ನಿಮಗೂ ಕಿವಿ ಸಂಬಂಧಿ ಈ ಸಮಸ್ಯೆಗಳು ಕಾಡುತ್ತವೆಯೇ ?

 

ಹೆಚ್ಚು ಧೂಳಿಗೆ ಓಡಾಡಿದಾಗ, ಹೆಚ್ಚು ಹೊತ್ತು ತಲೆ ಒದ್ದೆಯಾಗಿದ್ದಾಗ ಅಥವಾ ಸ್ನಾನ ಮಾಡುವಾಗ ಕಿವಿಯೊಳಗೆ ನೀರು ಹೋದರೆ ವ್ಯಾಕ್ಸ್ ತುಂಬಿಕೊಂಡು ಕಿವಿ ನೋವು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಅಲ್ಲಿ ತುರಿಕೆ ಉಂಟಾಗಿ ನಾವು ಏನೇನನ್ನೋ ಕಿವಿಯೊಳಗೆ ತುರುಕಿಸಿಕೊಂಡು ನೋವು ಹೆಚ್ಚಿಸಿಕೊಂಡು ಬವಣೆ ಪಡುತ್ತೇವೆ.ಇದರಿಂದ ಕಿವಿ ನೋವು ಹೆಚ್ಚುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ. ಅದರ ಬದಲು ಹೀಗೆ ಕಿವಿ ಸಂಬಂಧಿ ಸಮಸ್ಯೆ ಇರುವವರು ಕಡ್ಡಾಯವಾಗಿ ಕಿವಿಗೆ ಹತ್ತಿಯನ್ನು ಇಟ್ಟೇ ತಲೆ ಸ್ನಾನ ಮಾಡಿ. ಸ್ವಿಮ್ಮಿಂಗ್ ಫೂಲ್ ಗೆ ಇಳಿಯುವ ಮುನ್ನ ಕಡ್ಡಾಯವಾಗಿ ಕಿವಿ ಮುಚ್ಚಿಕೊಳ್ಳಿ.ಹೀಗಿದ್ದೂ ಕಿವಿಯಲ್ಲಿ ವ್ಯಾಕ್ಸ್ ತುಂಬಿಕೊಂಡರೆ ಹೀಗೆ ಮಾಡಿ. ಅಡುಗೆ ಸೋಡಾವನ್ನು ನೀರಿನಲ್ಲಿ ಕದಡಿಸಿ ಎರಡು ಹನಿಯನ್ನು ಕಿವಿಯೊಳಗೆ ಬಿಡಿ. ಇದರಿಂದ ಕಿವಿಯಿಂದ ವಾಸನೆ ಬರುವುದು ನಿಲ್ಲುತ್ತದೆ ಹಾಗೂ ವ್ಯಾಕ್ಸ್ ಸಮಸ್ಯೆ ದೂರವಾಗುತ್ತದೆ. ಬೆಳ್ಳುಳ್ಳಿ ಎಣ್ಣೆಯಿಂದಲೂ ಇದೇ ಪ್ರಯೋಜನವನವನ್ನು ಪಡೆಯಬಹುದು.ಕಿವಿಯ ಕೊಳಕು ತೆಗೆದು ಹಾಕಲು ಹೈಡ್ರೋಜನ್ ಪೆರಾಕ್ಸೈಡ್ ಸಾಮಾನ್ಯವಾಗಿ ಬಳಸುತ್ತಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de….

Please follow and like us:

Leave a Reply

Your email address will not be published. Required fields are marked *

Next Post

ಮಂಡ್ಯದ ಮಳವಳ್ಳಿಯಲ್ಲಿ 75ಕ್ಕೂ ಹೆಚ್ಚು ಮಂದಿ ಜೆಡಿಎಸ್ ಸೇರ್ಪಡೆ

Sat Jan 7 , 2023
ಜೆಡಿಎಸ್ ಪಕ್ಷದ ( JDS Party ) ಪಂಚರತ್ನ ರಥಯಾತ್ರೆಯ ಬಳಿಕ, ಕಾಂಗ್ರೆಸ್ ಪಕ್ಷಕ್ಕೆ ( Congress Party ) ಬಿಗ್ ಶಾಕ್ ಎನ್ನುವಂತೆ ಇಂದು ಕೈ ತೊರೆದು, 75ಕ್ಕೂ ಹೆಚ್ಚು ಮಂದಿ ಜೆಡಿಎಸ್ ಪಕ್ಷವನ್ನು ಮಂಡ್ಯದ ಮಳವಳ್ಳಿಯಲ್ಲಿ ಸೇರ್ಪಡೆಯಾಗಿದ್ದಾರೆ.ಮಂಡ್ಯದ ಮಳವಳ್ಳಿ ಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆದಿದೆ. ಇಂದು ಧನಗೂರು ಗ್ರಾಮದಲ್ಲಿ ನಡೆದಂತ ಜೆಡಿಎಸ್ ಕಾರ್ಯಕ್ರಮದಲ್ಲಿ ಶಾಸಕ ಡಾ.ಕೆ ಅನ್ನದಾನಿ ನೇತೃತ್ವದಲ್ಲಿ ಜೆಡಿಎಸ್ ಪಕ್ಷಕ್ಕೆ 75ಕ್ಕೂ ಹೆಚ್ಚು […]

Advertisement

Wordpress Social Share Plugin powered by Ultimatelysocial