ಕನ್ನಡದ ಡೊಳ್ಳು ಚಿತ್ರಕ್ಕೆ ಪ್ರಶಸ್ತಿಯ ಗರಿ…!!!

ಗೋವಿಂದಾಯ ನಮಃ, ಗೂಗ್ಲಿ, ರಣ ವಿಕ್ರಮ, ಜೆಸ್ಸಿ, ನಟರಾಜ ಸರ್ವೀಸ್ ಮತ್ತು ನಟ ಸಾರ್ವಭೌಮ ಸಿನಿಮ ಗಳನ್ನು ನಿರ್ದೇಶಿಸಿರುವ ಪವನ್ ಒಡೆಯರ್ ಡೊಳ್ಳು ಸಿನಿಮಾದ ಮೂಲಕ ನಿರ್ಮಾಪಕರಾಗಿರೋದು ಗೊತ್ತೇ ಇದೆ. ಇದೀಗ ಸಿನಿಮಾಗೆ ಪ್ರಶಸ್ತಿಗಳ ಮಹಾಪೂರವೇ ಹರಿದು ಬರುತ್ತಿದೆಪವನ್ ಮತ್ತು ಪತ್ನಿ ಅಪೇಕ್ಷಾ ಪುರೋಹಿತ್ ಸೇರಿ ನಿರ್ಮಿಸಿರುವ ಸಿನಿಮಾ ಸಾಕಷ್ಟು ಜನಮೆಚ್ಚುಗೆ ಕೂಡ ಪಡೆದುಕೊಂಡಿದೆ. ಪವನ್ ಮತ್ತು ಅಪೇಕ್ಷಾ ನಿರ್ಮಾಣದ ಡೊಳ್ಳು ಸಿನಿಮಾ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ. ಇತ್ತೀಚೆಗೆ ಇನೋವೇಟೀವ್ ಫಿಲಂ ಆಯೋಜಿಸಿದ್ದ 33ದೇಶಗಳ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಡೊಳ್ಳು ಚಿತ್ರ ದಾದಾ ಸಾಹೇಬ್ ಫಾಲ್ಕೆ ಅಕಾಡೆಮಿ ಪ್ರಶಸ್ತಿಗೆ ಭಾಜನವಾಗಿದೆ. ಡೊಳ್ಳು ಚಿತ್ರ ಪ್ರತಿಷ್ಠಿತ 20ನೇ ಅಂತಾರಾಷ್ಟ್ರೀಯ ಢಾಕಾ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆ ಆಗಿತ್ತು. ಗಿರೀಶ್ ಕಾಸರವಳ್ಳಿ ನಿರ್ದೇಶನದ ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ ಚಿತ್ರದ ನಂತರ ಚಿತ್ರೋತ್ಸವಕ್ಕೆ ಆಯ್ಕೆ ಆಗಿದ್ದ ಮತ್ತೊಂದು ಕನ್ನಡ ಸಿನಿಮಾ ಇದಾಗಿತ್ತು. ಅಮೆರಿಕದ ಕಲೈಡೊಸ್ಕೋಪ್ ಇಂಡಿಯನ್ ಫಿಲಂ ಫೆಸ್ಟಿವಲ್ ಬಾಸ್ಟನ್ ನಲ್ಲಿ ಡೊಳ್ಳು ಸಿನಿಮಾದ ಮೊದಲ ಪ್ರದರ್ಶನ ಕಂಡಿತ್ತು ಮತ್ತು ಡಾಲಸ್ ಸೌತ್ ಏಶಿಯನ್ ಫಿಲಂ ಫೆಸ್ಟಿವಲ್ಗು ಆಯ್ಕೆ ಆಗಿತ್ತು. ಪ್ರೇಕ್ಷಕರ ಗಮನ ಸೆಳೆಯೊದ್ರೊಂದಿಗೆ ಎಲ್ಲರ ಪ್ರಶಂಸೆಯನ್ನು ಪಡೆದುಕೊಂಡಿತ್ತು.

 

ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಟೀಕೆಗೆ ಗುರಿಯಾದ ಮೊಹಮ್ಮದ್‌ ಶಮಿಗೆ ಬಿಸಿಸಿಐ ಬೆಂಬಲ...!!!

Wed Oct 27 , 2021
ಸಾಮಾಜಿಕ ಮಾಧ್ಯಮಗಳಲ್ಲಿ ನಿಂದನೆಗೆ ಗುರಿಯಾಗಿರುವ ಟೀಮ್ ಇಂಡಿಯಾದ ವೇಗದ ಬೌಲರ್‌ ಮೊಹಮ್ಮದ್‌ ಶಮಿ ಅವರಿಗೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ  ಬೆಂಬಲವನ್ನ  ವ್ಯಕ್ತಪಡಿಸಿದೆ.ಟಿ-20 ವಿಶ್ವಕಪ್‌ನಲ್ಲಿ ಭಾನುವಾರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿತ್ತು. ಇದೇ ಕಾರಣಕ್ಕೆ ವಿರಾಟ್ ಕೊಹ್ಲಿ ಬಳಗದ ವಿರುದ್ಧ ಅಭಿಮಾನಿಗಳು ಆನ್‌ಲೈನ್ ದಾಳಿ ನಡೆಸಿದ್ದರು. ಸದ್ಯ ಮೊಹಮ್ಮದ್‌ ಶಮಿ ಬೆಂಬಲಕ್ಕೆ ನಿಂತಿರುವ ಬಿಸಿಸಿಐ, ‘ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಜೊತೆಗಿನ […]

Advertisement

Wordpress Social Share Plugin powered by Ultimatelysocial