ಕರ್ನಾಟಕದಲ್ಲಿ ಬುಲ್ಡೋಜರ್ ಮಾದರಿ ಕಾನೂನು ತರಲು ಇದೇನು ಉತ್ತರ ಪ್ರದೇಶ ಅಲ್ಲ!

 ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗುಡುಗಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ಬುಲ್ಡೋಜರ್ ಮಾದರಿ ತರಲು ಅಲ್ಲಿ ಬೇರೆ ಬೇರೆ ವಿಷಯಗಳು ಇದ್ದವು.

ಆದರೆ, ರಾಜ್ಯದಲ್ಲಿ ಪ್ರಜ್ಞಾವಂತ ಜನರಿದ್ದಾರೆ. ಅಂತಹ ಪದ್ಧತಿ ತರಲು ಸಾಧ್ಯವಿಲ್ಲ. ಯಾವುದೇ ಕಾರಣಕ್ಕೂ ಕರ್ನಾಟಕವನ್ನು ಉತ್ತರ ಪ್ರದೇಶದೊಂದಿಗೆ ಹೋಲಿಸಬಾರದು ಎಂದರು.

ರಾಜ್ಯದಲ್ಲಿ ಯಾಕಾದರೂ ಬಿಜೆಪಿ ಸರ್ಕಾರ ಬಂದಿದೆಯೋ ಎಂದು ಜನ ಕೊರಗುತ್ತಿದ್ದಾರೆ. ಬಿಜೆಪಿಯವರು ಅಧಿಕಾರಕ್ಕೆ ಬಂದಿರುವುದು ಜನಾದೇಶದಿಂದಲ್ಲ. ಬದಲಿಗೆ ಶಾಸಕರನ್ನು ಖರೀದಿ ಮಾಡಿ ಆಪರೇಷನ್ ಕಮಲ ಮೂಲಕ. ಆಪರೇಷನ್ ಕಮಲದ ಮೂಲಕ ಅಧಿಕಾರ ನಡೆಸುತ್ತಿರುವುದನ್ನು ಸದನದಲ್ಲೇ ಶಾಸಕ ಶ್ರೀನಿವಾಸಗೌಡರೆ ಒಪ್ಪಿಕೊಂಡಿದ್ದಾರೆ. ಆಪರೇಷನ್ ಕಮಲದಿಂದ ಬಿಜೆಪಿ ಸರ್ಕಾರ ಜನ್ಮ ತಾಳಿದೆ ಎಂದು ಕಿಡಿಕಾರಿದರು.

ಈ ರೀತಿ ಅಕ್ರಮವಾಗಿ ಸರ್ಕಾರ ಮಾಡಿರುವ ಬಿಜೆಪಿಯವರು ಔಷಧಿ, ಗೊಬ್ಬರ, ನೇಮಕಾತಿ ಎಲ್ಲದರಲ್ಲೂ ದುಡ್ಡು ಹೊಡೆಯುತ್ತಿದ್ದಾರೆ. ಕಾಮಗಾರಿಗಳಲ್ಲಿ ಶೇ.40 ರಷ್ಟು ಕಮಿಷನ್ ಪಡೆಯುತ್ತಿದ್ದಾರೆ. ಬಿಜೆಪಿ ಇವತ್ತು ಇರುತ್ತದೆ, ನಾಳೆ ಹೋಗುತ್ತದೆ. ಬಿಜೆಪಿ ಸರ್ಕಾರದಿಂದ ರಾಜ್ಯಕ್ಕೆ ಕಪ್ಪು ಚುಕ್ಕೆ ಬಂದಿದೆ ಎಂದು ದೂರಿದರು.

ಕಬ್ಬಾಳಮ್ಮ ದೇವಸ್ಥಾನದಲ್ಲಿ ಸಾವಿರ ಮರಿ ಕಡಿಯುತ್ತಾರೆ. ಕಡಿದಿದ್ದನ್ನು ಮುಸ್ಲಿಂರೇ ಕ್ಲೀನ್ ಮಾಡುತ್ತಾರೆ. ಕೋಲಾರ, ರಾಮನಗರದಲ್ಲಿ ಮಾವಿನ ತೋಪಿಗೆ ಔಷಧಿ ಹೊಡೆಯುವರು ಯಾರು? ಚಿತ್ರದುರ್ಗದಲ್ಲಿ ಕುರಿಗಳ ವ್ಯಾಪಾರ ಆಗುತ್ತಿಲ್ಲ ಎನ್ನುವ ವರದಿ ನೋಡಿದೆ. 8 ಸಾವಿರವಿದ್ದ ಕುರಿಗಳು 3-4 ಸಾವಿರಕ್ಕೆ ಮಾರುತ್ತಿದ್ದಾರೆ. ಈಗ ಬಿಜೆಪಿಯವರು ಕುರಿಗಳನ್ನು ತಗೊಂಡು ಹೋಗುತ್ತಾರಾ ಎಂದು ಪ್ರಶ್ನಿಸಿದರು.

ಗೃಹ ಸಚಿವ ಅರಗ ಜ್ಞಾನೇಂದ್ರ ಬದಲಾವಣೆ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಅರಗ ಜ್ಞಾನೇಂದ್ರ ಅವರಂತಹ ಮುತ್ತುರತ್ನವನ್ನು ಅವರೇ ಇಟ್ಟಿಕೊಳ್ಳಲಿ. ಅಂತಹವರು ಬಿಜೆಪಿಯಲ್ಲಿ ಇದ್ದಾರೆ ಎಂದು ಹೇಳಲು ನಮಗೂ ಶಕ್ತಿ ಬರುತ್ತದೆ ಎಂದರು.

ರಾಜ್ಯವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ಮಾಡಬೇಕು. ಬಿಜೆಪಿಯವರು ಹಲಾಲ್‌, ಜಟ್ಕಾ ಕಟ್ ಇಲ್ಲಸಲ್ಲದ ವಿಚಾರ ಮುನ್ನೆಲೆಗೆ ತರುತ್ತಿದ್ದಾರೆ ಎಂದು ದೂರಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಸಚ್ಚಿನ್ ಶ್ರಾಫ್:ಜೀವನದಲ್ಲಿ ಯಶಸ್ಸು ಸಾಧಿಸಲು ಫಿಟ್ ಆಗಿರುವುದು ಮುಖ್ಯ!

Sun Apr 24 , 2022
“ಆರೋಗ್ಯಕರ ಜೀವನಶೈಲಿಯು ನಿಮ್ಮನ್ನು ಸದೃಢವಾಗಿ, ಶಕ್ತಿಯುತವಾಗಿ ಮತ್ತು ಯಾವಾಗಲೂ ಪ್ರೋತ್ಸಾಹಿಸುತ್ತದೆ. ಆರೋಗ್ಯಕರ ಜೀವನವು ನಿಮ್ಮ ಜೀವನದ ಹೆಚ್ಚಿನ ಅಂಶಗಳನ್ನು ಆನಂದಿಸಲು ಒಂದು ಮಾರ್ಗವಾಗಿದೆ ಎಂದು ನಾನು ನಂಬುತ್ತೇನೆ ಮತ್ತು ನಿಮಗೆ ಉತ್ತಮವಾಗಲು ಸಹಾಯ ಮಾಡುತ್ತದೆ. ಮತ್ತು ಆರೋಗ್ಯಕರ ಶೈಲಿಯನ್ನು ಅಳವಡಿಸಿಕೊಳ್ಳಲು ಒಬ್ಬರು ತಮ್ಮ ಇಡೀ ಜೀವನವನ್ನು ರಾತ್ರಿಯಿಡೀ ಕೂಲಂಕುಷವಾಗಿ ಪರಿಶೀಲಿಸಬೇಕಾಗಿಲ್ಲ. “ಸುಧಾರಿತ ಯೋಗಕ್ಷೇಮದ ದಿಕ್ಕಿನಲ್ಲಿ ನಿಮ್ಮನ್ನು ಮುನ್ನಡೆಸುವ ಒಂದೆರಡು ಸಣ್ಣ ಬದಲಾವಣೆಗಳನ್ನು ಮಾಡುವುದು ತುಂಬಾ ಸುಲಭ. ಮತ್ತು ಒಮ್ಮೆ ನೀವು […]

Advertisement

Wordpress Social Share Plugin powered by Ultimatelysocial