಓದಿ:ಬೇಲೂರು ಗ್ರಾಮದ ರಸ್ತೆಯ ಮೇಲೆ ಸರಣಿ ರಸ್ತೆ ಅಪಘಾತ-ಹೂಲಸುರೂ ಪಟ್ಟಣದ p.s.I ಗೌತಮ್ ಪರಿಶೀಲಿಸಿ

Please follow and like us:

Leave a Reply

Your email address will not be published. Required fields are marked *

Next Post

51 ಲಕ್ಷ ಮಂದಿಗೆ 2 ಡೋಸ್ ಕೊರೋನಾ ಲಸಿಕೆ- ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿಕೆ

Fri Dec 25 , 2020
ದೆಹಲಿಯಲ್ಲಿ ಮೊದಲ ಹಂತದಲ್ಲಿ 50 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಕೊರೋನಾ ಲಸಿಕೆ ನೀಡಲಾಗುವುದು. ಈಗಾಗಲೇ ಕೊರೋನಾ ವಾರಿಯರ್ಸ್ ಗಳ ಪಟ್ಟಿಯನ್ನು ಸಿದ್ದಪಡಿಸಲಾಗುತ್ತಿದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದೆಹಲಿ ಸರ್ಕಾರ ಲಸಿಕೆ ವಿತರಣೆಗಾಗಿ ಸಕಲ ಸಿದ್ಧತೆ ಕೈಗೊಂಡಿದೆ. ಮೊದಲಿಗೆ 51 ಲಕ್ಷ ಜನರಿಗೆ ಲಸಿಕೆ ನೀಡಲಿದ್ದು, ಪ್ರತಿ ವ್ಯಕ್ತಿಗೆ ಎರಡು ಡೋಸ್ ಲಸಿಕೆ ನೀಡಲಾಗುವುದು. ಲಸಿಕೆ ಸಂಗ್ರಹಿಸುವ ಸಾಮರ್ಥ್ಯವನ್ನು ಹೆಚ್ಚಿಸಲಾಗುವುದು ಎಂದು ಹೇಳಿದ್ದಾರೆ. […]

Advertisement

Wordpress Social Share Plugin powered by Ultimatelysocial