ರೈಲ್ವೆ ಹಳಿಗಳನ್ನು ಸ್ಪೋಟಿಸಲು ಪಾಕ್ ಹೊಂಚು, ಭಾರತದ ಗುಪ್ತಚರ ವಿಭಾಗದಿಂದ ಎಚ್ಚರಿಕೆ!

 

ಪಾಕಿಸ್ತಾನದ ಐಎಸ್ಐ ತನ್ನ ಸ್ಲೀಪರ್ ಸೆಲ್‌ಗಳೊಂದಿಗೆ ಪಂಜಾಬ್ ಮತ್ತು ಸುತ್ತಮುತ್ತಲ ಭಾಗದ ರೈಲು ಹಳಿಗಳನ್ನು, ವಿಶೇಷವಾಗಿ ಸರಕು ಸಾಗಣೆ ರೈಲುಗಳು ಆಗಾಗ್ಗೆ ಬರುವ ಹಳಿಗಳನ್ನು ಸ್ಪೋಟ ಮಾಡಲು ಹೊಂಚು ರೂಪಿಸುತ್ತಿದೆ ಎಂದು ಭಾರತದ ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿದ್ದಾರೆ.

ನವದೆಹಲಿ : ಪಂಜಾಬ್ ಮತ್ತು ಅದರ ಸುತ್ತಮುತ್ತಲಿನ ರಾಜ್ಯಗಳಲ್ಲಿ ರೈಲ್ವೆ ಹಳಿಗಳನ್ನು ಗುರಿಯಾಗಿಸಲು ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್  ದೊಡ್ಡ ಸಂಚು ರೂಪಿಸಿದೆ ಎಂದು ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿದ್ದಾರೆ.

ಐಎಸ್‌ಐ ಸ್ಲೀಪರ್ ಸೆಲ್ ಗಳು ಪಂಜಾಬ್ ಮತ್ತು ಪಕ್ಕದ ರಾಜ್ಯಗಳಲ್ಲಿ ರೈಲ್ವೆ ಹಳಿಗಳನ್ನು ಸ್ಫೋಟಿಸಲು ಯೋಜಿಸಿದ್ದಾರೆ ಎಂದು ಎಚ್ಚರಿಕೆ ನೀಡಿದೆ. ಸರಕು ಸಾಗಣೆ ರೈಲುಗಳ ಪ್ರಯಾಣವನ್ನು ತಡೆಯಲು ರೈಲ್ವೆ ಹಳಿಗಳನ್ನು ಸ್ಫೋಟಿಸುವ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಭಾರತದ ಗುಪ್ತಚರ ಸಂಸ್ಥೆಗಳು  ತಿಳಿಸಿದ್ದಾರೆ.

ರೈಲ್ವೆ ಹಳಿಗಳನ್ನು ಗುರಿಯಾಗಿಸಲು ಐಎಸ್‌ಐ ಭಾರತದಲ್ಲಿನ ತನ್ನ ಸ್ಲೀಪರ್ ಸೆಲ್ ಗಳಿಗೆ ದೊಡ್ಡ ಪ್ರಮಾಣದಲ್ಲಿ ಹಣ ನೀಡುತ್ತಿದೆ ಎಂದು ಗುಪ್ತಚರ ಸಂಸ್ಥೆಗಳು ಎಚ್ಚರಿಕೆಯಲ್ಲಿ  ಮೂಲಕ ತಿಳಿಸಿದ್ದಾರೆ. ಭಾರತದಲ್ಲಿ ಇರುವ ಪಾಕಿಸ್ತಾನದ ಸ್ಲೀಪರ್ ಸೆಲ್‌ಗಳಿಗೆ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸಲು ಭಾರಿ ಮೊತ್ತವನ್ನು ನೀಡಲಾಗುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕ್ವಾಡ್ ಶೃಂಗಸಭೆಯಲ್ಲಿ ಮೋದಿ-ಬೈಡನ್ ನಡುವೆ 'ಗೋಧಿ' ಚರ್ಚೆ!

Mon May 23 , 2022
ಟೋಕಿಯೋ, ಮೇ 23: ಜಪಾನ್ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಮಂಗಳವಾರ ಯುಎಸ್ ಅಧ್ಯಕ್ಷ ಜೋ ಬೈಡನ್ ಅನ್ನು ಭೇಟಿ ಮಾಡಲಿದ್ದಾರೆ. ಈ ವೇಳೆ ಭಾರತದಿಂದ ಗೋಧಿ ರಫ್ತಿಗೆ ನಿರ್ಬಂಧ ವಿಧಿಸಿರುವುದಕ್ಕೆ ಸಂಬಂಧಿಸಿದಂತೆ ಉಭಯ ನಾಯಕರು ಚರ್ಚೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. ಉಕ್ರೇನ್ ವಿರುದ್ಧದ ರಷ್ಯಾದ ನಡೆಯುತ್ತಿರುವ ಯುದ್ಧದ ಕುರಿತು ಪ್ರಧಾನಿ ಮೋದಿ ಜೊತೆಗೆ ಜೋ ಬೈಡನ್ “ರಚನಾತ್ಮಕ ಮತ್ತು ನೇರ” ಚರ್ಚೆ ನಡೆಸುವ ಸಾಧ್ಯತೆಯಿದೆ. ಏಕೆಂದರೆ ಪೂರ್ವ […]

Related posts

Advertisement

Wordpress Social Share Plugin powered by Ultimatelysocial