ದಳಪತಿ ವಿಜಯ್, ರಶ್ಮಿಕಾ ಮಂದಣ್ಣ ‘ವಾರಿಸು’ ಆಡಿಯೋ ಲಾಂಚ್ ಟಿಕೆಟ್ ದರ ನೋಡಿ ದಂಗಗಾಗಿದ ಫ್ಯಾನ್ಸ್

ತಮಿಳು ಚಿತ್ರರಂಗದಲ್ಲಿ ದಳಪತಿ ವಿಜಯ್ ನಟನೆಯ ‘ವಾರಿಸು’ ಸಿನಿಮಾ  ಬಗ್ಗೆ ಭಾರೀ ನಿರೀಕ್ಷೆಯಿದೆ. ದೊಡ್ಡ ಮಟ್ಟದ ಅಭಿಮಾನಿ ಬಳಗ ಹೊಂದಿರುವ ದಳಪತಿ ವಿಜಯ್, ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ಈ ಚಿತ್ರದಲ್ಲಿ ಒಟ್ಟಿಗೆ ನಟಿಸಿರೋದರಿಂದ ನಿರೀಕ್ಷೆ ಹೆಚ್ಚಾಗಿದೆ. ಚಿತ್ರತಂಡವು ಡಿಸೆಂಬರ್ 24ರಂದು ‘ವಾರಿಸು’ ಆಡಿಯೋ ಲಾಂಚ್ ಕಾರ್ಯಕ್ರಮ ನಡೆಯಲಿದೆ ಎಂದು ಅಧಿಕೃತವಾಗಿ ಘೋಷಣೆ ಮಾಡಿತ್ತು. ಈಗ ಇದರ ಟಿಕೆಟ್ ಬಗ್ಗೆಯೇ ಚರ್ಚೆ ಶುರುವಾಗಿದೆ.ವಾರಿಸು’ ಸಿನಿಮಾದ ಆಡಿಯೋ ಲಾಂಚ್‌ನಲ್ಲಿ ಭಾಗವಹಿಸಲು ಒಬ್ಬರಿಗೆ 7000 ರೂಪಾಯಿ ಎಂದು ವಿಜಯ್ ಅಭಿಮಾನಿಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದರು. ಅದಾದ ನಂತರದಲ್ಲಿ ಇನ್ನೂ ಕೆಲವರು 5000-7000 ರೂಪಾಯಿವರೆಗೆ ಟಿಕೆಟ್ ದರವಿದೆ ಎಂದಿದ್ದಾರೆ. ಇದು ಅಭಿಮಾನಿಗಳಿಗೆ ಬೇಸರ ತಂದಿದೆ.ಚೆನ್ನೈನಲ್ಲಿರುವ ದಳಪತಿ ವಿಜಯ್ ಅವರ ಆಫೀಸ್‌ನಲ್ಲಿ ಆಡಿಯೋ ಪಾಸ್‌ಗಳನ್ನು ಫ್ರೀ ಆಗಿ ನೀಡಲಾಗಿತ್ತು. ಆದರೆ ಇದನ್ನೇ ಕೆಲವರು ಪಡೆದುಕೊಂಡು ಬ್ಲಾಕ್‌ನಲ್ಲಿ ಮಾರಿಕೊಂಡು ಲಾಭ ಮಾಡಿಕೊಂಡಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಡಾ|| ಚಂದ್ರು ಲಮಾಣಿ ಅವರ ಸಾಮಾಜಿಕ ಸೇವೆಗಳು ಮುಂದುವರಯಲಿ: ವೀಮಲ ರೇಣುಕಾಚಾರ್ಯ ಮಹಾಸ್ವಾಮಿಗಳು.

Mon Dec 26 , 2022
ಲಕ್ಷ್ಮೇಶ್ವರ: ಕ್ಯಾಲೆಂಡರ್ ಪ್ರತಿಯೊಬ್ಬನ ಅಗತ್ಯದ ಸಾಧನಗಳಲ್ಲೊಂದು, ಲಕ್ಷ್ಮೇಶ್ವರ ತಾಲೂಕಿನ ಖ್ಯಾತ ವೈದ್ಯರಾದ ಡಾ|| ಚಂದ್ರು ಲಮಾಣಿ ಅಭಿಮಾನಿ ಬಳಗ ಹೊರತಂದಿರುವ 2023ನೇ ಸಾಲಿನ ಕ್ಯಾಲೆಂಡರ್ ಜನತೆಗೆ ಅಗತ್ಯವಾದ ಎಲ್ಲಾ ಶೈಕ್ಷಣಿಕ ವಿವರಗಳನ್ನು ಒಳಗೊಂಡಿದ್ದು ಸಂಗ್ರಹ ಯೋಗ್ಯ ದಿನದರ್ಶಿಯಾಗಿದೆ ಎಂದು ಮಾಜಿ ಶಾಸಕ ಗಂಗಣ್ಣ ಮಹಾಂತಶೇಟ್ಟರ್ ಹೇಳಿದರು.ತಾಲೂಕಿನ ಮುಕ್ತಿಮಂದಿರ ಧರ್ಮ ಕ್ಷೇತ್ರದಲ್ಲಿ ಡಾ|| ಚಂದ್ರು ಲಮಾಣಿ ಅಭಿಮಾನಿ ಬಳಗದ ವತಿಯಿಂದ 2023 ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಿಹಿಸಿ ಮಾತನಾಡಿದರು.ಡಾ|| […]

Advertisement

Wordpress Social Share Plugin powered by Ultimatelysocial