ನಾನಿರಬೇಕಾ? ಇನ್ನೊಬ್ಬರಿರಬೇಕಾ ಸಿಎಂ ನಿರ್ಧರಿಸುತ್ತಾರೆ : ಸಚಿವ ಡಾ.ಸುಧಾಕರ್

ಬೆಂಗಳೂರು : ಸಚಿವ ಸಂಪುಟದ ಕುರಿತು ಮುಖ್ಯಮಂತ್ರಿಗಳದ್ದು ಪರಮೋಚ್ಛ ಅಧಿಕಾರ, ನಾನು ಕೇವಲ ತಂಡದ ಸದಸ್ಯ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಸೋಮವಾರ ಪ್ರತಿಕ್ರಿಯೆ ನೀಡಿದ್ದಾರೆ.

ಸದಾಶಿವ ನಗರದ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವರು , ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿಗಳು ನಿರ್ಧರಿಸುತ್ತಾರೆ.

ಯಾರನ್ನು ಸೇರಿಸಿಕೊಳ್ಳಬೇಕು, ಯಾರನ್ನು ಕೈಬಿಡಬೇಕು ಎನ್ನುವುದು ಅವರ ಪರಮೋಚ್ಛ ಅಧಿಕಾರ ಎಂದರು.

ಅಭಿವೃದ್ಧಿಯ ಶಕೆ ಇನ್ನಷ್ಟು ಗಟ್ಟಿ

ಸಂಕ್ರಾಂತಿ ಬಳಿಕ ಬೊಮ್ಮಾಯಿ ಅವರ ನಾಯಕತ್ವದಲ್ಲಿ ರಾಜ್ಯದಲ್ಲಿ ಅಪಾರ ಅಭಿವೃದ್ಧಿ ಆಗುತ್ತದೆ, ರೈತರಿಗೆ, ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಆದ್ಯತೆ ನೀಡುತ್ತೇವೆ. ಹೊಸ ಅಭಿವೃದ್ಧಿಯ ಶಕೆ ಪ್ರಾರಂಭವಾಗಿದ್ದು, ಅದು ಇನ್ನಷ್ಟು ಗಟ್ಟಿಯಾಗುತ್ತದೆ ಎಂದರು.

ವಿರೋಧ ಪಕ್ಷಗಳು ನಮ್ಮ ಅಭಿವೃದ್ಧಿ, ಆಡಳಿತದ ಪರಿ ನೋಡಿ ಹತಾಶರಾಗುತ್ತಾರೆ ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕೆ.ಎಲ್.ರಾಹುಲ್ ಸೆಂಚೂರಿ. ಹಲವು ದಾಖಲೆಗಳು ಚಿಂದಿ

Mon Dec 27 , 2021
ಕೆ.ಎಲ್.ರಾಹುಲ್ ಸೆಂಚೂರಿ. ಹಲವು ದಾಖಲೆಗಳು ಚಿಂದಿ kl-rahul saaksha tv ಟೀಂ ಇಂಡಿಯಾ ಓಪನರ್ ಕೆಎಲ್ ರಾಹುಲ್ ದಕ್ಷಿಣ ಆಫ್ರಿಕಾ ನೆಲದಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಪ್ರೋಟೀಸ್ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ರಾಹುಲ್ ಸೆಂಚೂರಿ ದಾಖಲಿಸಿದ್ದಾರೆ. 219 ಎಸೆತಗಳಲ್ಲಿ ಶತಕ ಸಿಡಿಸಿದ ರಾಹುಲ್ ಇನ್ನಿಂಗ್ಸ್ ನಲ್ಲಿ 14 ಬೌಂಡರಿ ಹಾಗೂ ಒಂದು ಸಿಕ್ಸರ್ ಇದೆ. ಬಾಕ್ಸಿಂಗ್ ದಿನದಂದು ಶತಕ ಸಿಡಿಸಿದ ಕೆಎಲ್ ರಾಹುಲ್ ಗೆ ಇದು ಏಳನೇ […]

Advertisement

Wordpress Social Share Plugin powered by Ultimatelysocial