ಆಯ್ದ ನೌಕರರಿಗೆ ಒಪಿಎಸ್‌ ಭಾಗ್ಯ.

 

ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಸರಕಾರವು, ಈಗ ನೂತನ ಪಿಂಚಣಿ ಯೋಜನೆ (ಎನ್‌ಪಿಎಸ್‌) ಯಲ್ಲಿ ಇರುವ ಕೆಲವು ನೌಕರರಿಗೆ ಹಳೆ ಪಿಂಚಣಿ ವ್ಯವಸ್ಥೆ(ಒಪಿಎಸ್‌)ಗೆ ಬದಲಾವಣೆ ಮಾಡಿಕೊಳ್ಳಲು ಒಂದು ಬಾರಿ ಅವಕಾಶ ನೀಡಲು ಮುಂದಾಗಿದೆ.2003ರ ಡಿ. 22ರ ಹಿಂದೆ ಹುದ್ದೆಗಳಿಗೆ ನೀಡಲಾಗಿದ್ದ ಜಾಹೀರಾತು ಅಥವಾ ಅಧಿಸೂಚನೆಯಡಿ ಆ ಹುದ್ದೆಗಳಿಗೆ ಸೇರಿದವರು ಒಪಿಎಸ್‌ಗೆ ಸೇರಬಹುದು. ಅಂದರೆ, ಡಿ.22ರಂದು ಹೊಸ ಪಿಂಚಣಿ ಯೋಜನೆ ದೇಶಾದ್ಯಂತ ಜಾರಿಗೆ ಬಂದಿತ್ತು. ಆಗ ಈ ದಿನಾಂಕದ ಹಿಂದೆ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದವರೂ ಹೊಸ ಪಿಂಚಣಿ ವ್ಯವಸ್ಥೆಯಡಿಗೆ ಬಂದಿದ್ದರು. ಈಗ ಮಾರ್ಪಡಿಸಿ, 2003ರ ಡಿ.22ರ ಮುನ್ನ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿ, ಹೊಸ ಪಿಂಚಣಿ ಯೋಜನೆ ಜಾರಿಗೆ ಬಂದ ಮೇಲೆ ಕೆಲಸಕ್ಕೆ ಸೇರಿದವರು ಈ ಅನುಕೂಲ ಪಡೆಯಬಹುದು ಎಂದು ಸಿಬಂದಿ ಸಚಿವಾಲಯ ಆದೇಶದಲ್ಲಿ ತಿಳಿಸಿದೆ.ವಿತ್ತ ಇಲಾಖೆ, ಸಿಬಂದಿ ಮತ್ತು ತರಬೇತಿ ವಿಭಾಗ, ವೆಚ್ಚ ಇಲಾಖೆ ಮತ್ತು ಕಾನೂನು ವ್ಯವಹಾರ ಇಲಾಖೆಯ ಪ್ರತಿನಿಧಿಗಳ ಜತೆಗೆ ಚರ್ಚಿಸಿದ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸಚಿವಾಲಯ ಹೇಳಿದೆ.ಇತ್ತೀಚಿನ ದಿನಗಳಲ್ಲಿ ಹಳೆ ಪಿಂಚಣಿ ವ್ಯವಸ್ಥೆ ಜಾರಿಗಾಗಿ ಆಗ್ರಹಿಸಿ ದೇಶದ ಹಲವೆಡೆ ಪ್ರತಿಭಟನೆ, ಧರಣಿಗಳು ನಡೆಯುತ್ತಲೇ ಇವೆ. ಹೊಸ ಪಿಂಚಣಿ ವ್ಯವಸ್ಥೆಗೆ ಹೋಲಿಸಿದರೆ, ಒಪಿಎಸ್‌ನಲ್ಲಿ ಅನುಕೂಲತೆಗಳು ಹೆಚ್ಚಿವೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ಬಾಹುಬಲಿ- 2' ದಾಖಲೆ ಮುರಿದ 'ಪಠಾಣ್' ಓಟಿಟಿ ರಿಲೀಸ್ ಡೇಟ್ ಫಿಕ್ಸ್.

Sun Mar 5 , 2023
  ಜಗತ್ತಿನಾದ್ಯಂತ 1000 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿರುವ ‘ಪಠಾಣ್’ ಸಿನಿಮಾ ಶೀಘ್ರದಲ್ಲೇ ಓಟಿಟಿಗೆ ಬರ್ತಿದೆ. ಶಾರುಕ್ ಖಾನ್ ನಟನೆಯ ಆಕ್ಷನ್ ಎಂಟರ್‌ಟೈನರ್ ಸಿನಿಮಾ ವರ್ಷದ ದೊಡ್ಡ ಬ್ಲಾಕ್‌ಬಸ್ಟರ್ ಸಿನಿಮಾ ಆಗಿ ಹೊರಹೊಮ್ಮಿದೆ.ಹಿಂದಿಯಲ್ಲಿ ‘ಬಾಹುಬಲಿ’- 2 ದಾಖಲೆಯನ್ನು ಮುರಿದು ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ‘ಪಠಾಣ್’ ಎನಿಸಿಕೊಂಡಿದೆ.ಸಿದ್ದಾರ್ಥ್ ಆನಂದ್ ನಿರ್ದೇಶನದ ‘ಪಠಾಣ್’ ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿ ಮಿಂಚಿದ್ದಾರೆ. ಜಾನ್ ಅಬ್ರಹಾಂ ವಿಲನ್ ಆಗಿ ಅಬ್ಬಿಸಿರಿದ್ದು ಯಶ್ […]

Advertisement

Wordpress Social Share Plugin powered by Ultimatelysocial