ಕಳೆದ ಏಳು ವರ್ಷಗಳಲ್ಲಿ 3 ಕೋಟಿ ಜನರಿಗೆ ಮನೆ ನೀಡಿದ್ದೇವೆ: ಪ್ರಧಾನಿ ಮೋದಿ

ಹೊಸದಿಲ್ಲಿ: ಕಳೆದ 7 ವರ್ಷಗಳಲ್ಲಿ 3 ಕೋಟಿ ಜನರಿಗೆ ಮನೆ ನೀಡಿದ್ದೇವೆ. 9 ಕೋಟಿ ಗ್ರಾಮೀಣ ಮನೆಗಳಿಗೆ ನಲ್ಲಿ ನೀರು ಒದಗಿಸಿದ್ದೇವೆ. ಇದು ಮೂಲ ಸೌಕರ್ಯಗಳನ್ನು ಹೆಚ್ಚಿಸುವ ಬಜೆಟ್ ಆಗಿದೆ. ಬಡವರಿಗೆ ಮನೆ ಸಿಕ್ಕರೆ ಅವರ ಜೀವನ ಬದಲಾಗುತ್ತದೆ. ಬಡವರ ಶಿಕ್ಷಣಕ್ಕಾಗಿ ನಾವು ಶ್ರಮಿಸಿದ್ದೇವೆ ಎಂದು ಕೇಂದ್ರ ಬಜೆಟ್ ಬಗ್ಗೆ ಬಿಜೆಪಿ ಕಾರ್ಯಕರ್ತರೊಂದಿಗೆ ಬುಧವಾರ ನಡೆಸಿದ ಸಂವಾದದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.ಬಡವರಿಗೆ 80 ಲಕ್ಷ ಮನೆ ನಿರ್ಮಾಣವಾಗಲಿದೆ. ಬಡವರ ಮನೆ ನಿರ್ಮಾಣಕ್ಕೆ 48 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದೇವೆ. 7 ವರ್ಷಗಳಲ್ಲಿ ಜಿಡಿಪಿ ಹೆಚ್ಚಳವಾಗಿದೆ ಎಂದರು.”ನೈಸರ್ಗಿಕ ಕೃಷಿ ಹಾಗೂ ರಾಸಾಯನಿಕ ಮುಕ್ತ ಕೃಷಿಗೆ ಪ್ರೋತ್ಸಾಹಿಸುತ್ತೇವೆ. ದೇಶದ ಕೃಷಿ ಕ್ಷೇತ್ರವನ್ನು ಹೈಟೆಕ್ ಮಾಡಲಾಗುತ್ತದೆ. ಕೃಷಿಗೆ ಸಾಕಷ್ಟು ಕೊಡುಗೆ ನೀಡಲಾಗಿದೆ. ರೈತರಿಗಾಗಿ ಡ್ರೋನ್ ಟೆಕ್ನಾಲಜಿ ಬಳಕೆ ಮಾಡಲಾಗುತ್ತಿದೆ. ಗಂಗಾ ನದಿ ತಟದಲ್ಲಿ 5 ಕಿ.ಮೀ. ವ್ಯಾಪ್ತಿಯಲ್ಲಿ ಕೃಷಿ ಮಾಡಲಾಗುತ್ತದೆ. 4 ರಾಜ್ಯಗಳಲ್ಲಿ ಸಾವಯವ ಕೃಷಿ ಕಾರಿಡಾರ್ ನಿರ್ಮಾಣ ಮಾಡಲಾಗುತ್ತದೆ. ಕೃಷಿಯನ್ನು ಆಧುನೀಕರಣಗೊಳಿಸುವ ಅಗತ್ಯವಿದೆ” ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Nokia Lite ಇಯರ್ಬಡ್ಸ್ BH-205 ವಿಮರ್ಶೆ;

Wed Feb 2 , 2022
ಭಾರತವು 2021 ರಲ್ಲಿ ಸ್ಮಾರ್ಟ್ ಪರ್ಸನಲ್ ಆಡಿಯೋ ಮಾರುಕಟ್ಟೆಯಲ್ಲಿ ಬೆರಗುಗೊಳಿಸುವ ಬೆಳವಣಿಗೆಯನ್ನು ಕಂಡಿದೆ. ಜಾಗತಿಕ ಸ್ಮಾರ್ಟ್ ಪರ್ಸನಲ್ ಆಡಿಯೋ ಮಾರುಕಟ್ಟೆಯಲ್ಲಿ 1.2% ಕುಸಿತದ ಹೊರತಾಗಿಯೂ 2021 ರ Q3 ರಲ್ಲಿ ಮಾರುಕಟ್ಟೆಯು 62% ರಷ್ಟು ಬೆಳೆದಿದೆ. ಭಾರತದಲ್ಲಿನ ಬೆಳವಣಿಗೆಯು TWS (ಟ್ರೂ ವೈರ್‌ಲೆಸ್ ಸ್ಟಿರಿಯೊ) ವಿಭಾಗಕ್ಕೆ ಕಾರಣವೆಂದು ಹೇಳಬಹುದು, ಇದು 92% ರಷ್ಟು ಬೆಳೆದು 7.3 ಮಿಲಿಯನ್ ಘಟಕಗಳನ್ನು ತಲುಪಿತು. ಸ್ಥಳೀಯ ಆಟಗಾರರು, ಹಾಗೆಯೇ ಚೀನೀ ಸ್ಮಾರ್ಟ್‌ಫೋನ್ ತಯಾರಕರು, 10% […]

Advertisement

Wordpress Social Share Plugin powered by Ultimatelysocial