ದಿವ್ಯಾ ಹಾಗರಗಿಗೆ ಸಿಕ್ಕಿತ್ತು ಕಾಂಗ್ರೆಸ್​ ಶ್ರೀರಕ್ಷೆ! ತಲೆಮರೆಸಿಕೊಳ್ಳಲು ಸಹಾಯ ಮಾಡಿದ್ದು ಯಾರೆಂದು ಉಲ್ಲೇಖಸಿದ ಸಿಐಡಿ

ಬೆಂಗಳೂರು: ಪಿಎಸ್​ಐ ನೇಮಕಾತಿ ಅಕ್ರಮ ಬಯಲಾಗುತ್ತಿದ್ದಂತೆಯೇ ಕಲಬುರಗಿಯಿಂದ ನಾಪತ್ತೆಯಾಗಿ ಗುಜರಾತ್​ನಲ್ಲೂ ಕೆಲ ಕಾಲ ತಲೆಮರೆಸಿಕೊಂಡಿದ್ದ ದಿವ್ಯಾ ಹಾಗರಗಿಗೆ ಕಾಂಗ್ರೆಸ್​ನಿಂದಲೇ ಶೀರಕ್ಷೆ ಸಿಕ್ಕಿತ್ತು ಎಂಬ ವಿಷ್ಯ ಬಯಲಾಗಿದೆ.

ಏ.13ರಂದು ಕಲಬುರಗಿಯಿಂದ ಗುಜರಾತ್​ನ ಕಾಳಿಕಾ ಮಂದಿರಕ್ಕೆ ಖಾಸಗಿ ವಾಹನದಲ್ಲಿ ತೆರಳಿದ್ದಳು.

ಅಲ್ಲಿ 3-4 ದಿನ ತಂಗಿದ್ದಳು. ಅಲ್ಲಿಂದ ಅಂಬಾಜಿ ಮಂದಿರಕ್ಕೂ ಭೇಟಿ ನೀಡಿ, ಇಲ್ಲಿಯೂ ಮೂರ್ನಾಲ್ಕು ದಿನ ಇದ್ದಳು. ಬಳಿಕ ಮಹಾರಾಷ್ಟ್ರದತ್ತ ಪಯಣ ಬೆಳೆಸಿದ್ದಳು. ಪುಣೆಗೆ ಬಂದು ಪರಿಚಿತ ಸುರೇಶ ಕಾಟೇಗಾಂವ್​ ಸಂಪರ್ಕದಲ್ಲಿದ್ದಳು. ಈತನ ಬಳಿ ಕೆಲಸಕ್ಕಿದ್ದ ಕಾಳಿದಾಸ ಬಾಡಿಗೆಗೆ ಪಡೆದಿದ್ದ ಅಪಾರ್ಟ್​ಮೆಂಟ್​ನಲ್ಲಿ ಐದು ದಿನ ಕಳೆದಿದ್ದಳು ಎಂದು ಮೂಲಗಳು ತಿಳಿಸಿವೆ. ನಂತರ ದಿವ್ಯಾಳನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ವಿಶೇಷವೆಂದರೆ, ಈಕೆಗೆ ತಲೆಮರೆಸಿಕೊಳ್ಳಲು ಸಹಾಯ ಮಾಡಿದವರು ಕಾಂಗ್ರೆಸ್​ ಮುಖಂಡರು ಎಂದು ಹೇಳಲಾಗಿದೆ.

ಸುರೇಶ್​ ಕಾಟೇಗಾಂವ್​ ಮಹಾರಾಷ್ಟ್ರದ ಸ್ಥಳೀಯ ಕಾಂಗ್ರೆಸ್​ ಮುಖಂಡ. ಈತನ ಸಹೋದರಿ ಸುರೇಖಾ ಕಾಂಗ್ರೆಸ್​ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಸುರೇಖಾ ಮಹಾರಾಷ್ಟ್ರದ ಅಕ್ಕಲಕೋಟ ತಾಲೂಕು ಪಂಚಾಯಿತಿ​ ಮಾಜಿ ಅಧ್ಯಕ್ಷೆ ಹಾಗೂ ಸದ್ಯ ಸದಸ್ಯೆಯಾಗಿದ್ದಾರೆ. ಸುರೇಶ್​ಗೆ ದಿವ್ಯಾ ಪರಿಚಯವಾಗಲು ಅಫಜಲಪುರದಲ್ಲಿ ಮರಳು ಬ್ಲಾಕ್​ ಟೆಂಡರ್​ ಪಡೆಯಲು ಸಹಕರಿಸಿದ್ದೇ ಕಾರಣ ಎನ್ನಲಾಗಿದೆ. ಹೀಗಾಗಿ ದಿವ್ಯಾಗೆ ಕಾಂಗ್ರೆಸ್​ ನಾಯಕರೇ ‘ಶ್ರೀರಕ್ಷೆ’ಯಾಗಿರುವುದು ಬಯಲಿಗೆ ಬರುತ್ತಿದೆ. ಈ ಅಂಶವನ್ನು ಸಿಐಡಿ ತನ್ನ ದಾಖಲೆಗಳಲ್ಲಿ ಉಲ್ಲೇಖಿಸಿದೆ ಎಂದು ತಿಳಿದುಬಂದಿದೆ. ದಿವ್ಯಾ ಸದ್ಯ ಜೈಲಿನಲ್ಲಿದ್ದಾಳೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಯೋಗಿ ಆದಿತ್ಯನಾಥ್ ರನ್ನು ಕೊಂಡಾಡಿದ ಕಂಗನಾ ರಣಾವತ್

Mon May 2 , 2022
ಬಾಲಿವುಡ್ ನಟಿ ಕಂಗನಾ ರಣಾವತ್ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭಾನುವಾರ ಭೇಟಿ ಮಾಡಿದ್ದು, ಈ ಭೇಟಿ ತುಂಬಾ ಸಂತಸ ತಂದಿದೆ ಎಂದು ಹೇಳಿಕೊಂಡಿದ್ದಾರೆ. ಈ ಬಗ್ಗೆ ತಮ್ಮ ಇನ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ಕಂಗನಾ, ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಅಭೂತಪೂರ್ವವಾದ ಗೆಲುವು ಸಾಧಿಸಿರುವ ಮಹಾರಾಜ್ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದ್ದು ನನ್ನ ಅದೃಷ್ಠ ಎಂದು ಬಣ್ಣಿಸಿದ್ದಾರೆ. ಮಹಾರಾಜ್ ಜಿಯವರನ್ನು ಭೇಟಿ ಮಾಡಿದ ಈ ಸಂಜೆ ಅದ್ಭುತವಾದುದು. […]

Advertisement

Wordpress Social Share Plugin powered by Ultimatelysocial