ಇ-ಶ್ರಮ್‌ ಯೋಜನೆ : ಯಾರು ಅರ್ಹರು? ನೋಂದಣಿ ಹೇಗೆ? ಇಲ್ಲಿದೆ ಮಾಹಿತಿ

 

ಉಡುಪಿ : ಕೇಂದ್ರ ಸರಕಾರದ ಇ-ಶ್ರಮ್‌ ಪೋರ್ಟಲ್‌ನಲ್ಲಿ ಜಿಲ್ಲೆಯ 1,05,439 ಅಸಂಘಟಿತ ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದಾರೆ. ರಾಜ್ಯ ಸೇವಾ ಕೇಂದ್ರದಲ್ಲಿ 16, ಸಾಮಾನ್ಯ ಸೇವಾ ಕೇಂದ್ರದಲ್ಲಿ ಸಿಎಸ್‌ಸಿ 62,913, ಸ್ವಯಂ ನೋಂದಣಿ 42,510 ಆಗಿದೆ.

ಅಸಂಘಟಿತ ವಲಯದ ಕಾರ್ಮಿಕರ ಎಲ್ಲ ಮಾಹಿತಿ, ಡೇಟಾವನ್ನು ಟ್ರ್ಯಾಕ್‌ ಮಾಡಲು ಮತ್ತು ಸಂಗ್ರಹಿಸಲು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಈ ಪೋರ್ಟಲ್‌ ಆರಂಭಸಿದೆ.

ಅಸಂಘಟಿತ ವಲಯದ ಕಟ್ಟಡ ಕಾರ್ಮಿಕರು, ವಲಸೆ ಕಾರ್ಮಿಕರು, ಬೀದಿ ವ್ಯಾಪಾರಿಗಳು, ಮನೆ ಕೆಲಸ ಗಾರರು, ಕೃಷಿ ಕಾರ್ಮಿಕರು ಸೇರಿ ವಿವಿಧ ವಲಯ ದಲ್ಲಿರುವ ಅಸಂಘಟಿತ ಕಾರ್ಮಿಕರು ಇ-ಶ್ರಮ್‌ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ.

ನೋಂದಣಿಯಾದ ಅನಂತರ ಸರಕಾರದಿಂದ ಇ-ಶ್ರಮ್‌ ಕಾರ್ಡ್‌ ನೀಡಲಾಗುತ್ತದೆ. ಕಾರ್ಮಿಕನು ಸರಕಾರದ ಯೋಜನೆಗಳ ಪ್ರಯೋಜನವನ್ನು ನೇರವಾಗಿ ಪಡೆಯಲು ಸಾಧ್ಯವಾಗುತ್ತದೆ.

ಜಿಲ್ಲೆಯ ವಲಸೆ ಕಾರ್ಮಿಕರ ಸಂಖ್ಯೆ ವಿರಳ
ರಾಜ್ಯದ ಪಟ್ಟಿಯನ್ನು ಗಮನಿಸಿದಾಗ ಇ-ಶ್ರಮ್‌ ನೋಂದಣಿಯಲ್ಲಿ ಉಡುಪಿ ಜಿಲ್ಲೆ 24ನೇ ಸ್ಥಾನದಲ್ಲಿದೆ. ಇದಕ್ಕೆ ಕಾರಣವೂ ಇದೆ. ಬೆಳಗಾವಿ, ಬಳ್ಳಾರಿ ಸಹಿತ ಅನ್ಯ ಜಿಲ್ಲೆಯ ಮಂದಿ ಉಡುಪಿಯಲ್ಲಿ ನೋಂದಣಿ ಮಾಡಿಸಿದರೂ ಜಿಲ್ಲೆ ನಮೂದಿಸುವಾಗ ಅವರ ಜಿಲ್ಲೆಯ ಹೆಸರು ನಮೂದಿಸುವಾಗ ಜಿಲ್ಲೆಯಲ್ಲಿ ಅದೆಷ್ಟು ನೋಂದಣಿಯಾದರೂ ಅದು ಆಯಾ ಜಿಲ್ಲೆಗಳಿಗೆ ಸಲ್ಲುತ್ತದೆ. ನೋಂದಣಿ ಪ್ರಕ್ರಿಯೆಯಲ್ಲಿ ಬೆಳಗಾವಿ ಪ್ರಥಮ ಸ್ಥಾನದಲ್ಲಿದ್ದರೆ ಬಳ್ಳಾರಿ ದ್ವಿತೀಯ ಸ್ಥಾನದಲ್ಲಿದೆ. ಕೊಡಗು ಕೊನೆಯ ಸ್ಥಾನದಲ್ಲಿದೆ.

ಮಾನದಂಡ ಹಾಗೂ ದಾಖಲೆ
ಇ-ಶ್ರಮ್‌ ಕಾರ್ಡ್‌ ನೋಂದಣಿ ಮಾಡಿಸಿ ಕೊಳ್ಳುವವರ ವಯೋಮಿತಿ 16-59 ವರ್ಷಗಳ ನಡುವೆ ಇರಬೇಕು. ಇಪಿಎಫ್‌ಒ ಅಥವಾ ಇಎಸ್‌ಐಸಿ ಸದಸ್ಯರಾಗಿರಬಾರದು. ಆದಾಯ ತೆರಿಗೆ ಪಾವತಿಸುವವರಾಗಿರಬಾರದು. ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರಬೇಕು. ಇಂತಹ ವರು ಆಧಾರ್‌ ಕಾರ್ಡ್‌, ಬ್ಯಾಂಕ್‌ ಪಾಸ್‌ ಪುಸ್ತಕ, ವಿದ್ಯುತ್‌ ಬಿಲ./ಪಡಿತರ ಚೀಟಿ, ಮೊಬೈಲ್‌ ಸಂಖ್ಯೆಯನ್ನು ನೀಡಬೇಕು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯಕ್ಕೂ ಒಳ್ಳೆಯ ಸುದ್ದಿ,ಬಿಜೆಪಿಗೆ ಅಮೃತ ಕಾಲ ಶುರು: ಸಚಿವ ಡಾ.ಕೆ.ಸುಧಾಕರ್

Thu Mar 10 , 2022
ಬೆಂಗಳೂರು : ನಾಲ್ಕು ರಾಜ್ಯಗಳ ಉಳಿಸಿಕೊಂಡಿದ್ದೇವೆ.ಅಮೃತ ಕಾಲ ಶುರುವಾಗಿದೆ ಎಂದು ಆರೋಗ್ಯ ಮತ್ತು ವೈದ್ಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅಭಿಪ್ರಾಯಪಟ್ಟಿದ್ದಾರೆ.ಸುದ್ದಿಗಾರರ ಜತೆ ಮಾತನಾಡಿದ ಅವರು, ಅಮೃತ ಕಾಲ ಪುನರಾವರ್ತನೆ ಆಗಿದೆ .ಡಬಲ್ ಇಂಜಿನ್ ಸರ್ಕಾರ ಬೇಕು ಎಂದು ತೀರ್ಮಾನಿಸಿದ್ದಾರೆ .ಪಂಜಾಬ್ ನಲ್ಲಿ ನಾವು ಗೆಲುವು ನಿರೀಕ್ಷೆ ಮಾಡಿರಲಿಲ್ಲ .ಜಾತಿ ಒಲೈಕೆ ಮಾಡುವ ಕಾಂಗ್ರೆಸ್ ಗೆ ಜನರು ಪಾಠ ಕಲಿಸಿದ್ದಾರೆ ಎಂದು ಹೇಳಿದರು.ನಮ್ಮ ರಾಜ್ಯಕ್ಕೂ ಒಳ್ಳೆಯ ಸುದ್ದಿ ಇದು 2023 ಕ್ಕೆ ಮತ್ತೆ […]

Advertisement

Wordpress Social Share Plugin powered by Ultimatelysocial