ಡ್ರೈ ಫ್ರೂಟ್ಸ್ ತಿನ್ನುವುದರಿಂದ ಆಗುವ ಲಾಭಗಳು.

ದಿನಾಲೂ ಬಾದಾಮಿ ತಿನ್ನುವುದರಿಂದ ತುಂಬಾ ಪ್ರಯೋಜನಗಳಿವೆ. ಬಾದಾಮಿಗಳಲ್ಲಿ ಪೋಷಕಾಂಶಗಳ ಭಂಡಾರವೇ ಇದೆ. ಹೃದಯದ ಆರೋಗ್ಯಕ್ಕೆ ಇವು ಪೂರಕವಾಗಿವೆ. ಮಧುಮೇಹಿಗಳಿಗೂ ಇದು ಒಳ್ಳೆಯದು. ಆದರೆ ಇವುಗಳನ್ನು ಒಣದಾಗಿ ಸೇವಿಸುವುದರಿಂದ ಇದರ ಪೋಷಕಾಂಶಗಳ ಪೂರ್ಣ ಪ್ರಯೋಜನ ಪಡೆಯಲು ಸಾಧ್ಯವಿಲ್ಲ. ಇವುಗಳನ್ನು ನೆನೆಸಿಟ್ಟು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಆಹಾರವಾಗಿ ಸೇವಿಸುವುದರಿಂದ ಹೆಚ್ಚು ಪ್ರಯೋಜನವಿದೆ.
ರಾತ್ರಿ ನೆನೆಸಿಟ್ಟ್ ಬಾದಾಮಿಯನ್ನು ತಿನ್ನುವುದು ಒಂದು ಸಂಪ್ರದಾಯದಂತೆ ಬಹುತೇಕ ಎಲ್ಲಾ ಕುಟುಂಬಗಳಲ್ಲಿಯೂ ನಡೆಸಿಕೊಂಡು ಬರಲಾಗುತ್ತಿದೆ. ನಮ್ಮ ಅಮ್ಮಂದಿರು ಮತ್ತು ಅಜ್ಜಿಯಂದಿರು ಈ ವಿಧಾನವನ್ನು ಹಿಂದಿನವರಿಂದ ಕಲಿತು ಬಂದು ತಮ್ಮ ಕುಟುಂಬದ ಕಿರಿಯರಿಗೂ ತಿನ್ನಿಸುವ ಮೂಲಕ ಈ ಸಂಪ್ರದಾಯವನ್ನು ಜೀವಂತವಾಗಿ ಇರಿಸಿದ್ದಾರೆ. ನೆನೆಸಿಟ್ಟ ಬಾದಾಮಿಯಲ್ಲಿ ಇರುವಂತಹ ಪ್ರೀ ಬಯಾಟಿಕ್ ಅಂಶವು ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ತುಂಬಾ ಸಹಾಯಕಾರಿ ಆಗಿರುತ್ತದೆ. ಪ್ರೀ ಬಯಾಟಿಕ್ ಅಂಶವು ಹೊಟ್ಟೆಯಲ್ಲಿ ಒಳ್ಳೆಯ ಬ್ಯಾಕ್ಟೀರಿಯವನ್ನು ಉತ್ಪಾದಿಸುವ ಮೂಲಕ ಹೊಟ್ಟೆಯ ಮೇಲೆ ಪರಿಣಾಮ ಬೀರುವಂತಹ ರೋಗಗಳನ್ನು ತಡೆಗಟ್ಟುತ್ತದೆ. ಇನ್ನು ನೆನೆಸಿಟ್ಟ ಬಾದಾಮಿಯನ್ನು ತಿನ್ನುವುದರಿಂದ ಅದು ಸಂಪೂರ್ಣ ಜೀರ್ಣಕಿಯೆಗೆ ಸಹಾಯ ಮಾಡಿ ಆಹಾರವು ಸರಾಗವಾಗಿ ಹಾಗೂ ವೇಗವಾಗಿ ಕರಗಲು ಸಹಾಯ ಮಾಡುತ್ತದೆ. ಬಾದಾಮಿಯನ್ನು ನೀರಿನಲ್ಲಿ ನೆನೆಸಲು ಹಾಕಿದ್ರೆ ಸಿಪ್ಪಯು ಕಿತ್ತು ಹೋಗುವುದು ಇದರಿಂದ ಅದು ಬೇಗನೆ ಕರಗಿ ಹೆಚ್ಚಿನ ಪೋಷಕಾಂಶಗಳನ್ನು ಒದಗಿಸುತ್ತದೆ. ತಾಯಿ ಆಗುವವರು ಇದ್ದರೆ ಪ್ರತೀ ದಿನವೂ ನೆನೆಸಿಟ್ಟ ಬಾದಾಮಿಯನ್ನು ತಿನ್ನುವುದು ಒಳ್ಳೆಯದು. ಇದು ತಾಯಿ ಹಾಗೂ ಮಗು ಇಬ್ಬರ ಆರೋಗ್ಯಕ್ಕೂ ಒಳ್ಳೆಯದು. ನೆನೆಸಿಟ್ಟ ಬಾದಾಮಿಯು ತಾಯಿಯ ಹಾಗೂ ಗರ್ಭದಲ್ಲಿ ಇರುವ ಮಗುವಿಗೆ ಸಾಕಷ್ಟು ಪೋಷಕಾಂಶಗಳನ್ನು ಹಾಗೂ ಶಕ್ತಿಯನ್ನು ಒದಗಿಸುತ್ತವೆ.ಬಾದಾಮಿಯಲ್ಲಿ ಹಲವಾರು ಅಗತ್ಯ ಪೋಷಕಾಂಶಗಳಿವೆ. ಬಾದಾಮಿಯಲ್ಲಿ ಉತ್ತಮ ಪ್ರಮಾಣದ ಕರಗುವ ನಾರು, ಪ್ರೋಟೀನ್, ವಿಟಮಿನ್ ಇ, ಮೆಗ್ನೀಶಿಯಂ ಹಾಗೂ ಇತರ ಪೋಷಕಾಂಶಗಳಿವೆ.
ಬಾದಾಮಿಯಲ್ಲಿ ಉತ್ತಮ ಪ್ರಮಾಣದ ಪ್ರೋಟೀನ್, ಕೊಬ್ಬುಗಳು ಮತ್ತು ಕರಗುವ ನಾರು ಇದೆ. ಕೆಲ ಬಾದಾಮಿಗಳ ಸೇವನೆಯಿಂದ ಅನಗತ್ಯ ಆಹಾರ ಸೇವನೆಯ ಬಯಕೆ ಬರುವುದಿಲ್ಲ. ಅಗತ್ಯಕ್ಕೆ ತಕ್ಕಷ್ಟು ಆರೋಗ್ಯಕರ ಆಹಾರ ಸೇವಿಸಿದರೆ ಆರೋಗ್ಯ ತನ್ನಿಂತಾನೇ ಉತ್ತಮಗೊಳ್ಳುತ್ತದೆ. ತನ್ಮೂಲಕ ತೂಕ ಇಳಿಕೆಗೆ ಪರೋಕ್ಷವಾಗಿ ನೆರವಾಗುತ್ತದೆ. ವ್ಯತಿರಿಕ್ತವಾಗಿ ತೂಕ ಹೆಚ್ಚಿಸಿಕೊಳ್ಳಬಯಸುವ ವ್ಯಕ್ತಿಗಳು ಬಾದಾಮಿ ಸೇವನೆಯ ಪ್ರಮಾಣವನ್ನು ಹೆಚ್ಚಿಸಬಹುದು. ಅಧ್ಯಯನದ ಪ್ರಕಾರ ಆರು ತಿಂಗಳ ಕಾಲ ಬಾದಾಮಿ ತಿನ್ನುವ ಮಹಿಳೆಯರ ತೂಕ ಇಳಿಕೆ ಮತ್ತು ಅವರ ಬಿಎಂಐ ನಿಯಂತ್ರಣದ ಕುರಿತು ಆಶ್ಚರ್ಯಕರ ಫಲಿತಾಂಶಗಳು ಲಭಿಸಿವೆ.

ದೇಹಕ್ಕೆ ಪ್ರಮುಖವಾಗಿ ಅಗತ್ಯವಾಗಿರುವ ಪೋಷಕಾಂಶವಾದ ‘ಮೆಗ್ನೀಸಿಯಮ್’ ಅನ್ನು ಪೂರೈಸುತ್ತವೆ, ಇದು 300 ಕ್ಕೂ ಹೆಚ್ಚು ದೈಹಿಕ ಕಾರ್ಯಗಳಿಗೆ ಕಾರಣವಾಗಿದೆ. ಇಂದು, ಪ್ರಪಂಚದಾದ್ಯಂತದ ಹೆಚ್ಚಿನ ಜನರು ಮೆಗ್ನೀಸಿಯಮ್ ಕೊರತೆ ಹೊಂದಿದ್ದಾರೆ ಅಥವಾ ಕನಿಷ್ಠ ಸೇವನೆಯನ್ನು ಪಡೆಯುತ್ತಿಲ್ಲ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಆದರೆ ಪ್ರತಿದಿನ ಕೆಲವು ಬಾದಾಮಿಗಳನ್ನು ನೆನೆಸಿಟ್ಟು ತಿನ್ನಲು ಪ್ರಾರಂಭಿಸಿದರೆ ಈ ಕೊರತೆಯನ್ನು ನೀಗಿಸಬಹುದು.

ಬಾದಾಮಿಯಲ್ಲಿ ಎಲ್-ಕಾರ್ನಿಟೈನ್ ಮತ್ತು ಇತರ ಪೋಷಕಾಂಶಗಳಿದ್ದು ಇದು ಹೊಸ ಮೆದುಳಿನ ಕೋಶಗಳ ಉತ್ಪಾದನೆ ಮತ್ತು ಬೆಳವಣಿಗೆಗೆ ನೆರವಾಗುತ್ತದೆ. ಅರಿವಿನ ಸಾಮರ್ಥ್ಯಗಳಿಗೆ ಸಂಬಂಧಿಸಿರುವ ಮೆದುಳಿನಲ್ಲಿರುವ ಫೆನಿಲಾಲನೈನ್ ಎಂಬ ರಾಸಾಯನಿಕವು ಸ್ಮರಣಶಕ್ತಿಯನ್ನು ಉತ್ತಮಗೊಳಿಸುತ್ತದೆ ಎಂದು ಸಾಬೀತಾಗಿದೆ. ಬಾದಾಮಿಯಲ್ಲಿರುವ ವಿಟಮಿನ್ ಬಿ6 ಮೆದುಳಿನ ಜೀವಕೋಶಗಳಿಗೆ ಪ್ರೋಟೀನ್‌ಗಳ ಜೈವಿಕ ಲಭ್ಯತೆಯನ್ನು ಹೆಚ್ಚಿಸುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಡ್ರೈ ಫ್ರೂಟ್ಸ್ ತಿನ್ನುವುದರಿಂದ ಆಗುವ ಲಾಭಗಳು.

Sun Mar 13 , 2022
ಪಿಸ್ತಾ ಅಂಜೂರ ದಿನಕ್ಕೆ ಒಂದು ಅಥವಾ ಎರಡು ಬಾರಿ ಪಿಸ್ತಾವನ್ನು ತಿನ್ನುವವರು ಹೆಚ್ಚಿನ ಪ್ರಮಾಣದ ಲುಟೀನ್ ಮತ್ತು ವೈ ಟೊಕೊಫೆರಾಲ್ ಅನ್ನು ಹೊಂದಿದ್ದರು. ಬೀಜಗಳ ಪೈಕಿ ಪಿಸ್ತಾವು ಲುಟೀನ್ ಮತ್ತು ವೈ ಟೊಕೊಫೆರಾಲ್ ಅಂಶವನ್ನು ಹೆಚ್ಚು ಹೊಂದಿದ್ದು, ಇವೆರಡೂ ಕಣ್ಣಿನ ಆರೋಗ್ಯಕ್ಕೆ ಬಹಳ ಮುಖ್ಯವಾದ ಉತ್ಕರ್ಷಣ ನಿರೋಧಕಗಳಾಗಿವೆ. ಪಿಸ್ತಾಗಳಲ್ಲಿ ಫೈಬರ್ ಅಧಿಕವಾಗಿದೆ, ಇದು ನಿಮ್ಮ ಕರುಳಿನ ಬ್ಯಾಕ್ಟೀರಿಯಾಕ್ಕೆ ಒಳ್ಳೆಯದು. ಪಿಸ್ತಾ ತಿನ್ನುವುದರಿಂದ ಬ್ಯುಟೈರೇಟ್‌ನಂತಹ ಪ್ರಯೋಜನಕಾರಿ ಕಿರು-ಸರಪಳಿ ಕೊಬ್ಬಿನಾಮ್ಲಗಳನ್ನು ಉತ್ಪಾದಿಸುವ ಬ್ಯಾಕ್ಟೀರಿಯಾಗಳ […]

Advertisement

Wordpress Social Share Plugin powered by Ultimatelysocial