ಡಿ ಕೆ ಶಿವಕುಮಾರ್ ಅವರು ಶುಕ್ರವಾರ ಕೇಸರಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದ್ದು, ಕಾಂಗ್ರೆಸ್ಸಿಗರನ್ನು ಕೋರ್ಟ್ ಗೆ ಅಲೆಸಬೇಕೆಂಬುದು ಅವರ ಉದ್ದೇಶವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಶುಕ್ರವಾರ ಕೇಸರಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ‘ನಾವು ದೇಶದ ರೈತರ ಪರವಾಗಿ ಹೋರಾಟ ಮಾಡಿದ ವಿಚಾರವಾಗಿ ನಮ್ಮ ಮೇಲೆ ದೂರು ದಾಖಲಾಗಿದ್ದು, ಜನ ಪ್ರತಿನಿಧಿಗಳ ನ್ಯಾಯಾಲಯದಿಂದ ವಾರೆಂಟ್ ಜಾರಿ ಆಗಿದೆ.

ದಾಖಲಾದ ದೂರಿನಲ್ಲಿ ದಿನಾಂಕ 20-01-21 ರಂದು ಫ್ರೀಡಂ ಪಾರ್ಕ್ ನಲ್ಲಿ 10 ಸಾವಿರ ಜನರನ್ನು ಸೇರಿಸಿ ಪ್ರತಿಭಟನೆ ಮಾಡಿದ್ದು, ವಿಪತ್ತು ನಿರ್ವಹಣೆ ಕಾಯ್ದೆ ಅಡಿಯಲ್ಲಿ 6 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮೊದಲ ಆರೋಪಿ ನಾನಾಗಿದ್ದು, ಉಳಿದಂತೆ ಸಲೀಂ ಅಹ್ಮದ್, ಈಶ್ವರ್ ಖಂಡ್ರೆ, ಮಂಜುನಾಥ್, ಶಫಿವುಲ್ಲಾ ಹಾಗೂ ಬಸನಗೌಡ ಬಾದರ್ಲಿ ಅವರ ಹೆಸರನ್ನು ಸೇರಿಸಲಾಗಿತ್ತು.

ಪ್ರತಿಭಟನೆಯಲ್ಲಿ 10 ಸಾವಿರ ಜನ ಸೇರಿದ್ದರೂ ನಮ್ಮ ಮೇಲೆ ಮಾತ್ರ ಉದ್ದೇಶ ಪೂರ್ವಕವಾಗಿ ಪ್ರಕರಣ ದಾಖಲಿಸಿದ್ದಾರೆ. ನಾವು ಕಾನೂನು ಗೌರವಿಸಿ ಜಾಮೀನು ಪಡೆದು ಬಂದಿದ್ದೇವೆ. ಅದು ಬೇರೆ ವಿಚಾರ. ಆದರೆ ಪ್ರತಿವೊಂದು ಪ್ರಕರಣದಲ್ಲೂ ನಮ್ಮ ಮೇಲೆ ಮಾತ್ರ ಪ್ರಕರಣ ದಾಖಲಿಸಲಾಗುತ್ತಿದೆ. ಮೇಕೆದಾಟು ಪಾದಯಾತ್ರೆ ಸಂಬಂಧ ರಾಮನಗರ, ಕನಕಪುರ, ಬೆಂಗಳೂರಲ್ಲಿ ಕೆಲವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ನಮಗೆ ತೊಂದರೆ ನೀಡಿ, ಕೋರ್ಟ್ ಗೆ ಅಲೆಸಬೇಕು ಎಂದು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಈಶ್ವರಪ್ಪ ಹಾಗೂ ರಾಘವೇಂದ್ರ ಅವರು ಸೆಕ್ಷನ್ 144 ಉಲ್ಲಂಘನೆ ಮಾಡಿದ್ದರಲ್ಲ, ಅಲ್ಲಿ ನ್ಯಾಯಾಲಯ, ಕಾನೂನು ಇರಲಿಲ್ಲವೇ? ಅಲ್ಲಿ ಕಾನೂನು ಉಲ್ಲಂಘನೆ ಆಗಿಲ್ಲವೇ ಎಂದು ಪ್ರಶ್ನೆ ಮಾಡಿದ ಡಿಕೆಶಿ, ನಾವು ಹೋರಾಟ ಮಾಡಿದ ಪರಿಣಾಮದಿಂದ ಪ್ರಧಾನಮಂತ್ರಿಗಳು ಕರಾಳ ಕೃಷಿ ಕಾಯ್ದೆಗಳನ್ನು ಹಿಂಪಡೆದರು. ರಾಜ್ಯದಲ್ಲಿ ಇನ್ನೂ ಕಾಯ್ದೆ ಹಿಂಪಡೆದಿಲ್ಲ. ರೈತರ ಪರ ಧ್ವನಿ ಎತ್ತುವ ಕಾಂಗ್ರೆಸ್ ಧ್ವನಿ ಅಡಗಿಸುವ ಪ್ರಯತ್ನ ಇದಾಗಿದೆ ಎಂದರು.

ಇನ್ನು ಪಿಎಸ್ ಐ ನೇಮಕಾತಿ ಹಗರಣ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಈ ಹಗರಣದ ಬಗ್ಗೆ ಪ್ರಿಯಾಂಕ್ ಖರ್ಗೆ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ನಾವೇ ಇದನ್ನು ಮೊದಲು ಬೆಳಕಿಗೆ ತಂದಿದ್ದೇವೆ. ಈ ಹಗರಣ ನಡೆದ ಶಿಕ್ಷಣ ಸಂಸ್ಥೆ ಸಂಸ್ಥಾಪಕರು ಗೃಹ ಸಚಿವರ ಜತೆ ಉತ್ತಮ ಒಡನಾಟ ಇಟ್ಟುಕೊಂಡಿರುವ ಫೋಟೋಗಳು ಬಂದಿವೆ. ಪೊಲೀಸರು ಪ್ರಾಥಮಿಕ ತನಿಖೆ ನಡೆಸುತ್ತಿದ್ದು, ಪರೀಕ್ಷೆ ಬರೆದ 52 ಸಾವಿರ ಅಭ್ಯರ್ಥಿಗಳಿಗೆ ಮೋಸ ಆಗಿದೆ. ಪ್ರತಿ ಹುದ್ದೆಗೆ 70-80 ಲಕ್ಷ ಹಣ ಕೊಟ್ಟಿರುವ ವರದಿ ಬಂದಿದೆ. ಇದೊಂದು ಭ್ರಷ್ಟ ಸರ್ಕಾರ. ಈ ಸರ್ಕಾರ ಕೋವಿಡ್ ಬೆಡ್, ಔಷಧಿ, ನೇಮಕಾತಿ, ಮಠಗಳಿಂದಲೂ ಕಮಿಷನ್ ನಿಂದ ಹಿಡಿದು, ಬೆಂಗಳೂರು ಪಾಲಿಕೆ ಕಸ ಗುಡಿಸುವ ವಿಚಾರದವರೆಗೂ ಭ್ರಷ್ಟಾಚಾರ ಎಲ್ಲೆಡೆ ತಾಂಡವವಾಡುತ್ತಿದೆ’ ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತಮ್ಮ ಬ್ರಾಂಡ್ ಲವ್ ಆರ್ಗಾನಿಕಲಿ ಮೂಲಕ ಲಾತೂರ್ ಗ್ರಾಮವನ್ನು ಬೆಳಗಿಸಿದ್ದ,ದೀಪಶಿಖಾ ದೇಶಮುಖ್ !

Fri Apr 22 , 2022
ಈ ವಿಶ್ವ ಭೂ ದಿನದಂದು, ಭೂಮಿಯ ತಾಯಿಯ ನಿವಾಸಿಗಳಾದ ನಾವು ಪರಿಸರ ಸಂರಕ್ಷಣೆಯಲ್ಲಿ ನಮ್ಮ ಪಾತ್ರದ ಜವಾಬ್ದಾರಿಯನ್ನು ಹೇಗೆ ತೆಗೆದುಕೊಳ್ಳಬೇಕು ಎಂಬುದರ ಕುರಿತು ಎಲ್ಲರೂ ಮಾತನಾಡುತ್ತಿದ್ದಾರೆ. ಬಿ-ಟೌನ್‌ನ ನಿರ್ಮಾಪಕಿ ದೀಪಶಿಖಾ ದೇಶಮುಖ್ ಈ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ದೀಪಶಿಖಾ ತನ್ನ ಸಹೋದರ ಜಾಕಿ ಭಗ್ನಾನಿಯೊಂದಿಗೆ ಲಾಭದಾಯಕ ಪೂಜಾ ಎಂಟರ್‌ಟೈನ್‌ಮೆಂಟ್ ಕಂಪನಿಯನ್ನು ಸಹ-ಸ್ಥಾಪಿಸುವುದರ ಜೊತೆಗೆ ಜಗತ್ತಿನಲ್ಲಿ ಬದಲಾವಣೆಯನ್ನು ಮಾಡಲು ಸಾಮಾನ್ಯತೆಯನ್ನು ಮೀರಿ ನೋಡುವುದರಲ್ಲಿ ಹೆಸರುವಾಸಿಯಾಗಿದ್ದಾರೆ. ದೀಪಶಿಖಾ ಮತ್ತು ಅವರ ಆಯುರ್ವೇದ ಮತ್ತು ನೈಸರ್ಗಿಕ […]

Advertisement

Wordpress Social Share Plugin powered by Ultimatelysocial