ಭಾರತದಲ್ಲಿ ಹಾಲಿವುಡ್ ಸಿನಿಮಾಗಳ ಪೈಕಿ ಗಳಿಕೆಯಲ್ಲಿ ಟಾಪ್ 3 ಸ್ಥಾನಕ್ಕೇರಿದ ‘ಸ್ಪೈಡರ್ ಮ್ಯಾನ್’;

ನವದೆಹಲಿ: ಸ್ಪೈಡರ್ ಮ್ಯಾನ್ ಸರಣಿಯ ಹೊಚ್ಚ ಹೊಸ ಅವತರಣಿಕೆ ಸ್ಪೈಡರ್ ಮ್ಯಾನ್- ನೋ ವೇ ಹೋಮ್’ಸಿನಿಮಾ 18 ದಿನಗಳ ಹಿಂದೆಯಷ್ಟೆ ಭಾರತದಲ್ಲಿ ತೆರೆಕಂಡಿತ್ತು. ಅಷ್ಟರ ವೇಳೆಗಾಗಲೇ ಸಿನಿಮಾ 259 ಕೋಟಿ ರೂ. ಗಳಿಸಿ ದಾಖಲೆ ಸೃಷ್ಟಿಸಿ ಮುನ್ನುಗ್ಗುತ್ತಿದೆ.

ಇದುವರೆಗೂ ಭಾರತದಲ್ಲಿ ಬಿಡುಗಡೆಯಾದ ಸಿನಿಮಾಗಳಲ್ಲಿ ಗಳಿಕೆ ಲೆಕ್ಕದಲ್ಲಿ ಮೊದಲ ಎರಡು ಸ್ಥಾನಗಳಲ್ಲಿ ಅವೆಂಜರ್ ಸರಣಿಯ ಇನ್ಫಿನಿಟಿ ವಾರ್ ಮತ್ತು ಎಂಡ್ ಗೇಮ್ ಇದೆ. ಇದೀಗ ಮೂರನೇ ಸ್ಥಾನದಲ್ಲಿರುವ ಸ್ಪೈಡರ್ ಮ್ಯಾನ್ ಸಿನಿಮಾ ಇನ್ಫಿನಿಟಿ ವಾರ್ ಸಿನಿಮಾದ ಗಳಿಕೆಗೆ ಹತ್ತಿರವಿದೆ. ಈ ಮೂರೂ ಸಿನಿಮಾಗಳು ಮಾರ್ವೆಲ್ ಸ್ಟುಡಿಯೋಸ್ ನಿರ್ಮಿತ ಎನ್ನುವುದು ವಿಶೇಷ.

ಸ್ಪೈಡರ್ ಮ್ಯಾನ್ ಸಿನಿಮಾ ಚೀನಾದಲ್ಲಿ ಇನ್ನೂ ಬಿಡುಗಡೆ ಕಾಣಬೇಕಿದೆ. ಅಲ್ಲಿ ಬಿಡುಗಡೆಯಾದ ನಂತರ ಗಳಿಕೆಯಲ್ಲಿ ಈ ಸಿನಿಮಾ ವಿಶ್ವದಾಖಲೆ ಸೃಷ್ಟಿಸಲಿದೆ ಎಂದು ಮಾರುಕಟ್ಟೆ ಪರಿಣತರು ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಾಲ್ಕು ವರ್ಷಗಳ ಬಳಿಕ ಸ್ಯಾಂಡಲ್ ವುಡ್ ಗೆ ನಿರೂಪಕಿ ಅನುಶ್ರೀ ಕಮ್ ಬ್ಯಾಕ್!

Fri Jan 7 , 2022
ನಾಲ್ಕು ವರ್ಷಗಳ ಬಳಿಕ ನಿರೂಪಕಿ ಅನುಶ್ರೀ ಸ್ಯಾಂಡಲ್‌ವುಡ್‌ಗೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಪ್ರಭಾಕರನ್ ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಸಿನಿಮಾದಲ್ಲಿ ಅನುಶ್ರೀ ನಟಿಸುತ್ತಿದ್ದಾರೆ. ಈ ಹಿಂದೆ ತೆರೆಕಂಡಿದ್ದ ‘ಮಮ್ಮಿ ಸೇವ್ ಮೀ’ ಹಾಗೂ ‘ದೇವಕಿ’ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದ ಲೋಹಿತ್ ಬಳಿ ಪ್ರಭಾಕರನ್ ಅಸೊಸಿಯೇಟ್ ಆಗಿದ್ದರು. ಇದೀಗ ಹೊಸ ಚಿತ್ರದ ಮೂಲಕ ಪ್ರಭಾಕರನ್ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಡೈರೆಕ್ಟರ್ ಪ್ರಭಾಕರನ್ ಹಾಗೂ ಅನುಶ್ರೀ ಕಾಂಬಿನೇಶನ್‌ನಲ್ಲಿ ಮೂಡಿಬರಲಿರುವ ಚಿತ್ರಕ್ಕೆ ಇನ್ನೂ ಶೀರ್ಷಿಕೆ […]

Advertisement

Wordpress Social Share Plugin powered by Ultimatelysocial