ದರ್ಶನ್ ನಾಯಕನಾಗಿದ್ದ ಮೊದಲ ಚಿತ್ರ ಮೆಜೆಸ್ಟಿಕ್ ಚಿತ್ರಕ್ಕೆ ಈಗ 19 ವರ್ಷ

‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಮೊದಲ ಬಾರಿಗೆ ತೆರೆಯ ಮೇಲೆ ನಾಯಕನಾಗಿ ಮಿಂಚಿದ್ದ ಮೆಜೆಸ್ಟಿಕ್ ಚಿತ್ರ ಬಿಡುಗಡೆಯಾಗಿ ಇಂದಿಗೆ 19 ವರ್ಷಗಳು ಕಳೆದಿವೆ 2002ರ ಫೆಬ್ರುವರಿ 8ರಂದು ಅವರ ‘ಮೆಜೆಸ್ಟಿಕ್’ ಸಿನಿಮಾ ತೆರೆಕಂಡಾಗ ದರ್ಶನ್ ಸಾಕಷ್ಟು ಆಸೆ-ಕನಸುಗಳನ್ನು ಕಟ್ಟಿಕೊಂಡಿದ್ದರು . ಈಗ ಅವರ ಕನಸುಗಳೆಲ್ಲವೂ ಈಡೇರಿದ್ದು ಸ್ಯಾಂಡಲ್ ವುಡ್ ನಲ್ಲಿ ಸೂಪರ್ ಸ್ಟಾರ್ ಪಟ್ಟವನ್ನು ಗಿಟ್ಟಿಸಿಕೊಂಡಿದ್ದಾರೆ. ಮೊದಲ ಸಿನಿಮಾದಲ್ಲಿಯೇ ದರ್ಶನ್ ಗೆ ಭರ್ಜರಿ ಯಶಸ್ಸು ಸಿಕ್ಕಿತು. ಈಗ ಅವರು ಅಭಿಮಾನಿಗಳ ಪಾಲಿನ ‘ಡಿ ಬಾಸ್’ ಆಗಿ ಮಿಂಚುತ್ತಿದ್ದಾರೆ.ನಿರ್ದೇಶಕ ಪಿ.ಎನ್. ಸತ್ಯ ಆ್ಯಕ್ಷನ್-ಕಟ್ ಹೇಳಿದ್ದ ಈ ಚಿತ್ರಕ್ಕೆ . ಎಂ.ಜಿ. ರಾಮಮೂರ್ತಿ ಬಂಡವಾಳ ಹೂಡಿದ್ದರು. ದರ್ಶನ್ ಮೊದಲ ಸಿನಿಮಾದಲ್ಲಿ ಜೋಡಿಯಾಗಿ ‘ಸ್ಪರ್ಶ’ ರೇಖಾ ನಟಿಸಿದ್ದರು. ಇಬ್ಬರ ಕಾಂಬಿನೇಷನ್ಗೆ ಪ್ರೇಕ್ಷಕರು ಕೂಡ ಫಿದಾ ಆಗಿದ್ದರು. ಸಾಧುಕೋಕಿಲ ಸಂಗೀತ ನಿರ್ದೇಶನದ ಹಾಡುಗಳು ಕೂಡ ಹಿಟ್ ಆಗಿದ್ದವು.19 ವರ್ಷಗಳ ಹಿಂದೆ ತೆರೆಕಂಡಿದ್ದ ‘ಮೆಜೆಸ್ಟಿಕ್’ ಸಿನಿಮಾ 100 ದಿನಗಳ ಯಶಸ್ವಿ ಪ್ರದರ್ಶನ ಕಂಡಿತ್ತು. ಆ ಚಿತ್ರದಿಂದ ಸ್ಯಾಂಡಲ್ವುಡ್ಗೆ ಒಬ್ಬ ಭರವಸೆಯ ಹೊಸ ಹೀರೋ ಸಿಕ್ಕಂತಾಯಿತು. ಹಲವು ಕಾರಣಗಳಿಗಾಗಿ ದರ್ಶನ್ ಪಾಲಿಗೆ ‘ಮೆಜೆಸ್ಟಿಕ್’ ಎಂದರೆ ತುಂಬ ಸ್ಪೆಷಲ್ ಆಗಿದೆ.

ಇದನ್ನೂ ಓದಿ :ಶಶಿಕಲಾ ಅವರು ಇಂದು ಚೆನ್ನೈನತ್ತ ಪ್ರಯಾಣ ಬೆಳೆಸಿದ್ದಾರೆ

Please follow and like us:

Leave a Reply

Your email address will not be published. Required fields are marked *

Next Post

ಏಷ್ಯಾದ ಅತಿದೊಡ್ಡ ಸೋಲಾರ್ ಘಟಕದಲ್ಲಿ ಅಗ್ನಿ ಅವಘಡ

Mon Feb 8 , 2021
ಏಷ್ಯಾದ ಅತಿದೊಡ್ಡ ಸೋಲಾರ್ ಘಟಕ ಎನಿಸಿಕೊಡಿರುವ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಸೋಲಾರ್ ಪಾರ್ಕ್ ನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಕಾರು ಹಾಗೂ ಬೈಕ್ ಧಗಧಗಿಸಿ ಉರಿದಿದೆ. ಸೋಲಾರ್ ಪಾರ್ಕ್ನ ತಿರುಮಣಿ ಭಾಗದ ಬ್ಲಾಕ್ ನಂ.37 ರಲ್ಲಿ ಈ ಅಗ್ನಿ ಅವಘಢ ಸಂಭವಿಸಿದೆ. ಸೋಲಾರ್ ಪ್ಯಾನಲ್ ಗಳ ಕೆಳಗಿದ್ದ ಹುಲ್ಲಿಗೆ ಬೆಂಕಿ ತಗುಲಿದ್ದರಿಂದ ಈ ಅನಾಹುತ ಸಂಭವಿಸಿರಬಹುದು ಎನ್ನಲಾಗಿದ್ದು, ಸಿಬ್ಬಂದಿ ಹರಸಾಹಸ ಪಟ್ಟು ಬೆಂಕಿಯನ್ನು ನಾಂದಿಸಿದ್ದಾರೆ. ಇದನ್ನೂ ಓದಿ […]

Advertisement

Wordpress Social Share Plugin powered by Ultimatelysocial