ಚಾಲೆಂಜಿಂಗ್ ಸ್ಟಾರ್ ಕಡೆಯಿಂದ ಸಿಹಿಸುದ್ದಿ: ಹಬ್ಬ ಶುರು ಮಾಡಿದ ಫ್ಯಾನ್ಸ್!

 

ಬಾಕ್ಸಾಫೀಸ್ ಸುಲ್ತಾನ್ ದರ್ಶನ್‌ ಅಭಿಮಾನಿಗಳ ಬಗ್ಗೆ ಬಿಡಿಸಿ ಹೇಳೋದೇ ಬೇಕಿಲ್ಲ. ಈಗಾಗಲೇ ‘ಕ್ರಾಂತಿ’ ಚಿತ್ರದ ಪ್ರಚಾರ ಶುರು ಮಾಡಿರುವ ಅಭಿಮಾನಿಗಳು ಸಿನಿಮಾ ರಿಲೀಸ್ ಯಾವಾಗ ಎಂದು ಕಾಯುತ್ತಿದ್ದಾರೆ. ಇತ್ತೀಚೆಗೆ ಪೋಲೆಂಡ್‌ನಲ್ಲಿ 2 ಸಾಂಗ್ಸ್ ಮತ್ತು ಒಂದಷ್ಟು ಮಾತಿನ ಭಾಗದ ಚಿತ್ರೀಕರಣ ಮುಗಿಸಿ ಬಂದಿರೋ ದರ್ಶನ್ ಹೊಸ ಹೇರ್‌ಸ್ಟೈಲ್‌ನಲ್ಲಿ ಅಭಿಮಾನಿಗಳಿಗೆ ದರ್ಶನ ಕೊಟ್ಟಿದ್ದಾರೆ.

ಕಳೆದ ನಾಲ್ಕೈದು ದಿನಗಳಿಂದ ಡಿ ಬಾಸ್ ಹೊಸ ಲುಕ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್‌ ಆಗಿದೆ. ಅಭಿಮಾನಿಗಳು ನಮ್ ಬಾಸ್ ಹೊಸ ಹೇರ್‌ಸ್ಟೈಲ್‌ ಹಿಂದಿನ ಗುಟ್ಟೇನು ಅಂತ ಗೆಸ್ ಮಾಡಲು ಶುರು ಮಾಡಿದ್ದಾರೆ.

‘ರಾಬರ್ಟ್’ ನಂತರ ದರ್ಶನ್‌ ನಟನೆಯ ‘ಕ್ರಾಂತಿ’ ಸಿನಿಮಾ ಭಾರೀ ಕುತೂಹಲ ಮೂಡಿಸಿದೆ. ‘ಯಜಮಾನ’ ಸಿನಿಮಾ ಮಾಡಿ ಗೆದ್ದಿದ್ದ ಅದೇ ತಂಡ ಈ ಚಿತ್ರವನ್ನು ಕಟ್ಟಿಕೊಡ್ತಿದ್ದು, ಈಗಾಗಲೇ ಬಹುತೇಕ ಶೂಟಿಂಗ್‌ ಕಂಪ್ಲೀಟ್‌ ಆಗಿದೆ. ನಿಧಾನವಾಗಿ ಪೋಸ್ಟ್ ಪ್ರೊಡಕ್ಷನ್ ಕಡೆ ಚಿತ್ರತಂಡ ಮುಖ ಮಾಡಿದೆ. ವಿ. ಹರಿಕೃಷ್ಣ ನಿರ್ದೇಶನದ ‘ಕ್ರಾಂತಿ’ ಚಿತ್ರವನ್ನು ಶೈಲಜಾ ನಾಗ್ ಹಾಗೂ ಬಿ. ಸುರೇಶ ದಂಪತಿ ಬಹಳ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ.

‘ಕ್ರಾಂತಿ’ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ಜೋಡಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್‌ ಮಿಂಚಿದ್ದಾರೆ. ಕ್ರೇಜಿಸ್ಟಾರ್‌ ವಿ. ರವಿಚಂದ್ರನ್, ಮುಖ್ಯಮಂತ್ರಿ ಚಂದ್ರು, ಉಮಾಶ್ರೀ ಸೇರಿದಂತೆ ಘಟಾನುಘಟಿ ಕಲಾವಿದರು ಪಾತ್ರವರ್ಗದಲ್ಲಿದ್ದಾರೆ. ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ರಿಲೀಸ್ ಆಗಿದ್ದ ‘ಕ್ರಾಂತಿ’ ಟೀಸರ್‌ ಅಭಿಮಾನಿಗಳ ಮನಗೆದ್ದಿತ್ತು. ಬಹಳ ದಿನಗಳಿಂದ ‘ಕ್ರಾಂತಿ’ ಸಿನಿಮಾ ಅಪ್‌ಡೇಟ್‌ಗಾಗಿ ಅಭಿಮಾನಿಗಳು ಕಾಯುತ್ತಿದ್ದರು.

ಹೊಸ ಲುಕ್‌ನಲ್ಲಿ ದರ್ಶನ್ ‘ಕ್ರಾಂತಿ’ ಸಿನಿಮಾ ಡಬ್ಬಿಂಗ್ಪೋಲೆಂಡ್‌ನಲ್ಲಿ ‘ಕ್ರಾಂತಿ’ ಸಿನಿಮಾ ಚಿತ್ರೀಕರಣ ಮುಗಿಸಿ ಬಂದ ದರ್ಶನ್, ಈಗ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಶುರು ಮಾಡಿದ್ದಾರೆ. ಹೊಸ ಲುಕ್‌ನಲ್ಲಿ ಮಿಂಚುತ್ತಿರುವ ಡಿಬಾಸ್‌ ಡಬ್ಬಿಂಗ್‌ ಸ್ಟುಡಿಯೋದಲ್ಲಿರೋ ಫೋಟೊವನ್ನು ನಿರ್ಮಾಪಕಿ ಶೈಲಜಾ ನಾಗ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. The Voice of Kranti ಬರೆದು ಅವರು ಪೋಸ್ಟ್ ಮಾಡಿರೋ ಫೋಟೊ ಸಖತ್ ವೈರಲ್‌ ಆಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಮ್ಯಾಗಜಿನ್ ಒಂದಕ್ಕಾಗಿ ಬೆತ್ತಲಾಗಿ ಬಾಲಿವುಡ್ ನಟ ರಣ್ವೀರ್ ಸಿಂಗ್ ಫೋಟೊಶೂಟ್

Tue Jul 26 , 2022
  ಮ್ಯಾಗಜಿನ್ ಒಂದಕ್ಕಾಗಿ ಬೆತ್ತಲಾಗಿ ಬಾಲಿವುಡ್ ನಟ ರಣ್ವೀರ್ ಸಿಂಗ್ ಫೋಟೊಶೂಟ್ ಮಾಡಿಸಿದ್ದು, ಚಿತ್ರಗಳು ಸಖತ್ ವೈರಲ್ ಆಗಿವೆ. ರಣ್ವೀರ್‌ ಸಿಂಗ್‌ರ ಬೆತ್ತಲೆ ಚಿತ್ರಗಳು ವೈರಲ್ ಆಗುವ ಜೊತೆಗೆ ವಿವಾದವನ್ನೂ ಎಬ್ಬಿಸಿವೆ. ಬೆತ್ತಲೆಯಾಗಿ ಫೋಟೊಶೂಟ್ ಮಾಡಿಸಿಕೊಂಡಿರುವುದಕ್ಕೆ ರಣ್ವೀರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಿಗ್ಗಾಮುಗ್ಗಾ ಟ್ರೋಲ್ ಮಾಡಲಾಗುತ್ತಿದೆ. ಇದೀಗ ರಣ್ವೀರ್ ಸಿಂಗ್ ವಿರುದ್ಧ ದೂರು ಸಹ ದಾಖಲಾಗಿದೆ. ಬೆತ್ತಲೆಯಾಗಿ ಚಿತ್ರಗಳನ್ನು ತೆಗೆಸಿಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವುದಕ್ಕೆ ರಣ್ವೀರ್ ಸಿಂಗ್ ವಿರುದ್ಧ […]

Advertisement

Wordpress Social Share Plugin powered by Ultimatelysocial