ಮುಟ್ಟಿನ ಸಮಯದಲ್ಲಿ ಮೊಸರು ತಿನ್ನಬಹುದೇ?

ಮಹಿಳೆಯರಿಗೆ ತಿಂಗಳ ಆ ದಿನಗಳು ತುಂಬಾನೇ ಕಿರಿಕಿರಿ ಅನಿಸುವುದು, ಕಿಬ್ಬೊಟ್ಟೆ ನೋವು, ಹೊಟ್ಟೆ ಉಬ್ಬಿದಂತೆ ಅನಿಸುವುದು, ಮೂಡ್‌ ಬದಲಾವಣೆ, ಕೆಲವೊಮ್ಮೆ ಅಧಿಕ ರಕ್ತಸ್ರಾವ ಇವೆಲ್ಲಾ ತುಂಬಾನೇ ಕಿರಿಕಿರಿ ಅನಿಸುವುದು. ಈ ಸಮಯದಲ್ಲಿ ಕೆಲವೊಂದು ಆಹಾರಗಳನ್ನು ತಿನ್ನದಿರುವುದು ಒಳ್ಳೆಯದು.ಉದಾಹರಣೆಗೆ ಮೊಟ್ಟೆ, ಹುಳಿ. ಹುಳಿ ರಕ್ತಸ್ರಾವ ಹೆಚ್ಚಿಸುತ್ತದೆ, ಮೊಟ್ಟೆ ತಿಂದರೆ ಕೆಟ್ಟ ವಾಸನೆ ಬೀರುವುದು, ಇನ್ನು ಕೆಲವೊಂದು ಆಹಾರಗಳು ಹೊಟ್ಟೆ ನೋವು ಕಡಿಮೆ ಮಾಡುವುದು ಉದಾಹರಣೆಗೆ ಜೀರಿಗೆ ನೀರು, ಎಳನೀರು. ಹೊಟ್ಟೆ ನೋವು ಇದ್ದರೆ ಇವುಗಳನ್ನು ಸೇವಿಸಿದರೆ ಸಾಕು ಕಡಿಮೆಯಾಗುವುದು.ಹಾಗಾಗಿ ಮುಟ್ಟಿನ ಸಮಯದಲ್ಲಿ ಯಾವ ಆಹಾರ ತಿನ್ನಬೇಕು, ಯಾವುದು ತಿನ್ನಬಾರದು ಎಂದು ತಿಳಿದುಕೊಂಡರೆ ಒಳ್ಳೆಯದು. ನಾವಿಲ್ಲಿ ಮುಟ್ಟಿನ ಸಮಯದಲ್ಲಿ ಮೊಸರು ಸೇವನೆ ಮಾಡಬಹುದೇ, ಇಲ್ಲವೇ ಎಂಬುವುದರ ಬಗ್ಗೆ ಮಾಹಿತಿ ನೀಡಿದ್ದೇವೆ ನೋಡಿ:ಮುಟ್ಟಿನ ಸಮಯದಲ್ಲಿ ಮೊಸರು ತಿನ್ನಬಹುದೇ?ಮುಟ್ಟಿನ ಮಸಯದಲ್ಲಿ ನೀವು ಮೊಸರನ್ನು ತಿನ್ನಬಹುದು. ಮೊಸರಿನಲ್ಲಿ ಕ್ಯಾಲ್ಸಿಯಂ ಅಧಿಕವಿದ್ದು ಇದು ನಿಮ್ಮ ದೇಹವನ್ನು ಬಲಪಡಿಸುತ್ತೆ, ಅಲ್ಲದೆ ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು. ಮುಟ್ಟಿನ ಸಮಯದಲ್ಲಿ ಮೊಸರು ತಿಂದರೆ ಸ್ನಾಯು ಸೆಳೆತ ಕಡಿಮೆಯಾಗುವುದು ಹಾಗೂ ಒತ್ತಡ, ಆತಂಕ ಕಡಿಮೆಯಾಗುವುದು.ಹುಳಿ ಪದಾರ್ಥಗಳನ್ನು ಮುಟ್ಟಿನ ಸಮಯದಲ್ಲಿ ತಿನ್ನಬಾರದು ಎಂದು ಹೇಳಲಾಗುವುದು, ಆದರೆ ಮೊಸರು ಸೇವನೆ ಮಾಡಬಹುದು, ಇದು ಹೊಟ್ಟೆಯ ಆರೋಗ್ಯಕ್ಕೆ ಒಳ್ಲೆಯದು, ಮುಟ್ಟಿನ ಸಮಯದಲ್ಲಿ ಹೊಟ್ಟೆ ಉಬ್ಬುವುದು, ಮಲಬದ್ಧತೆ ಸಮಸ್ಯೆ ಉಂಟಾಗುತ್ತಿದ್ದರೆ ಮೊಸರು ಸೇವಿಸಿ.ಮೊಸರು ಸೇವಿಸಲು ಇಷ್ಟಪಡದಿದ್ದರೆ ಲಸ್ಸಿ ಮಾಡಿ ಅಥವಾ ಮಜ್ಜಿಗೆ ಮಾಡಿ ಕುಡಿಯಬಹುದು.ಮೊಸರನ್ನು ಹಗಲು ಹೊತ್ತಿನಲ್ಲಿ ಯಾವಾಗ ಬೇಕಾದರೂ ಸೇವಿಸಬಹುದು, ಆದರೆ ರಾತ್ರಿ ಹೊತ್ತಿನಲ್ಲಿ ಸೇವಿಸಬೇಡಿ. ರಾತ್ರಿ ಹೊತ್ತಿನಲ್ಲಿ ಸೇವಿಸಿದರೆ ಕಫದ ಸಮಸ್ಯೆ ಹೆಚ್ಚುವುದು. ಅಸ್ತಮಾ ಇರುವವರು ನೊಸರು ಸೇವಿಸಬೇಡಿ.ರಾತ್ರಿ ಹೊತ್ತಿನಲ್ಲಿ ಮೊಸರು ಸೇವಿಸುವುದಾದರೆ ಹೇಗೆ ಸೇವಿಸಬೇಕೆ?
ಏನೂ ಆರೋಗ್ಯ ಸಮಸ್ಯೆ ಇಲ್ಲದಿದ್ದರೆ ರಾತ್ರಿ ಹೊತ್ತಿನಲ್ಲಿ ಮೊಸರು ಸೇವಿಸಬಹುದು, ಸೇವಿಸುವುದಾದರೆ ಅದರಲ್ಲಿ ಸ್ವಲ್ಪ ಮೆಂತೆ ಪುಡಿ, ಕಾಳು ಮೆಣಸಿನ ಪುಡಿ ಸೇರಿಸಿ ಸೇವಿಸಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

HEALTH TIPS:ಕೂದಲಿನ ಬೆಳವಣಿಗೆ ಮತ್ತು ದಪ್ಪಗಾಗಿ ಸೂಪರ್ ಆಹಾರ;

Mon Jan 31 , 2022
ನಿಮ್ಮ ಕೂದಲು ಎಷ್ಟು ಉದ್ದವಾಗಬಹುದೆಂದು ನೋಡುವುದು ಅಥವಾ ನಿಮಗೆ ಯಾವುದೇ ಪ್ರಯೋಜನವನ್ನು ನೀಡದ ನೋಟವನ್ನು ಬೆಳೆಸುವುದು ವೈಯಕ್ತಿಕ ಸವಾಲಾಗಿರಬಹುದು ಅಥವಾ ನಿಮ್ಮ ಕೂದಲನ್ನು ಮತ್ತೆ ಪೋನಿಟೇಲ್‌ಗೆ ಎಸೆಯಲು ನೀವು ಬಯಸುತ್ತೀರಿ, ನಮ್ಮಲ್ಲಿ ಹೆಚ್ಚಿನವರು ಒಂದು ಹಂತದಲ್ಲಿ ಅಥವಾ ಇನ್ನೊಂದರಲ್ಲಿ ನಮ್ಮ ಕೂದಲು ವೇಗವಾಗಿ ಬೆಳೆಯಲು ಉತ್ಸುಕರಾಗಿದ್ದೇವೆ. ನೀವು ವಿಟಮಿನ್‌ಗಳು ಅಥವಾ ಶ್ಯಾಂಪೂಗಳನ್ನು ಕಂಡುಕೊಂಡಿರಬಹುದು ಅಥವಾ ಇಚ್ಛಾಶಕ್ತಿಯ ಬಲದಿಂದ ನಿಮ್ಮ ಕೂದಲನ್ನು ಉದ್ದವಾಗಿ ಬೆಳೆಯಲು ಪ್ರಯತ್ನಿಸಿರಬಹುದು. ಇವುಗಳಲ್ಲಿ ಹೆಚ್ಚಿನವು ಕೆಲಸ ಮಾಡುವುದಿಲ್ಲ […]

Advertisement

Wordpress Social Share Plugin powered by Ultimatelysocial