ಎರಡನೇ ಬಾರಿಗೆ ಮದುವೆಯಾಗಲಿದ್ದಾರೆ ಐಎಎಸ್ ಅಧಿಕಾರಿ ಟೀನಾ ದಾಬಿ

ಜೈಪುರ: 2015ರ UPSC ಪರೀಕ್ಷೆಯಲ್ಲಿ ಟೀನಾ ದಾಬಿ ದೇಶಕ್ಕೇ ಮೊದಲ ಸ್ಥಾನ ಪಡೆದಿದ್ದ ಟೀನಾ ದಾಬಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ನಿಜವಾಗಿ ಟೀನಾ ದಾಬಿ ಮತ್ತೆ ಮದುವೆಯಾಗಲಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮೂಲಕ ತಿಳಿಸಿದ್ದಾರೆ.

 

ಹೌದು, ಟೀನಾ ದಾಬಿ ಐಎಎಸ್‌ ಅಧಿಕಾರಿ ಆಮಿರ್ ಖಾನ್ ಜೊತೆಗೆ ಪ್ರೀತಿಸಿ ಮದುವೆಯಾದ ಎರಡೇ ವರ್ಷಗಳಲ್ಲಿ ಈ ದಂಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ವಿಚ್ಚೇದನವನ್ನು ಪಡೆದುಕೊಂಡಿದ್ದರು.

ಟೀನಾ ರಾಜಸ್ಥಾನ ಕೇಡರ್‌ನ ಐಎಎಸ್ ಅಧಿಕಾರಿಯನ್ನು ಮದುವೆಯಾಗಲಿದ್ದಾರೆ. ಟೀನಾ ದಾಬಿ ಶೇರ್ ಮಾಡಿರುವ ಚಿತ್ರದಲ್ಲಿ 2013ರ ಬ್ಯಾಚ್‌ನ ಐಎಎಸ್ ಅಧಿಕಾರಿ ಪ್ರದೀಪ್ ಗವಾಂಡೆ ಅವರನ್ನು ವಿವಾಹವಾಗಲಿದ್ದಾರೆ. ಪ್ರದೀಪ್ ಜೊತೆಗಿನ ನಿಶ್ಚಿತಾರ್ಥದ ಚಿತ್ರವನ್ನು ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇಬ್ಬರೂ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಟೀನಾ ಮಾತ್ರವಲ್ಲದೆ ಪ್ರದೀಪ್ ಕೂಡ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ಈ ಸುದ್ದಿಯನ್ನು ಜನರಿಗೆ ತಿಳಿಸಿದ್ದಾರೆ. 2015ರಲ್ಲಿ ಅಗ್ರಸ್ಥಾನ ಗಳಿಸಿದೆ ಟೀನಾ ಡೋಬಿ 2016 ರಲ್ಲಿ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಅಗ್ರಸ್ಥಾನ ಗಳಿಸಿದ್ದರು ಎಂಬುದು ಗಮನಿಸಬೇಕಾದ ಸಂಗತಿ. ಪ್ರಮುಖ ವಿಷಯವೆಂದರೆ ಟೀನಾ ದಾಬಿ ಎರಡನೇ ಬಾರಿಗೆ ಮದುವೆಯಾಗಲಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾತ್ರಿ ವೇಳೆ ಓಡಾಟ; ನೂರಾರು ಮಂದಿ ವಶಕ್ಕೆ: ಠಾಣೆ ಎದುರು ಪ್ರತಿಭಟನೆ

Tue Mar 29 , 2022
ಹುಬ್ಬಳ್ಳಿ: ರಾತ್ರಿ ವೇಳೆ ರಸ್ತೆ ಬದಿಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಾರೆ ಎಂದು ಪೊಲೀಸರು ನೂರಾರು ಮಂದಿಯನ್ನು ಬಂಧಿಸಿ ಬೈಕ್ ಹಾಗೂ ಮೊಬೈಲ್’ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಎಐಎಂಐಎಂ ಕಾರ್ಯಕರ್ತರು ಮತ್ತು ಸ್ಥಳೀಯರು ಸೋಮವಾರ ರಾತ್ರಿ 2.30ರ ವೇಳೆ ಕಸಬಾ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.   ‘ನಗರ ಪ್ರದೇಶದ ಮಂದಿ ರಾತ್ರಿ ವೇಳೆ ಮನೆ ಎದುರು ಅಥವಾ ಪಕ್ಕದ ಓಣಿಗೆ ಹೋಗಿ ಪರಿಚಯಸ್ಥರ ಜೊತೆ ಸಮಯ ಕಳೆಯುವುದು ಸಾಮಾನ್ಯ. ಹಗಲಿನ ವೇಳೆ […]

Advertisement

Wordpress Social Share Plugin powered by Ultimatelysocial