ಮನೆಯಲ್ಲಿ ನಂಬರ್ 1 ಯಾರು ? ಧೋನಿ ಕೊಟ್ಟ ಉತ್ತರವೇನು ?

ಮುಂಬಯಿ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ತನ್ನದೇ ಆದ ವೈಶಿಷ್ಟ್ಯಗಳಿಂದ ಸುದ್ದಿಯಾಗುತ್ತಲೇ ಇರಿಯುತ್ತಾರೆ. ಕೂಲ್ ಕ್ಯಾಪ್ಟನ್ ಅಭಿಮಾನಿಯೊಬ್ಬರು ಕೇಳಿದ ವೈಯಕ್ತಿಕ ಪ್ರಶ್ನೆಗೆ ಕೂಲ್ ಆಗಿಯೇ ಉತ್ತರ ನೀಡಿ ಸುದ್ದಿಯಾಗಿದ್ದಾರೆ.

 

ಐಪಿಎಲ್ ಆರಂಭಕ್ಕೂ ಮುನ್ನ ಚೆನ್ನೈ ತಂಡದ ಅಭಿಮಾನಿಗಳೊಂದಿಗೆ ಧೋನಿ ಆತ್ಮೀಯ ಸಂವಾದ ನಡೆಸಿದರು. ಈ ವೇಳೆ ಅಭಿಮಾನಿಯೊಬ್ಬರು ಧೋನಿ ಸರ್, ನಾನು ನಿಮಗೆ ವೈಯಕ್ತಿಕ ಪ್ರಶ್ನೆ ಕೇಳಬಹುದೇ ಎಂದು ಕೇಳಿದ್ದಾರೆ. ಸಾಧ್ಯವಾದರೆ ಉತ್ತರಿಸುತ್ತೇನೆ ಎಂದಿದ್ದಾರೆ. ಆಗ ಅಭಿಮಾನಿ, ಎಲ್ಲರಿಗೂ ಗೊತ್ತು ನೀವು ಎಲ್ಲಾ ಕ್ಷೇತ್ರಗಳಲ್ಲಿ ನಂಬರ್ 1 ಎಂದು, ನಿಮ್ಮ ಮನೆಯಲ್ಲಿ ಯಾರು ನಂಬರ್ 1 ಎಂದು ಕೇಳಿದ್ದಾರೆ.

ಉತ್ತರಿಸಿದ ಧೋನಿ, ನೀವು ತಿರುಗಿ ನೋಡಿ, ಅರ್ಧಕ್ಕೂ ಹೆಚ್ಚು ಜನರು ನಗುತ್ತಿದ್ದಾರೆ. ಎಲ್ಲರಿಗೂ ಗೊತ್ತು, ಮನೆಯಲ್ಲಿ ಹೆಂಡತಿಯೇ ನಂಬರ್ 1 ಎಂದು ಎಲ್ಲರನ್ನೂ ನಗೆ ಗಡಲಲ್ಲಿ ತೇಲಿಸಿದ್ದಾರೆ.

ಧೋನಿ ಅವರು 2010 ರಲ್ಲಿ ಸಾಕ್ಷಿ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು, ಅವರಿಗೆ ಝೀವಾ ಹೆಸರಿನ ಮಗಳಿದ್ದಾಳೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Rs 4k ಪಾವತಿಸಿ ಭಾರತವನ್ನು ಪ್ರವೇಶಿಸಿದರು, MP ಮಾಡ್ಯೂಲ್ ಅನ್ನು ಸ್ಥಾಪಿಸಲು ಕೋಲ್ಕತ್ತಾದಿಂದ ಹಣವನ್ನು ಪಡೆದರು!

Thu Mar 17 , 2022
ಈ ವಾರದ ಆರಂಭದಲ್ಲಿ, ಮಧ್ಯಪ್ರದೇಶ ಎಟಿಎಸ್ ಜಮಾತ್-ಉಲ್-ಮುಜಾಹಿದ್ದೀನ್ (ಬಾಂಗ್ಲಾದೇಶ) ನ ನಾಲ್ವರು ಭಯೋತ್ಪಾದಕರನ್ನು ಬೋಧಗಯಾ ಸ್ಫೋಟಗಳಿಗೆ ಸಂಬಂಧಿಸಿದಂತೆ ಬಂಧಿಸಲಾಯಿತು. ಬಂಧಿತರನ್ನು ಫಜರ್ ಅಲಿ ಅಲಿಯಾಸ್ ಮೆಹಮೂದ್ (32), ಮೊಹಮ್ಮದ್ ಅಕೀಲ್ ಅಲಿಯಾಸ್ ಅಹ್ಮದ್ (24), ಜಹೂರುದ್ದೀನ್ ಅಲಿಯಾಸ್ ಇಬ್ರಾಹಿಂ (28) ಮತ್ತು ಫಜರ್ ಜೈನುಲ್ ಅಬ್ದೀನ್ ಅಲಿಯಾಸ್ ಅಕ್ರಮ್ ಅಲ್ ಹಸನ್ (25) ಎಂದು ಗುರುತಿಸಲಾಗಿದೆ. ತನಿಖೆಯ ಸಮಯದಲ್ಲಿ, ನಾಲ್ವರು ಜೆಎಂಬಿ ಕಾರ್ಯಕರ್ತರಲ್ಲಿ ಮೂವರು ಮಧ್ಯವರ್ತಿಗಳಿಗೆ ಭಾರತಕ್ಕೆ ಪ್ರವೇಶಿಸಲು ರೂ […]

Advertisement

Wordpress Social Share Plugin powered by Ultimatelysocial