ಮಾರುಕಟ್ಟೆ ಸ್ಥಿರವಾದರೆ ‘ಐಪಿಒ’ಗೆ: ಮೊಬಿಕ್ವಿಕ್‌|Economics speed news kannada|

ನವದೆಹಲಿ: ‘ಆರಂಭಿಕ ಸಾರ್ವಜನಿಕ ಕೊಡುಗೆಯು (ಐಪಿಒ) ಕಂಪನಿಗೆ ಒಂದು ಅವಿಸ್ಮರಣೀಯ ಅವಕಾಶ. ಹಾಗಾಗಿ, ಬಂಡವಾಳ ಮಾರುಕಟ್ಟೆ ಸ್ಥಿತಿಯು ಸ್ಥಿರವಾಗುವವರೆಗೂ ಐಪಿಒಗೆ ಬರುವುದಿಲ್ಲ’ ಎಂದು ಮೊಬಿಕ್ವಿಕ್‌ ಅಧ್ಯಕ್ಷೆ ಉಪಾಸನಾ ತಕು ತಿಳಿಸಿದ್ದಾರೆ.

2022ರ ನವೆಂಬರ್‌ವರೆಗೂ ಐಪಿಒಗೆ ಅವಕಾಶ ಇದೆ. ಸದ್ಯ, ಮಾರುಕಟ್ಟೆ ವರ್ತನೆಯು ಏರಿಳಿತಗಳಿಂದ ಕೂಡಿದೆ. ಇಂತಹ ಸಂದರ್ಭದಲ್ಲಿ ಅಪಾಯಕ್ಕೆ ಒಡ್ಡಿಕೊಳ್ಳಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. ಕಂಪನಿಯು ಐಪಿಒ ಮೂಲಕ ₹ 1,500 ಕೋಟಿ ಸಂಗ್ರಹಿಸುವ ನಿರೀಕ್ಷೆ ಇಟ್ಟುಕೊಂಡಿದೆ.

ಐಪಿಒಗೆ ಸಲ್ಲಿಸಿರುವ ಕರಡು ದಾಖಲೆ ಪತ್ರಗಳಲ್ಲಿ ಇರುವ ಮಾಹಿತಿಯ ಪ್ರಕಾರ, ಕೋವಿಡ್‌ ಸಾಂಕ್ರಾಮಿಕದಿಂದಾಗಿ ವಹಿವಾಟಿನ ಮೇಲೆ ಪರಿಣಾಮ ಉಂಟಾಗಿದೆ. ಬೈ ನೌ ಪೆ ಲೇಟರ್‌ (ಬಿಎನ್‌ಪಿಎಲ್‌) ವಹಿವಾಟಿನ ಮೌಲ್ಯವು 2020-21ರಲ್ಲಿ ₹ 299.94 ಕೋಟಿಯಷ್ಟಾಗಿದೆ. 2019-20ರಲ್ಲಿ ಇದ್ದ ₹ 485.49 ಕೋಟಿಗೆ ಹೋಲಿಸಿದರೆ ಶೇ 38.22ರಷ್ಟು ಇಳಿಕೆ ಆಗಿದೆ.

ಸದ್ಯ ವಹಿವಾಟು ಕೋವಿಡ್‌ಗೂ ಮುಂಚಿನ ಮಟ್ಟವನ್ನು ದಾಟಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಬಿಎನ್‌ಪಿಎಲ್‌ ವಹಿವಾಟು 22 ಪಟ್ಟು ಹೆಚ್ಚಾಗಿದೆ. ಪಾವತಿ ವಹಿವಾಟು ಮೂರು ಪಟ್ಟು ಬೆಳವಣಿಗೆ ಕಂಡಿದೆ ಎಂದು ಅವರು ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

XXXTentacion ನ ಎಸ್ಟೇಟ್ ಅವರ ಜನ್ಮದಿನದಂದು ನವೀಕರಣ ಹೇಳಿಕೆಯನ್ನು ಬಿಡುಗಡೆ ಮಾಡುತ್ತದೆ;

Mon Jan 24 , 2022
ದಿವಂಗತ ರಾಪರ್‌ನ ಎಸ್ಟೇಟ್ ಅಭಿಮಾನಿಗಳಿಗೆ ಹೇಳಿಕೆಯನ್ನು ಬಿಡುಗಡೆ ಮಾಡುವ ಮೂಲಕ ದಿನಾಂಕವನ್ನು ಗುರುತಿಸಿತು, ಹೊಸ ಮರಣೋತ್ತರ ಸಂಗೀತ ಮತ್ತು ಸಾಕ್ಷ್ಯಚಿತ್ರವು ದಾರಿಯಲ್ಲಿದೆ ಎಂದು ಬಹಿರಂಗಪಡಿಸಿತು. “ಜಹ್ಸೆಹ್‌ನ ಪ್ರಪಂಚದಾದ್ಯಂತದ ಬೆಂಬಲಿಗರಿಗೆ,” ಹೇಳಿಕೆಯು ಪ್ರಾರಂಭವಾಯಿತು. “ಎಕ್ಸ್‌ನ ಅಭಿಮಾನಿಗಳು ಪ್ರತಿದಿನ ತೋರಿಸುವ ಪ್ರೀತಿ ಮತ್ತು ಬೆಂಬಲದಿಂದ ನಾವು ಆಶ್ಚರ್ಯಚಕಿತರಾಗಿದ್ದೇವೆ. ಅವರ ಸಂಗೀತವು ನಿಮ್ಮೆಲ್ಲರಿಗೂ ಎಷ್ಟು ಅರ್ಥವಾಗಿದೆ ಎಂದು ನಮಗೆ ತಿಳಿದಿದೆ ಮತ್ತು ಅವರ ಪ್ರಭಾವವು ಹಿಂದೆಂದಿಗಿಂತಲೂ ಹೆಚ್ಚು ಶಕ್ತಿಯುತವಾಗಿದೆ. ಜಾಹ್ ಅವರ ಪರಂಪರೆಯನ್ನು ಗೌರವಿಸುವುದನ್ನು […]

Advertisement

Wordpress Social Share Plugin powered by Ultimatelysocial