ರಾಜ್ಯದ ಜನರೇ ಕಾಂಗ್ರೆಸ್ ನವರನ್ನು ಬಹಿಷ್ಕಾರ ಮಾಡಿದ್ದಾರೆ ಸಿ.ಟಿ.ರವಿ ವಾಗ್ದಾಳಿ

ರಾಜ್ಯದ ಜನರೇ ಕಾಂಗ್ರೆಸ್ ನವರನ್ನು ಬಹಿಷ್ಕಾರ ಮಾಡಿದ ಮೇಲೆ ಇವರೇನು ಕಲಾಪ ಬಹಿಷ್ಕಾರ ಮಾಡುವುದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಾಗ್ದಾಳಿ ಮಾಡಿದ್ದಾರೆ. ಕಲಾಪ ಬಹಿಷ್ಕಾರ ಮಾಡಿದರೆ ಇವರೇ ಇವರ ಮುಖದ ಮೇಲೆ ಉಗುಳಿಕೊಂಡಂತೆ ಎಂದು ಟೀಕೆ ಮಾಡಿರುವ ಅವರು, ಕಾಂಗ್ರೆಸ್ ನವರು ಬೆದರಿಕೆ ಹಾಕ್ತಾರೇನು? ಒಂದು ಸಲ ಪಶ್ಚಾತ್ತಾಪದ ಧ್ವನಿಯಲ್ಲಿ ಮಾತಾನಾಡುತ್ತಾರೆ. ಮತ್ತೊಂದು ಸಲ ಗೋ ಹತ್ಯೆ ನಿಷೇಧ ಕಾಯ್ದೆ ವಿರೋಧಿಸುತ್ತಾರೆ. ಕಾಂಗ್ರೆಸ್ನವರಿಗೆ ಒಂದು ನಿರ್ದಿಷ್ಟ ನಿಲುವೇ ಇಲ್ಲ ಎಂದು ಟೀಕಿಸಿದರು. ಯಾವ ಕಾಂಗ್ರೆಸ್ನವರು ನೀವು? ಮಹಾತ್ಮಾ ಗಾಂಧಿ ಮರೆತ ಕಾಂಗ್ರೆಸ್ಸೇ? ದನಗಳ್ಳರ ಪರ, ದನ ಕಡಿಯುವವರ ಪರ ನಿಂತಿರುವ ಕಾಂಗ್ರೆಸ್ಸೇ ಎಂದು ಪ್ರಶ್ನಿಸಿದರು. ದನ ಕಾಯುವವರು ಯಾರೂ ದನ ಕೊಲ್ಲುವುದಕ್ಕೆ ಬೆಂಬಲ ಕೊಡಲ್ಲ ಎಂದು ವ್ಯಂಗ್ಯವಾಡಿದರು.  ಕಾಂಗ್ರೆಸ್ ನವರನ್ನು ಒಂದು ಸಲ ದನ ಕಾಯ್ತೀನಿ ಅಂತಾರೆ, ಇನ್ನೊಂದು ಸಲ ದನ ಕಡಿಯುವ ಬಗ್ಗೆಯೂ ಮಾತಾಡುತ್ತಾರೆ ಎಂದು ಸಿ.ಟಿ.ರವಿ ಹಾಸ್ಯಟೀಕೆ ಮಾಡಿದರು.

 

ಇದನ್ನೂ ಓದಿ : ಮಾರಕಾಸ್ತ್ರಗಳಿಂದ ಬರ್ಬರ ಕೊಲೆ

Please follow and like us:

Leave a Reply

Your email address will not be published. Required fields are marked *

Next Post

ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆ ರೌಡಿಗಳ ಪೆರೇಡ್..!!

Thu Dec 10 , 2020
ಗ್ರಾಮ ಪಂಚಾಯಿತಿ ಹಿನ್ನೆಲೆ ದೊಡ್ಡಬಳ್ಳಾಪುರ ಉಪ ವಿಭಾಗದ ಪೊಲೀಸರು ರೌಡಿಗಳ ಪರೇಡ್ ನಡೆಸಿ ಯಾವುದೇ ರೀತಿಯ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದರು. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ದೊಡ್ಡಬಳ್ಳಾಪುರ ಪೊಲೀಸರು ರೌಡಿಗಳ ಪರೇಡ್ ನಡೆಸಿದರು. ದೊಡ್ಡಬಳ್ಳಾಪುರ ಪೊಲೀಸ್ ಸರ್ಕಲ್ ವ್ಯಾಪ್ತಿಯ ದೊಡ್ಡಬಳ್ಳಾಪುರ ನಗರ, ದೊಡ್ಡಬಳ್ಳಾಪುರ ಗ್ರಾಮಾಂತರ, ಹೊಸಹಳ್ಳಿ ಪೊಲೀಸ್ ಠಾಣೆಯ ರೌಡಿಶೀಟರ್ ಗಳನ್ನ ಕರೆಸಿ ಎಚ್ಚರಿಕೆ ನೀಡಿದರು. ಇದನ್ನೂ ಓದಿ:ಗ್ರಾಮ […]

Advertisement

Wordpress Social Share Plugin powered by Ultimatelysocial