ಎಲಿಜಬೆತ್ ಟೇಲರ್

ಇಪ್ಪತ್ತನೆಯ ಶತಮಾನದ ಮಹಾನ್ ನಟಿ, ಹಾಲಿವುಡ್ಡಿನ ದಂತ ಕಥೆ ಎಂದೇ ಖ್ಯಾತರಾಗಿದ್ದ ಲಿಜ್ ಟೇಲರ್ ಅಥವಾ ಎಲಿಜಬೆತ್ ಟೇಲರ್ ಅವರು 1932 ವರ್ಷದ ಫೆಬ್ರವರಿ 27 ರಂದು ಲಂಡನ್ನಿನಲ್ಲಿ ಜನಿಸಿದರು.
ಅವರು ನಿಧನರಾದ ಸಂದರ್ಭದಲ್ಲಿ “ಇಡೀ ಜೀವನವನ್ನು ಸಂತೋಷದಿಂದ, ಪರಿಪೂರ್ಣವಾಗಿ ಆನಂದಿಸಿದ್ದ ಟೇಲರ್, ಹಾಸ್ಯಜೀವಿಯಾಗಿ, ಪ್ರೀತಿ ನೀಡುವ ತಾಯಿಯಾಗಿ ನಮ್ಮೆಲ್ಲರನ್ನೂ ನೋಡಿಕೊಂಡಿದ್ದರು” ಎಂದು ಅವರ ಪುತ್ರ ಮೈಕೆಲ್ ವಿಲ್ಡಿಂಗ್ ಹೇಳಿದ ಮಾತುಗಳು ಎಲಿಜಬೆತ್ ಟೇಲರ್ ಅವರ ಬದುಕಿನ ಕುರಿತಾದ ಒಂದು ಸಮಗ್ರ ಸಂಗ್ರಹವಾಕ್ಯದಂತೆ ಕಾಣುತ್ತದೆ.
‘ದೇರ್ಸ್‌ ಒನ್ ಬಾರ್ನ್ ಎವ್ರಿ ಮಿನಟ್’ ಎಂಬ ಹಾಸ್ಯಚಿತ್ರದಲ್ಲಿ ನಟಿಸಿದಾಗ ಎಲಿಜಬೆತ್ ಅವರಿಗೆ ವಯಸ್ಸಿನ್ನೂ ಹತ್ತು. 1942ರಲ್ಲಿ ಆ ಚಿತ್ರ ಬಿಡುಗಡೆಯಾಯಿತು. ಅದಾದ ಎರಡು ವರ್ಷದ ನಂತರ `ನ್ಯಾಷನಲ್ ವೆಲ್ವೆಟ್’ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದಾಗ ಅವರು ಬಾಲತಾರೆ ಎನಿಸಿಕೊಂಡರು.
1960ರಲ್ಲಿ `ಬಟರ್‌ಫೀಲ್ಡ್ 8′ ಚಿತ್ರದಲ್ಲಿನ ಶ್ರೇಷ್ಠ ಅಭಿನಯಕ್ಕೆ ಎಲಿಜಬೆತ್ ಟೇಲರ್ ಅವರಿಗೆ ಆಸ್ಕರ್ ಪ್ರಶಸ್ತಿ ಸಂದಿತು. 1966ರಲ್ಲಿ `ಹೂಸ್ ಅಫ್ರೈಡ್ ಆಫ್ ವರ್ಜಿನಿಯಾ ವೂಲ್ಫ್?’ ಅಭಿನಯಕ್ಕೆ ಅವರಿಗೆ ಮತ್ತೊಂದು ಆಸ್ಕರ್‌ನ ಗರಿ ಮೂಡಿತು. 1957ರಿಂದ ಸತತ ಮೂರು ವರ್ಷ `ರೇನ್ ಟ್ರೀ ಕಂಟ್ರಿ’, ‘ಕ್ಯಾಟ್ ಆನ್ ಎ ಹಾಟ್ ಟಿನ್ ರೂಫ್’ ಹಾಗೂ `ಸಡನ್ಲಿ, ದಿ ಲಾಸ್ಟ್ ಸಮ್ಮರ್’ ಚಿತ್ರಗಳ ನಟನೆಗಾಗಿ ಅವರ ಹೆಸರು ಆಸ್ಕರ್ ಪ್ರಶಸ್ತಿಗೆ ನಾಮಕರಣಗೊಂಡಿತ್ತು.
‘ಕ್ಲಿಯೋಪಾತ್ರಾ’ ಕಳೆದ ಶತಮಾನದ ಅತ್ಯಂತ ಜನಪ್ರಿಯ ಚಿತ್ರಗಳಲ್ಲೊಂದು. ಆ ಚಿತ್ರದಲ್ಲಿನ ದೃಶ್ಯ ವೈಭವಗಳು ಮರೆಯುವಂತದ್ದಲ್ಲ.
ಹಾಲಿವುಡ್ ಚಿತ್ರದ ಅಭಿನಯಕ್ಕಾಗಿ 10 ಲಕ್ಷ ಡಾಲರ್ ಸಂಭಾವನೆ ಪಡೆದ ಮೊದಲ ನಟಿ ಎಂಬ ಹೆಗ್ಗಳಿಕೆಗೆ ಎಲಿಜಬೆತ್ ಪಾತ್ರವಾದದ್ದು ಆ ಚಿತ್ರದ ಮೂಲಕ. 1963ರಲ್ಲಿ ತೆರೆಕಂಡ ‘ಕ್ರಿಯೋಪಾತ್ರ’ ಆ ವರ್ಷ ಅತಿಹೆಚ್ಚು ಹಣ ಗಳಿಸಿದ ಚಿತ್ರವೂ ಹೌದು. ಆ ಚಿತ್ರ ನಾಲ್ಕು ಆಸ್ಕರ್‌ ಪ್ರಶಸ್ತಿಗಳನ್ನು ಗಳಿಸಿತು. ಈ ಚಿತ್ರದ ಪಾತ್ರಕ್ಕಾಗಿ 65 ಉಡುಗೆಗಳನ್ನು ಎಲಿಜಬೆತ್ ಬದಲಿಸಿದ್ದರು. ಆ ಸಂದರ್ಭದಲ್ಲಿ ಅದು ಗಿನ್ನೆಸ್ ದಾಖಲೆ.
ಎಲಿಜಬೆತ್ ಟೇಲರ್ ಅವರ ಜೀವನದ ಮತ್ತೊಂದು ಮಜಲು ಅವರ ಸಮಾಜಸೇವೆ. ಏಡ್ಸ್ ತಡೆಗಟ್ಟಲು ವಿವಿಧ ಕಾರ್ಯಕ್ರಮಗಳಿಗಾಗಿ ಅವರು 10 ಕೋಟಿ ಡಾಲರ್ ಹಣ ಸಂಗ್ರಹಿಸಿದರು. ಏಡ್ಸ್ ಕುರಿತ ಸಂಶೋಧನೆಗೆಂದೇ ಸ್ಥಾಪಿತವಾದ ಅಮೆರಿಕನ್ ಫೌಂಡೇಷನ್‌ಗೆ ಸ್ವಯಂ ಆರ್ಥಿಕ ನೆರವು ನೀಡಿದರು.
ಅಷ್ಟೇ ಅಲ್ಲ, ಎಲಿಜಬೆತ್ ತಮ್ಮದೇ ಹೆಸರಿನಲ್ಲಿ ‘ಏಡ್ಸ್ ಫೌಂಡೇಷನ್’ ಸ್ಥಾಪಿಸಿದರು. ‘ಎಲಿಜಬೆತ್ ಟೇಲರ್ ಏಡ್ಸ್ ಫೌಂಡೇಷನ್’ ಸಾಕಷ್ಟು ಸಂಶೋಧನೆಗಳನ್ನು ನಡೆಸಿತು.
ಆಭರಣಗಳ ಸಂಗ್ರಹಗಳಿಗೆ ಕೂಡಾ ಎಲಿಜಬೆತ್ ಟೇಲರ್ ಪ್ರಸಿದ್ಧರಾಗಿದ್ದರು. 33.19 ಕ್ಯಾರಟ್‌ನ ‘ಕ್ರುಪ್ ವಜ್ರ’ ಹಾಗೂ 69.42 ಕ್ಯಾರಟ್‌ನ ‘ಟೇಲರ್ ಬರ್ಟನ್ ವಜ್ರ’ ಅವರ ಸಂಗ್ರಹದಲ್ಲಿದ್ದ ಅತಿ ದುಬಾರಿ ಆಭರಣಗಳು. ‘ಪ್ಯಾಷನ್’, ವೈಟ್ ಡೈಮಂಡ್ಸ್’ ಹಾಗೂ ‘ಬ್ಲ್ಯಾಕ್ ಪರ್ಲ್ಸ್’ ಹೆಸರಿನ ಸುಗಂಧದ್ರವ್ಯಗಳನ್ನೂ ಅವರು ಮಾರುಕಟ್ಟೆಗೆ ಪರಿಚಯಿಸಿದ್ದರು.
‘ಲುಸಿಲ್ಲೆ ಬಾಲ್, ಹಿಯರ್ ಈಸ್ ಲ್ಯೂಸಿ’ ಎಂಬ ಹಾಸ್ಯ ಸರಣಿಯಲ್ಲಿ ಕ್ರುಪ್ ವಜ್ರವನ್ನು ಎಲಿಜಬೆತ್ ಬಳಸಿದ್ದರು.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಧೆ ಶ್ಯಾಮ್ ಚಿತ್ರ ವಿಮರ್ಶೆ: ಪ್ರಭಾಸ್, ಪೂಜಾ ಹೆಗ್ಡೆ ಪ್ರೇಮಕಥೆ ನೀರಸ ಆದರೆ ಅನಿರೀಕ್ಷಿತ!

Tue Mar 15 , 2022
ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಅಭಿನಯದ ರಾಧೆ ಶ್ಯಾಮ್ ಇಂದು ಅಂತಿಮವಾಗಿ ಥಿಯೇಟರ್‌ಗೆ ಬಂದಿದ್ದಾರೆ. ಪ್ಯಾನ್-ಇಂಡಿಯಾ ಚಲನಚಿತ್ರವೆಂದು ಹೇಳಲಾಗುತ್ತಿರುವ ರೋಮ್ಯಾಂಟಿಕ್ ಅವಧಿಯ ನಾಟಕವನ್ನು ಏಕಕಾಲದಲ್ಲಿ ಹಿಂದಿ ಮತ್ತು ತೆಲುಗಿನಲ್ಲಿ ಚಿತ್ರೀಕರಿಸಲಾಗಿದೆ ಮತ್ತು ಹಲವಾರು ಇತರ ಪ್ರಾದೇಶಿಕ ಭಾಷೆಗಳಲ್ಲಿ ಬಿಡುಗಡೆಯಾಗಿದೆ. ರಾಧಾ ಕೃಷ್ಣ ಕುಮಾರ್ ಅವರು ನಿರ್ದೇಶಿಸಿದ್ದಾರೆ ಮತ್ತು ಕೋಟಗಿರಿ ವೆಂಕಟೇಶ್ವರ ರಾವ್ ಅವರು ಸಂಪಾದಿಸಿದ್ದಾರೆ, ಯುರೋಪ್ನಲ್ಲಿ ನಡೆದ ಪ್ರೇಮ ಕಥೆ, ಪೂಜಾ ವೈದ್ಯರ ಪಾತ್ರದಲ್ಲಿ ಪ್ರಭಾಸ್ ಹಸ್ತಸಾಮುದ್ರಿಕನ ಪಾತ್ರವನ್ನು ತೋರಿಸುತ್ತಾರೆ. […]

Advertisement

Wordpress Social Share Plugin powered by Ultimatelysocial