ಕಚ್ಛಾ ತೈಲ ಬೆಲೆ ಏರಿಕೆ;

 ಅಮೆರಿಕದ ಫೆಡರಲ್ ಬ್ಯಾಂಕ್ ಬಡ್ಡಿ ದರವನ್ನು 25 ಮೂಲಾಂಕಗಳಷ್ಟು ಏರಿಕೆ ಮಾಡಿದ ಬೆನ್ನಲ್ಲೇ ಕಚ್ಛಾ ತೈಲ ಬೆಲೆಗಳು ಗರಿಗೆದರಿವೆ. ಬಡ್ಡಿ ದರ ಹೆಚ್ಚಳದಿಂದ ಅಮೆರಿಕದ ಡಾಲರ್ ಕರೆನ್ಸಿ ಮೌಲ್ಯ ತುಸು ಕುರಿದ ಪರಿಣಾಮ ಇದು.ನವದೆಹಲಿ : ಅಮೆರಿಕದ ಫೆಡರಲ್ ಬ್ಯಾಂಕ್ ಬಡ್ಡಿ ದರವನ್ನು  25 ಮೂಲಾಂಕಗಳಷ್ಟು ಏರಿಕೆ ಮಾಡಿದ ಬೆನ್ನಲ್ಲೇ ಕಚ್ಛಾ ತೈಲ ಬೆಲೆಗಳು   ಗರಿಗೆದರಿವೆ . ಬಡ್ಡಿ ದರ ಹೆಚ್ಚಳದಿಂದ ಅಮೆರಿಕದ ಡಾಲರ್ ಕರೆನ್ಸಿ ಮೌಲ್ಯ ತುಸು ಕುರಿದ ಪರಿಣಾಮ ಇದು . ಜೊತೆಗೆ ತೈಲ ಉತ್ಪಾದಕ ದೇಶಗಳ ಓಪೆಕ್ ಸಭೆಯಲ್ಲಿ ತೈಲ ಉತ್ಪಾದನೆಯ ನೀತಿಯಲ್ಲಿ ಬದಲಾವಣೆ ಮಾಡದಿರಲು ನಿರ್ಧರಿಸಿದ ಹಿನ್ನೆಲೆಯಲ್ಲೂ ತೈಲ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಗೆ ಪುಷ್ಟಿ ಸಿಕ್ಕಿದೆ .

ಅಮೆರಿಕದಲ್ಲಿ ಹಣದುಬ್ಬರ ನಿಯಂತ್ರಣಕ್ಕೆ ಬರುತ್ತಿದೆ. ಇದರಿಂದ ಫೆಡರಲ್ ಬ್ಯಾಂಕ್​ನ ಬಡ್ಡಿ ದರ ಏರಿಕೆ ಟ್ರೆಂಡ್ ನಿಲ್ಲಬಹುದು ಎಂಬ ಅಂದಾಜಿನಲ್ಲಿ ಇತ್ತೀಚಿನ ಕೆಲ ದಿನಗಳಿಂದ ತೈಲ ಬೆಲೆಗಳು ಇಳಿದಿದ್ದವು. ಆದರೆ, ಫೆಡರಲ್ ಬ್ಯಾಂಕ್ 25 ಬೇಸಿಸ್ ಪಾಯಿಂಟ್​ಗಳಷ್ಟು ಬಡ್ಡಿ ಏರಿಕೆ ಮಾಡಿದ್ದಲ್ಲದೇ ಭವಿಷ್ಯದಲ್ಲೂ ಹಣದುಬ್ಬರ ಸಂಪೂರ್ಣ ಹತೋಟಿಗೆ ಬರುವವರೆಗೂ ಬಡ್ಡಿ ದರ ಏರಿಕೆ ಮಾಡುತ್ತದೆ ಎಂದು ಬಹಳ ಖಚಿತವಾದ ಸುಳಿವನ್ನು ನೀಡಿದೆ. ಇದರಿಂದ ಡಾಲರ್ ಕರೆನ್ಸಿ ಮೌಲ್ಯ ಕುಸಿತ ಹಾದಿ ಹಿಡಿದಿದೆ. ಇದು ಕಚ್ಛಾ ತೈಲ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.

ಒಪೆಕ್ ಸಭೆಯ ಎಫೆಕ್ಟ್

ಇದೇ ವೇಳೆ, ಇಂದು ಗುರುವಾರ ಆಸ್ಟ್ರಿಯಾದ ವಿಯೆನ್ನಾದಲ್ಲಿ ನಡೆದ ಒಪೆಕ್ ಪ್ಲಸ್   ಕೂಟದ ಸಭೆಯಲ್ಲಿ ಉತ್ಪಾದನಾ ಪ್ರಮಾಣದ ನೀತಿಯನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲು ನಿರ್ಧರಿಸಲಾಗಿದೆ. ಮಾಮೂಲಿಗಿಂತ ಕಡಿಮೆ ಪ್ರಮಾಣದಲ್ಲಿ ತೈಲ ಉತ್ಪಾದನೆಯನ್ನು ಡಿಸೆಂಬರ್ ತಿಂಗಳವರೆಗೂ ಮುಂದುವರಿಸಲು ಈ ಸಭೆಯಲ್ಲಿ ತೀರ್ಮಾನಿಸಲಾಯಿತು. ತೈಲ ಬೆಲೆಗೆ ಬೇಡಿಕೆ ಇಳಿಯಬಾರದು ಎಂಬುದು ಇದರ ಉದ್ದೇಶ.

 ಯಾವುದಿದು ಒಪೆಕ್ ಗುಂಪು?

ಒಪೆಕ್ ಎಂಬುದು ಪೆಟ್ರೋಲಿಯಂ ರಫ್ತುದಾರ ದೇಶಗಳ ಸಂಘಟನೆ  1960ರಲ್ಲಿ ಇರಾಕ್, ಇರಾನ್, ಕುವೇತ್, ಸೌದಿ ಅರೇಬಿಯಾ ಮತ್ತು ವೆನಿಜುವೆಲಾ ದೇಶಗಳು ಸೇರಿ ಮಾಡಿದ ಸಂಘಟನೆ. ಪೆಟ್ರೋಲಿಯಂ ಉತ್ಪಾದಕರಿಗೆ ಸೂಕ್ತ ಬೆಲೆ ಪ್ರಾಪ್ತವಾಗುವಂತೆ ನೋಡಿಕೊಳ್ಳುವ ಉದ್ದೇಶದಿಂದ ಈ ಸಂಘಟನೆ ಅಸ್ತಿತ್ವಕ್ಕೆ ಬಂದಿತ್ತು. ನಂತರ ಈ ಐದು ದೇಶಗಳ ಜೊತೆಗೆ ಇತರ ಕೆಲ ತೈಲ ಉತ್ಪಾದಕ ದೇಶಗಳಾದ ಆಲ್ಜೀರಿಯಾ, ಆಂಗೋಲಾ, ಕಾಂಗೋ, ಈಕ್ವಟೋರಿಯಲ್ ಗಿನಿಯಾ, ಗ್ಯಾಬೋನ್, ಲಿಬಿಯಾ, ನೈಜೀರಿಯಾ ಮತ್ತು ಯುಎಇ ಸೇರಿ ಒಟ್ಟು 13 ದೇಶಗಳಿವೆ.

2016ರಲ್ಲಿ ಈ ಒಪೆಕ್ ಸಂಘಟನೆ ಜೊತೆಗೆ ರಷ್ಯಾ, ಕಜಕಸ್ತಾನ, ಅಜರ್ಬೈಜಾನ್, ಮೆಕ್ಸಿಕೋ, ಓಮನ್ ಸೇರಿ ಇತರ 10 ತೈಲ ಉತ್ಪಾದಕ ದೇಶಗಳು ಮೈತ್ರಿ ಮಾಡಿಕೊಂಡು ಒಪೆಕ್ ಪ್ಲಸ್ ಗುಂಪನ್ನು ರಚಿಸಲಾಗಿದೆ.

 ಮುಂದಿನ ದಿನಗಳಲ್ಲಿ ತೈಲ ಬೆಲೆ ಇನ್ನಷ್ಟು ಹೆಚ್ಚಳ?

ಕೋವಿಡ್ ಅಲೆ, ಲಾಕ್ ಡೌನ್ ಕಾರಣಗಳಿಂದಾಗಿ ಕುಸಿತಗೊಂಡಿದ್ದ ಚೀನಾದ ಆರ್ಥಿಕತೆ ಮುಂಬರುವ ದಿನಗಳಲ್ಲಿ ಚೇತರಿಕೆ ಕಾಣುವ ಸಾಧ್ಯತೆ ಇದೆ. ಹೀಗಾದಲ್ಲಿ ಪೆಟ್ರೋಲಿಯಂಗೆ ಬೇಡಿಕೆ ಬಹಳ ಹೆಚ್ಚುತ್ತದೆ. ಈಗ ತೈಲ ಉತ್ಪಾದಕ ಕಂಪನಿಗಳು ಸೀಮಿತ ಪ್ರಮಾಣದಲ್ಲಿ ಮಾತ್ರ ತೈಲ ಹೊರತರಲು ನಿರ್ಧರಿಸಿರುವುದರಿಂದ ಬೇಡಿಕೆ ಹೆಚ್ಚಾಗಿ ಬೆಲೆ ಏರಿಕೆಯಾಗುವ ನಿರೀಕ್ಷೆ ಇದೆ. ತೈಲ ಬೆಲೆ ಹೆಚ್ಚಾಗುತ್ತಿದ್ದಲ್ಲಿ ಸ್ವಾಭಾವಿಕವಾಗಿ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಮತ್ತಿತರ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚಳವಾಗಲಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೇಷ ರಾಶಿ ಭವಿಷ್ಯ.

Fri Feb 3 , 2023
ಏನಾದರೂ ಆಸಕ್ತಿದಾಯಕವಾದದ್ದನ್ನು ಓದುವ ಮೂಲಕ ಮಾನಸಿಕ ವ್ಯಾಯಾಮ ಮಾಡಿ. ದುಂದುಗಾರಿಕೆ ಮತ್ತು ಸಂಶಯಾಸ್ಪದವಾದ ಹಣಕಾಸು ಯೋಜನೆಗಳನ್ನು ತಪ್ಪಿಸಿ. ದೂರದ ಸಂಬಂಧಿಗಳಿಂದ ಅನಿರೀಕ್ಷಿತವಾದ ಒಳ್ಳೆಯ ಸುದ್ದಿ ಇಡೀ ಕುಟುಂಬಕ್ಕೆ ಸಂತೋಷದ ಕ್ಷಣಗಳನ್ನು ತರುವುದು. ಇಂದು ನಿಮ್ಮ ಪ್ರಿಯತಮೆ ನಿಮ್ಮ ಸಜೀವ ದೇವತೆಯಾಗಲಿದ್ದಾಳೆ; ಈ ಕ್ಷಣಗಳನ್ನು ಆನಂದಿಸಿ. ನೀವು ಕಷ್ಟಕರವೆಂದು ತೋರುವ ಸಮಸ್ಯೆಗಳನ್ನು ಪರಿಹರಿಸಲು ನಿಮಗಿರುವ ಸಂಪರ್ಕಗಳನ್ನು ಬಳಸಬೇಕಾಗುತ್ತದೆ. ಲಸದ ಸ್ಥಳದಲ್ಲಿ ಯಾವುದೇ ಕೆಲಸ ಹದಗೆಡುವ ಕಾರಣದಿಂದಾಗಿ ಇಂದು ನೀವು ತೊಂದರೆಗೊಳಗಾಗಬಹುದು ಮತ್ತು […]

Advertisement

Wordpress Social Share Plugin powered by Ultimatelysocial