RBI ನ ದ್ವೈಮಾಸಿಕ ಹಣಕಾಸು ನೀತಿ ಘೋಷಣೆ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ದ್ವೈಮಾಸಿಕ ಹಣಕಾಸು ನೀತಿಯನ್ನು ಗವರ್ನರ್ ಶಕ್ತಿಕಾಂತ್ ದಾಸ್ ಘೋಷಣೆ ಮಾಡಿದ್ದು, ರೆಪೋ ದರವು 4%ನಲ್ಲೇ ಮುಂದುವರಿದಿದೆ. ಹಾಗೂ ರಿವರ್ಸ್ ರೆಪೋ ದರದಲ್ಲೂ ಯಾವುದೇ ಬದಲಾವಣೆ ಆಗಿಲ್ಲ. ಹಣ ಪೂರೈಕೆ ದೃಷ್ಟಿಯಲ್ಲಿ ಹಾಗೂ ಹಣದುಬ್ಬರವನ್ನು ಗಮನದಲ್ಲಿ ಇಟ್ಟುಕೊಂಡು ಶಕ್ತಿಕಾಂತ್ ದಾಸ್ ಅವರು ಈ ನಿರ್ಧಾರವನ್ನು ಕೈಗೊಂಡಿದ್ದಾರೆ. ರೀಟೇಲ್ ಹಾಗೂ ಹೋಲ್ ಸೇಲ್ ಹಣದುಬ್ಬರ ದರವು ಮೇಲೇರಿರುವುದು ಸಮಸ್ಯೆ ಆಗಿದೆ. ಅಕ್ಟೋಬರ್ ನಲ್ಲಿ ರೀಟೇಲ್ ಹಣದುಬ್ಬರ ದರವು 7.61 ಪರ್ಸೆಂಟ್ ಇತ್ತು. 2014ರ ಮೇ ತಿಂಗಳ ನಂತರ ಆರು ವರ್ಷದಲ್ಲೇ ಗರಿಷ್ಠ ಮಟ್ಟ ಇದಾಗಿದೆ. ಆರ್ ಬಿಐ ನಿಗದಿ ಮಾಡಿಕೊಂಡಿದ್ದ ಗುರಿಗಿಂತ ಮೇಲಿನ ಹಂತ ಇದಾಗಿದೆ. ಬಹುತೇಕ ವಿಶ್ಲೇಷಕರು ದರ ಕಡಿತ ಆಗಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಭಾರತವು ವಿಶಿಷ್ಟ ಸನ್ನಿವೇಶವನ್ನು ಎದುರಿಸುತ್ತಿದೆ. ಹಣದುಬ್ಬರ ಜಾಸ್ತಿ ಇದೆ ಹಾಗೂ ಬೇಡಿಕೆ ಕಡಿಮೆ ಇದೆ. ಈ ಕಾರಣಕ್ಕೆ ದ್ವೈಮಾಸಿಕ ಹಣಕಾಸು ನೀತಿ ಸಭೆಯಲ್ಲಿ ಯಾವುದೇ ಬದಲಾವಣೆ ಮಾಡದಿರಲು ತೀರ್ಮಾನಿಸಲಾಗಿದೆ.

ಇದನ್ನು ಓದಿ:ಬೆಳ್ಳಂ ಬೆಳಗ್ಗೆ ಖತರ್ನಾಕ್ ಕಳ್ಳರ ಕೈಚಳಕ

Please follow and like us:

Leave a Reply

Your email address will not be published. Required fields are marked *

Next Post

ನಮ್ಮ ಪಕ್ಷಕ್ಕೆ ನಮ್ಮದೇ ಆದ ಸಿದ್ಧಾಂತವಿದೆ ಡಿಕೆ ಶಿವಕುಮಾರ್ ಹೇಳಿಕೆ

Fri Dec 4 , 2020
ನಾವು ಪಕ್ಷದ ಕೆಲಸ ಮಾಡಬೇಕು.ನಮ್ದು ಪಾರ್ಟಿ ಇದೆ, ನಮ್ದು ಸಿದ್ದಾಂತ ಇದೆ. ಚುನಾವಣೆ ಮೇಲೆ, ಪ್ರಜಾಪ್ರಭುತ್ವದ ಮೇಲೆ, ನಂಬಿಕೆ ಇಟ್ಕೊಂಡಿದ್ದೀವಿ ಎಂದು ಕಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಡಿಕೆಶಿ ನಾವು ಗ್ರಾಮ ಪಂಚಾಯಿತಿ ಏಲೆಕ್ಷನ್ ನಡೆಸಬೇಕೆಂದು ಹೈಕೋರ್ಟ್ ಮೊರೆ ಹೋಗಿದ್ದೇವು. ಈಗ ಕೋರ್ಟ್ ಗೌರವಯುತ ವಾಗಿ ಏಲೆಕ್ಷನ್ ನಡೆಸಲು ಆದೇಶ ಹೊರಡಿಸಿದೆ ಎಂದ್ರು. ಹಾಗೂ ಇದೇ ತಿಂಗಳ 6ನೇ ತಾರೀಖಿನಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ […]

Advertisement

Wordpress Social Share Plugin powered by Ultimatelysocial