ಪ್ರತಿದಿನ 4-5 ಮೊಟ್ಟೆ ತಿನ್ನುವುದು ಅಪಾಯಕಾರಿ!

ಮೊಟ್ಟೆ ಸಂಪೂರ್ಣ ಆಹಾರ, ಅದನ್ನು ಸೇವನೆ ಮಾಡುವುದರಿಂದ ದೇಹಕ್ಕೆ ಸಾಕಷ್ಟು ಪ್ರಯೋಜನಗಳಿವೆ ಅನ್ನೋದು ಎಲ್ಲರಿಗೂ ತಿಳಿದಿದೆ. ಚಳಿಗಾಲದಲ್ಲಿ ಜನರು ಮೊಟ್ಟೆಯನ್ನು ಹೆಚ್ಚಾಗಿ ಸೇವನೆ ಮಾಡುತ್ತಾರೆ. ಆದರೆ ದಿನಕ್ಕೆ ಗರಿಷ್ಠ ಎಷ್ಟು ಮೊಟ್ಟೆಗಳನ್ನು ತಿನ್ನಬಹುದು ಅನ್ನೋದನ್ನು ತಿಳಿದುಕೊಳ್ಳುವುದು ಉತ್ತಮ.ಮೊಟ್ಟೆ ತಿನ್ನುವುದರಿಂದ ನಮಗೆ ಸಾಕಷ್ಟು ಪ್ರೋಟೀನ್ ಸಿಗುತ್ತದೆ ಮತ್ತು ಅನಗತ್ಯ ಕೊಬ್ಬು ಹೆಚ್ಚಾಗುವುದಿಲ್ಲ. ಮೊಟ್ಟೆಯಲ್ಲಿ ಎರಡು ಭಾಗಗಳಿವೆ. ಬಿಳಿ ಮತ್ತು ಹಳದಿ. ಮೊಟ್ಟೆಯ ಎರಡೂ ಭಾಗಗಳು ವಿಭಿನ್ನ ಪ್ರಯೋಜನಗಳನ್ನು ಹೊಂದಿವೆ. ಆದರೆ ಯಾವ ಭಾಗವನ್ನು ಯಾವಾಗ ಬಳಸಬೇಕು ಎಂದು ತಿಳಿದಿರಬೇಕು.ಮೊಟ್ಟೆಯ ಬಿಳಿ ಭಾಗವು ಕೇವಲ ಪ್ರೋಟೀನ್ ಅನ್ನು ಹೊಂದಿರುತ್ತದೆ. ಹಾಗಾಗಿ ಜಿಮ್‌ಗೆ ಹೋಗುವವರು ಅಥವಾ ವ್ಯಾಯಾಮ ಮಾಡುವವರು ಮೊಟ್ಟೆಯ ಬಿಳಿ ಭಾಗವನ್ನು ತಿನ್ನುತ್ತಾರೆ. ಮೊಟ್ಟೆಯ ಬಿಳಿ ಭಾಗವನ್ನು ತಿನ್ನುವುದರಿಂದ 4 ರಿಂದ 5 ಗ್ರಾಂ ಪ್ರೋಟೀನ್ ಸಿಗುತ್ತದೆ. ಹಳದಿ ಭಾಗದಲ್ಲಿ 6 ಗ್ರಾಂನಷ್ಟು ಕೊಬ್ಬು ಮತ್ತು ಸುಮಾರು ಒಂದು ಗ್ರಾಂ ಪ್ರೋಟೀನ್ ಇರುತ್ತದೆ. ಹಾಗಾಗಿ ಸಂಪೂರ್ಣ ಒಂದು ಮೊಟ್ಟೆಯನ್ನು ತಿಂದರೆ 5 ರಿಂದ 6 ಗ್ರಾಂ ಪ್ರೋಟೀನ್ ಮತ್ತು 6 ಗ್ರಾಂ ಕೊಬ್ಬು ಸಿಗುತ್ತದೆ. ಒಂದು ಮೊಟ್ಟೆಯಲ್ಲಿರೋ ಹಳದಿ ಭಾಗವು 95 ಮಿಗ್ರಾಂ ಕೊಲೆಸ್ಟ್ರಾಲ್ ಅನ್ನು ಹೊಂದಿರುತ್ತದೆ. ಆರೋಗ್ಯಕರ ದೇಹಕ್ಕಾಗಿ ಪ್ರತಿದಿನ ಕೊಲೆಸ್ಟ್ರಾಲ್ ಸೇವನೆ 200 ಮಿಲಿಗ್ರಾಂಗಿಂತಲೂ ಕಡಿಮೆ ಇರಬೇಕು.ನಾವು ಪ್ರತಿದಿನ 5 ಮೊಟ್ಟೆಗಳನ್ನು ಸೇವಿಸಿದರೆ 475 ಮಿಲಿ ಗ್ರಾಂ ಕೊಲೆಸ್ಟ್ರಾಲ್ ಅನ್ನು ಪಡೆಯುತ್ತೇವೆ. ನಿಗದಿತ ಪ್ರಮಾಣಕ್ಕಿಂತ ಇದು ಎರಡು ಪಟ್ಟು ಹೆಚ್ಚಾಗಿರುತ್ತದೆ. ಪ್ರತಿದಿನ 5 ಮೊಟ್ಟೆಗಳನ್ನು ತಿನ್ನುತ್ತಿದ್ದರೆ ಕೆಲವೇ ದಿನಗಳಲ್ಲಿ ನಿಮ್ಮ ಕೊಲೆಸ್ಟ್ರಾಲ್ ಮಟ್ಟ ಬಹಳಷ್ಟು ಹೆಚ್ಚಾಗುತ್ತದೆ. ಇದರಿಂದ ಹಲವಾರು ರೀತಿಯ ಕಾಯಿಲೆಗಳು ಕೂಡ ಬರಬಹುದು. ಇದು ಮುಖ್ಯವಾಗಿ ಹೃದಯದ ಮೇಲೆ ಪರಿಣಾಮ ಬೀರುತ್ತದೆ.ಅಂದರೆ, ನೀವು ದಿನಕ್ಕೆ 5 ಮೊಟ್ಟೆಗಳನ್ನು ತಿನ್ನುತ್ತಿದ್ದರೆ, ನಿಮಗೆ ಹೃದಯ ಸಂಬಂಧಿ ಸಮಸ್ಯೆಗಳು ಬರುವ ಸಾಧ್ಯತೆ ಇರುತ್ತದೆ. ಹೃದ್ರೋಗಕ್ಕೆ ಸಹ ತುತ್ತಾಗಬಹುದು. ಹಾಗಾಗಿ ಪ್ರತಿದಿನ 4-5 ಮೊಟ್ಟೆ ತಿನ್ನುವ ಅಭ್ಯಾಸವನ್ನು ಬಿಟ್ಟುಬಿಡಿ, ಮಿತವಾಗಿ ಸೇವನೆ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

 

 

 

 

 

Please follow and like us:

Leave a Reply

Your email address will not be published. Required fields are marked *

Next Post

ಮೆಕ್ಯಾನಿಕ್ ಮಗಳನ್ನ ವರಿಸಲು ಭಾರತಕ್ಕೆ ಬಂದ ಆಸ್ಟ್ರೇಲಿಯ ವ್ಯಕ್ತಿ

Thu Dec 29 , 2022
  ಈ ಪ್ರೀತಿಯೇ ಹೀಗೆ ನೋಡಿ.. ಯಾರ ಜೊತೆ? ಯಾವಾಗ? ಎಲ್ಲಿ? ಆಗುತ್ತೆ ಅಂತ ಊಹೆ ಸಹ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಪ್ರೀತಿ ಒಮ್ಮೆ ಆದರೆ ಸಾಕು, ಆಗ ಪ್ರೀತಿಯಲ್ಲಿರುವವರು ಎಂತಹ ತ್ಯಾಗಕ್ಕೂ ಸಹ ಸಿದ್ದರಾಗಿರುತ್ತಾರೆ ಅಂತ ಹೇಳಿದರೆ ಸುಳ್ಳಲ್ಲ. ನಾವು ಈಗಾಗಲೇ ಎಷ್ಟೋ ಪ್ರೀತಿಯ ಕಥೆಗಳಲ್ಲಿ ವಿದೇಶಿ ವ್ಯಕ್ತಿ  ತನ್ನ ಪ್ರೀತಿಯನ್ನು ಹುಡುಕಿಕೊಂಡು ಭಾರತಕ್ಕೆ  ಬಂದಿದ್ದು, ಭಾರತದಲ್ಲಿರುವ ಹುಡುಗಿ ತನ್ನ ಪ್ರೀತಿಯನ್ನು ಅರಿಸಿ ಬೇರೆ ದೇಶಕ್ಕೆ ಹೋಗಿದ್ದ ಅನೇಕ ಪ್ರಸಂಗಗಳನ್ನು […]

Advertisement

Wordpress Social Share Plugin powered by Ultimatelysocial