CM ಕನಸು ಕಾಣ್ತಿರೋ ಡಿ.ಕೆ.ಶಿವಕುಮಾರ್​ ಮತ್ತೆ ಸಂಕಷ್ಟ..

 

ಕೆಪಿಸಿಸಿ ಸಾರಥಿಗೆ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಕ್ರಮ ಹಣ ವರ್ಗಾವಣೆ, ಬೇನಾಮಿ ಆಸ್ತಿ ಪ್ರಕರಣ ಮರುಜೀವ ಪಡೆದುಕೊಂಡಿದೆ. ವಿಧಾನಸಭಾ ಚುನಾವಣೆ ತಯಾರಿಯಲ್ಲಿರೋ ಡಿಕೆ ಶಿವಕುಮಾರ್​​ಗೆ ಚಾರ್ಜ್​​ಶೀಟ್ ಶಾಕ್ ಎದುರಾಗಿದೆ.

ಡಿ.ಕೆ.ಶಿವಕುಮಾರ್ ಮುಂದಿನ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಾ, ಪಕ್ಷ ಸಂಘಟನೆ ಮಾಡುತ್ತಾ ಬ್ಯುಸಿಯಾಗಿದ್ದಾರೆ.

ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ತರಲೇಬೇಕು ಅಂತಾ ಪಣ ತೊಟ್ಟಿದ್ದಾರೆ. ಸರ್ಕಾರ ರಚನೆ ಕಸರತ್ತಿಗಾಗಿ ಕಾಲಿಗೆ ಚಕ್ರ ಕಟ್ಟಿಕೊಂಡವ್ರಂತೆ ಓಡಾಡ್ತಿದ್ದಾರೆ. ಆದ್ರೆ ಡಿಕೆ ಶಿವಕುಮಾರ್​ ಅವರ ಈ ಸ್ಪೀಡ್​ಗೆ ಜಾರಿ ನಿರ್ದೇಶನಾಲಯ ಬ್ರೇಕ್ ಹಾಕಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​​ಗೆ ಮತ್ತೆ ಸಂಕಷ್ಟ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ಗೆ ಮತ್ತೆ ಇ.ಡಿ ಸಂಕಷ್ಟ ಎದುರಾಗಿದೆ. 2019ರಲ್ಲಿ ನಡೆದಿದ್ದ ರೇಡ್ ಸಂಬಂಧ ಜಾರಿ ನಿರ್ದೇಶನಾಲಯ ದೆಹಲಿಯ ಇ.ಡಿ ವಿಶೇಷ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಕೆ ಮಾಡಿದೆ. ಅಕ್ರಮ ಹಣ ವರ್ಗಾವಾಣೆ ಕೇಸ್​​ನ ಉರುಳು ಡಿಕೆ ಶಿವಕುಮಾರ್​ ಕುತ್ತಿಗೆಗೆ ಮತ್ತಷ್ಟು ಬಿಗಿದಿದೆ.

ಚಾರ್ಜ್​ಶೀಟ್​​ನಲ್ಲೇನಿದೆ?

ಡಿಕೆ ಶಿವಕುಮಾರ್ ವಿರುದ್ಧ ಒಟ್ಟು 50ರಿಂದ 55 ಪುಟಗಳ ಚಾರ್ಜ್​ಶೀಟ್ ಸಲ್ಲಿಕೆ ಮಾಡಲಾಗಿದೆ. ದೆಹಲಿಯ ರೋಸ್ ಅವೆನ್ಯೂ ಕೋರ್ಟ್​ಗೆ ಚಾರ್ಜ್​​ಶೀಟ್ ಸಲ್ಲಿಸಲಾಗಿದ್ದು, ಚಾರ್ಜ್​ಶೀಟ್ ಜೊತೆಗೆ ಒಂದು ಸಣ್ಣ ಟ್ರಂಕ್​​ನಲ್ಲಿ ಕೇಸ್​ಗೆ ಸಂಬಂಧಿಸಿದ ದಾಖಲೆಗಳನ್ನು ನೀಡಲಾಗಿದೆ. ಚಾರ್ಜ್​ಶೀಟ್​ನಲ್ಲಿ PMLA ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ 120b ಅಡಿ ಕ್ರಿಮಿನಲ್ ಪಿತೂರಿ ಅಂತಾನೂ ಆರೋಪ ಮಾಡಲಾಗಿದೆ. ಈ ಸೆಕ್ಷನ್​​ಗಳ ಬಗ್ಗೆ ಶನಿವಾರ ಬೆಳಗ್ಗೆ ಇಡಿ ವಕೀಲರಿಂದ ವಾದ ಮಂಡನೆಯಾಗಲಿದೆ.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಚಾರ್ಜ್​ಶೀಟ್​​ನಲ್ಲಿ ಆರೋಪಿ ನಂಬರ್ 1 ಅಂತಾ ಉಲ್ಲೇಖಿಸಲಾಗಿದೆ. ಶರ್ಮಾ ಟ್ರಾವೆಲ್ಸ್ ಮಾಲೀಕ ಸುನಿಲ್ ಶರ್ಮಾ ಆರೋಪಿ ನಂಬರ್ 2, ಡಿಕೆ ಶಿವಕುಮಾರ್​ ದೂರ ಸಂಬಂಧಿ ಸಚಿನ್ ನಾರಾಯಣ್ ಆರೋಪಿ ನಂಬರ್ 3, ಹಾಗೂ ದೆಹಲಿಯ ಕರ್ನಾಟಕ ಭವನ ಸಿಬ್ಬಂದಿ ಆಂಜನೇಯ ಹನುಮಂತು ಪ್ರಕರಣದಲ್ಲಿ 4ನೇ ಆರೋಪಿ ಅಂತಾ ಚಾರ್ಜ್​ಶೀಟ್​ನಲ್ಲಿ ಉಲ್ಲೇಖ ಮಾಡಲಾಗಿದೆ.
ಈ ನಾಲ್ವರ ಜೊತೆಗೆ ಇತರ ಹಲವು ಆರೋಪಿಗಳ ಹೆಸ್ರನ್ನೂ ಚಾರ್ಜ್​ಶೀಟ್​​ನಲ್ಲಿ ಉಲ್ಲೇಖಿಸಲಾಗಿದೆ. ಇನ್ನು ಚಾರ್ಜ್​​ಶೀಟ್ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಕೆ ಬ್ರದರ್ಸ್, ಚಾರ್ಜ್​ಶೀಟ್ ಸಲ್ಲಿಕೆಗೆ ನಾವು ಹೆದರುವುದಿಲ್ಲ ಅಂತಾ ಸವಾಲು ಹಾಕಿದ್ದಾರೆ.

ಏನಿದು ಇಡಿ ಕೇಸ್?

ಡಿಕೆ ಶಿವಕುಮಾರ್​ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪ ಸಂಬಂಧ ಇಡಿ ರೇಡ್ ಮಾಡಿತ್ತು. ಈ ಹಿಂದೆ ದೆಹಲಿ ಕೋರ್ಟ್​​​ನಲ್ಲಿ ನಡೆದಿದ್ದ ವಾದದಲ್ಲಿ ಇಡಿ ಪರ ವಕೀಲರು ಹಲವು ಆರೋಪಗಳನ್ನುನ ಮಾಡಿದ್ದರು. 800 ಕೋಟಿ ರೂಪಾಯಿ ಮೌಲ್ಯದ ಬೇನಾಮಿ ಆಸ್ತಿ ಮಾಡಿದ್ದಾರೆ. ಕುಟುಂಬಸ್ಥರ ಹೆಸರಿನಲ್ಲಿ 200 ಕೋಟಿ ರೂಪಾಯಿ ಠೇವಣಿ ಇದೆ. 20 ಕ್ಕೂ ಹೆಚ್ಚು ಬ್ಯಾಂಕ್​​ಗಳಲ್ಲಿ 317ಕ್ಕೂ ಹೆಚ್ಚು ಅಕೌಂಟ್​ಗಳನ್ನು ಹೊಂದಿದ್ದಾರೆ. ಇದೇ ಬೇನಾಮಿ ಅಕೌಂಟ್​​ಗಳ ಮೂಲಕ ಹಣ ವರ್ಗಾವಣೆ ಮಾಡಲಾಗಿದೆ ಎಂದು ಇಡಿ ವಾದ ಮಂಡಿಸಿತ್ತು. ಅಲ್ಲದೆ ಮಗಳ ಹೆಸರಿನಲ್ಲಿ 108 ಕೋಟಿ ರೂಪಾಯಿ ಅಕ್ರಮ ವ್ಯವಹಾರ ಮಾಡಿದ್ದಾರೆ.

ಪುತ್ರಿಗೆ 48 ಕೋಟಿ ರೂಪಾಯಿ ಸಾಲ‌ ಇದೆ ಅಂತಾ ಹೇಳಿದ್ದರೂ ಸಾಲದ ಮೂಲವೇ ತೋರಿಸಿಲ್ಲ. ಇನ್ನು ದೆಹಲಿ ನಿವಾಸದಲ್ಲಿ ಪತ್ತೆಯಾಗಿದ್ದ 8 ಕೋಟಿ 59 ಲಕ್ಷ ಹಣಕ್ಕೆ ಲೆಕ್ಕ ಕೊಟ್ಟಿಲ್ಲ. ಇಷ್ಟೆಲ್ಲಾ ಅಲ್ಲದೆ ಡಿಕೆಶಿ ಹೆಸರಲ್ಲಿ 24, ಡಿ.ಕೆ. ಸುರೇಶ್ ಹೆಸರಲ್ಲಿ 27 ಹಾಗೂ ತಾಯಿಯ ಹೆಸರಲ್ಲಿ 38 ಹೀಗೆ ಡಿಕೆ ಕುಟುಂಬದ ಬಳಿ ಒಟ್ಟು 300 ಆಸ್ತಿಗಳಿವೆ ಅಂತಾ ಕೋರ್ಟ್​ನಲ್ಲಿ ಈ ಹಿಂದೆಯೇ ಇಡಿ ಪರ ವಕೀಲರು ವಾದ ಮಂಡಿಸಿದ್ದರು.

ಒಟ್ನಲ್ಲಿ ಚುನಾವಣೆ ವರ್ಷದಲ್ಲೇ ಕಾಂಗ್ರೆಸ್ ಟ್ರಬಲ್ ಶೂಟರ್​ಗೆ ಟ್ರಬಲ್ ಶುರುವಾಗಿದೆ. 2019ರಲ್ಲಿ ನಡೆದಿದ್ದ ರೇಡ್​ ಸಂಬಂಧ ಎರಡೂವರೆ ವರ್ಷಗಳ ಬಳಿಕ ಚಾರ್ಜ್​ಶೀಟ್​​ ಸಲ್ಲಕೆಯಾಗಿದೆ. ಈಗಾಗಲೇ ಜೈಲಿಗೆ ಹೋಗಿ ಬಂದಿರೋ ಡಿಕೆಶಿ, ಇಂತಾ ಚಾರ್ಜ್​ಶೀಟ್​ಗೆಲ್ಲಾ ಹೆದರಲ್ಲ ಅಂತಿದ್ದಾರೆ. ಆದ್ರೆ ಚಾರ್ಜ್​ಶೀಟ್ ಆಧಾರದಲ್ಲಿ ಕೋರ್ಟ್​​ ಯಾವ ನಿರ್ಧಾರ ಕೈಗೊಳ್ಳುತ್ತೆ ಅನ್ನೋದೇ ಸದ್ಯದ ಕುತೂಹಲ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಒಂಟಿ ಕಾಲಲ್ಲಿ ಒಂದು ಕಿ.ಮೀ ನಡೆದು ಶಾಲೆಗೆ ಹೋಗುತ್ತಿದ್ದ ಬಾಲಕಿಗೆ ಸೋನು ಸೂದ್ ಸಹಾಯ!

Fri May 27 , 2022
ಕೋವಿಡ್ ಸಮಯದಲ್ಲಿ ಸಾವಿರಾರು ಕಾರ್ಮಿಕರಿಗೆ ಸಹಾಯ ಮಾಡಿ ‘ಮಸೀಯಾ’ (ದೇವರು) ಎನಿಸಿಕೊಂಡಿದ್ದ ನಟ ಸೋನು ಸೂದ್ ತಮ್ಮ ಸಹಾಯ ಹಸ್ತವನ್ನು ಹಿಂತೆಗೆದುಕೊಂಡಿಲ್ಲ. ಕೋವಿಡ್ ಆರಂಭವಾದಾಗಿನಿಂದಲೂ ಸತತವಾಗಿ ಸಮಾಜ ಸೇವೆಯಲ್ಲಿ ತೊಡಗಿರುವ ಸೋನು ಸೂದ್ ತಮ್ಮ ಗಮನಕ್ಕೆ ಬರುವ ಅಥವಾ ಸಹಾಯ ಅರಸಿ ಬರುವ ವ್ಯಕ್ತಿಗಳಿಗೆ ಕೈಲಾದ ಸಹಾಯ ಮಾಡುತ್ತಲೇ ಬಂದಿದ್ದಾರೆ. ಇದೀಗ ಬಿಹಾರದ ಬಾಲಕಿಯೊಬ್ಬರಿಗೆ ಸೋನು ಸೂದ್ ಮಾಡಿರುವ ಸಹಾಯ ಮತ್ತೊಮ್ಮೆ ಸೋನು ಅವರ ವಿಶಾಲ ವ್ಯಕ್ತಿತ್ವದ ಪರಿಚಯವನ್ನು ಜಗತ್ತಿಗೆ […]

Advertisement

Wordpress Social Share Plugin powered by Ultimatelysocial