ದುಷ್ಕರ್ಮಿಗಳಿಂದ ತನ್ನ ಕಾರಿನ ಮೇಲೆ ಗುಂಡಿನ ದಾಳಿ: ಅಸದುದ್ದೀನ್ ಉವೈಸಿ ಆರೋಪ

 

ಹೊಸದಿಲ್ಲಿ: ಉತ್ತರ ಪ್ರದೇಶದ ಮೀರತ್‌ನಲ್ಲಿ ಚುನಾವಣಾ ಪ್ರಚಾರ ಮುಗಿಸಿ ದೆಹಲಿಗೆ ವಾಪಸಾಗುತ್ತಿದ್ದ ತಮ್ಮ ಕಾರಿನ ಮೇಲೆ ಗುಂಡು ಹಾರಿಸಲಾಗಿದೆ ಎಂದು ಎಐಎಂಐಎಂ(AIMIM) ನಾಯಕ ಅಸದುದ್ದೀನ್ ಉವೈಸಿ ಆರೋಪಿಸಿದ್ದಾರೆ. ಅದೃಷ್ಟವಶಾತ್‌, ಯಾರಿಗೂ ಗಾಯವಾಗಿಲ್ಲ ಎಂದು ಅವರು ಹೇಳಿದ್ದಾರೆ.ಪ್ರಾಥಮಿಕ ವರದಿ ಪ್ರಕಾರ ಓರ್ವ ಶೂಟರ್‌ನನ್ನು ವಶಕ್ಕೆ ಪಡೆಯಲಾಗಿದೆ ಎಂದು ndtv ವರದಿ ಮಾಡಿದೆ.ನಾವೆಲ್ಲರೂ ಸುರಕ್ಷಿತವಾಗಿದ್ದೇವೆ ಎಂದು ಉವೈಸಿ ಟ್ವೀಟ್‌ ನಲ್ಲಿ ಹೇಳಿದ್ದಾರೆ. ದೆಹಲಿ ಸಮೀಪದ, ಪಶ್ಚಿಮ ಉತ್ತರ ಪ್ರದೇಶದ ಹಾಪುರ್‌ನಲ್ಲಿರುವ ಟೋಲ್ ಪ್ಲಾಜಾದಲ್ಲಿ ಈ ಘಟನೆ ನಡೆದಿದೆ.ಶೂಟರ್‌ಗಳು ಶಸ್ತ್ರಾಸ್ತ್ರಗಳನ್ನು ಬಿಟ್ಟು ಪರಾರಿಯಾಗಿದ್ದಾರೆ ಎಂದು ಉವೈಸಿ ತಿಳಿಸಿದ್ದಾರೆ.”ಮೀರತ್‌ನ ಕಿಥೌರ್‌ನಲ್ಲಿ ಚುನಾವಣಾ ಕಾರ್ಯಕ್ರಮದ ನಂತರ ನಾನು ದೆಹಲಿಗೆ ಹೊರಟಿದ್ದೆ. ಛಜರ್ಸಿ ಟೋಲ್ ಪ್ಲಾಜಾ ಬಳಿ ಇಬ್ಬರು ನನ್ನ ವಾಹನದ ಮೇಲೆ ಮೂರರಿಂದ ನಾಲ್ಕು ಸುತ್ತಿನ ಬುಲೆಟ್‌ಗಳನ್ನು ಹಾರಿಸಿದರು; ದಾಳಿ ಮಾಡಿದವರಲ್ಲಿ ಮೂರರಿಂದ ನಾಲ್ಕು ಮಂದಿಯಿದ್ದರು. ನನ್ನ ವಾಹನದ ಟೈರ್ ಪಂಕ್ಚರ್ ಆಗಿದೆ, ನಾನು ಇನ್ನೊಂದು ವಾಹನದಲ್ಲಿ ಸ್ಥಳದಿಂದ ಹೊರಟೆ” ಎಂದು ಉವೈಸಿ ಹೇಳಿದ್ದಾರೆ.ಫೆಬ್ರವರಿ 10 ರಿಂದ ಪ್ರಾರಂಭವಾಗುವ ಉತ್ತರ ಪ್ರದೇಶ ಚುನಾವಣಾ ಪ್ರಚಾರದ ಭಾಗವಾಗಿ ಎಐಎಂಐಎಂ ನಾಯಕ ಮೀರತ್‌ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದರು. ಅಲ್ಲಿಂದ ಮರಳುವಾಗ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಿಕ್ಕಳಿಕೆ ಬಂದಾಗಲೆಲ್ಲಾ, ಯಾರಾದರೂ ನಿಮ್ಮನ್ನು ನೆನೆಯುತ್ತಿರಬಹುದು ಎಂದು ಜನರು ಹೇಳಲು ಪ್ರಾರಂಭಿಸುತ್ತಾರೆ!

Sat Feb 5 , 2022
ಯಾರಿಗಾದರೂ ಬಿಕ್ಕಳಿಕೆ ಬಂದಾಗಲೆಲ್ಲಾ, ಯಾರಾದರೂ ನಿಮ್ಮನ್ನು ನೆನೆಯುತ್ತಿರಬಹುದು ಎಂದು ಜನರು ಹೇಳಲು ಪ್ರಾರಂಭಿಸುತ್ತಾರೆ, ವಿಜ್ಞಾನಿಗಳು ತಮ್ಮ ಅಭಿಪ್ರಾಯಗಳನ್ನು ಇದಕ್ಕಿಂತ ಭಿನ್ನವಾಗಿ ತೆಗೆದುಕೊಳ್ಳುತ್ತಾರೆ. ಮತ್ತು ಅದರ ಹಿಂದೆ ಇನ್ನೂ ಅನೇಕ ಕಾರಣಗಳನ್ನು ನೀಡುತ್ತಾರೆ, ಆದ್ದರಿಂದ ಬಿಕ್ಕಳಿಕೆಗೆ ಕಾರಣ ಮತ್ತು ಅದನ್ನು ತಡೆಗಟ್ಟುವ ಮಾರ್ಗ . ಗಂಟಲಿನ ಕೆನಾಲ್ ನಲ್ಲಿ ಬಿಕ್ಕಳಿಕೆ ಗಳು ಉಂಟಾಗುತ್ತವೆ. ಇದು ನಿಮ್ಮ ಸ್ನಾಯುಗಳ ಅನೈಚ್ಛಿಕ ಕ್ರಿಯೆ. ಡಯಾಫ್ರಯಾಮ್ ಸ್ನಾಯುಗಳು ಇದ್ದಕ್ಕಿದ್ದಂತೆ ಕುಗ್ಗಿದಾಗ ಅದನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಆಗ […]

Advertisement

Wordpress Social Share Plugin powered by Ultimatelysocial