ಇಂಗ್ಲೆಂಡ್ ರಾಜಮನೆತನದ ಎಡವಟ್ಟು

ಇಂಗ್ಲೆಂಡಿನ ರಾಜ ಮನೆತನಕ್ಕೆ ಬಹುದೊಡ್ಡ ಇತಿಹಾಸವಿದೆ.ಇಡೀ ವಿಶ್ವಕ್ಕೆ ಆದುನಿಕತೆಯ ಪಾಠ ಮಾಡಿದ ವಂಶ ಎನ್ನುವ ಹೆಗ್ಗಳಿಕೆ ಕೂಡ ಇಂಗ್ಲೆಂಡಿನ ರಾಜ ಮನೆತನಕ್ಕಿದೆ.

ಇಂಗ್ಲೆಂಡ್ ರಾಜ ಮನೆತನ ಇಂದಿಗೂ ಕಠಿಣ ನಿಯಮಗಳು ಹಾಗೂ ಅನೇಕ ಕಟ್ಟುಪಾಡುಗಳನ್ನ ಅನುಸರಿಸುತ್ತಾ ಬಂದಿದೆ. ಅದ್ರಲ್ಲೂ ರಾಜಮನೆತನಕ್ಕೆ ಸೊಸೆಯಾಗಿ ಬರುವವರು ಹೀಗೆ ಇರಬೇಕು.ಈ ರೀತಿಯಾಗಿಯೇ ನಡೆದುಕೊಳ್ಳಬೇಕು ಎನ್ನುವ ನಿಯಮವಿದೆ. ಮೊದಲಿನಿಂದಾನೂ ಮನೆತನದ ಎಲ್ಲರೂ ಕೂಡ ಈ ನಿಯಮಗಳನ್ನ ಪಾಲಿಸುತ್ತಾ ಬಂದಿದ್ದರು ಆದರೆ ಪ್ರಿನ್ಸ್ ಚಾರ್ಲ್ ಮತ್ತು ರಾಜಕುಮಾರಿ ಡಯಾನಾ ಅವರ ಕಿರಿಯ ಪುತ್ರ ಪ್ರಿನ್ಸ್ ಹ್ಯಾರಿ ಇದನ್ನ ಮುರಿದಿದ್ದಾರೆ.  ಮೇಘನಾ ಮಾರ್ಕಲ್ ಅವರನ್ನ ಮದುವೆಯಾಗುವ ಮೂಲಕ ಎಲ್ಲಕ್ಕಿಂತ ನಮಗೆ ಪ್ರೀತಿಯೇ ಮುಖ್ಯ ಎಂದು ಸಾರಿ, ಮನೆತನದ ಹಲವು ಕಟ್ಟುಪಾಡುಗಳನ್ನ ಮುರಿದಿದ್ದರು.

ಈಗ ರಾಜಮನೆತನದ ಕೆಲವೊಂದಿಷ್ಟು ಕಟ್ಟುಪಡುಗಳು ಜೊತೆಗೆ ಅವರು ಎದುರಿಸಿದ ಕೆಲವೊಂದಿಷ್ಟು ಕಷ್ಟಗಳ ಬಗ್ಗೆ ಅವರು ಬಾಯ್ಬಿಟ್ಟಿದ್ದಾರೆ. ಚಾರ್ಲ್ಸ್ ಹಾಗೂ ಮೆಗಾನ್ ಮಾರ್ಕೆಲ್

ದಂಪತಿಗಳು sಸಂದರ್ಶನವೊಂದರಲ್ಲಿ ಮಾತನಾಡುತ್ತಾ ರಜಮನೆತನದ ಕೆಲವೊಂದಿಷ್ಟು ಕಹಿ ರಹಸ್ಯಗಳನ್ನ ತಿಳಿಸಿದ್ದಾರೆ

ನಾನು ಮತ್ತು ಪತ್ನಿ ಮೆಗಾನ್ ರಾಜಮನೆತನದಲ್ಲಿಯೇ ಉಳಿದುಕೊಳ್ಳಲು ಬಹಳ ಪ್ರಯತ್ನ ಮಾಡಿದೆವು ಆದರೆ ಸಾಧ್ಯವಾಗಲಿಲ್ಲ. ನನ್ನ ಸಹೋದರ ಹಾಗೂ ನನ್ನ ತಂದೆ ಆ ಅರಮೆಯಲ್ಲಿ ‘ಸಿಕ್ಕಿಹಾಕಿಕೊಂಡಿದ್ದಾರೆ’. ಹೊರಗೆ ಬರಬೇಕೆಂದುಕೊಂಡರೂ ಅವರು ಬರಲಾರರು’ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ‘ನಾವು ಅಲ್ಲಿಂದ ‘ಪಾರಾಗಿ’ ಬಂದಿದ್ದೇವೆ, ಈಗ ಚೆನ್ನಾಗಿ ಬದುಕುತ್ತಿದ್ದೇವೆ’ ಎಂದು ಹೇಳಿದರು

 

ಇನ್ನು ಹ್ಯಾರಿ ಪ್ತನಿ ಮೆಗಾನ್ ಮಾತನಾಡಿ ಕುಟುಂಬದಲ್ಲಿ ಅವರಿಗಾದ ನೋವನ್ನ ಹಂಚಿಕೊಂಡಿದ್ದು ಹೀಗೆ:

ನಾನು ಮೊದಲ ಬಾರಿಗೆ ಗರ್ಭಿಣಿ ಆಗಿದ್ದಾಗ ನನ್ನ ಮಗನಿಗೆ ರಾಜಮನೆತನದ ಗುರುತು, ಹೆಸರು ನೀಡುವುದಿಲ್ಲ ಎಂದು ನನ್ನ ಪತಿಯ ಬಳಿ ಚರ್ಚೆ ಮಾಡಲಾಗಿತ್ತು. ಅಷ್ಟೇ ಅಲ್ಲದೆ, ನನ್ನ ಮಗು ಬಿಳಿಯನಾಗಿ ಹುಟ್ಟುವುದಿಲ್ಲ ಎಂಬುದನ್ನೂ ಸಹ ಚರ್ಚಿಸಲಾಗಿತ್ತು’ಎಂದು ಹೇಳಿದರು. . ಇದರಿಂದ ಇಡೀ ಯುರೋಪ್‍ಗೆ ಸಂದೇಶ ನೀಡುವ ರಾಜ ಮನೆಂತನದಲ್ಲಿ ಬಿಳಿಯವರಲ್ಲದ ಬಗ್ಗೆ ಇಷ್ಟೊಂದು ತಾತ್ಸಾರ ಇದೆಯಾ ಎನ್ನುವ ವಿಷಯ ಇದೀಗ ಬೆಲಕಿಗೆ ಬಂದಿದೆ

ಜೊತೆಗೆ..,ನಾನು ಮಾನಸಿಕ ಒತ್ತಡದಿಂದ ನರಳುತ್ತಿದ್ದೆ. ಮಾಧ್ಯಮಗಳ ಸತತ ಋಣಾತ್ಮಕ ವರದಿಗಳು, ಸುಳ್ಳು ಸುದ್ದಿಗಳು ಮನಸ್ಸನ್ನು ಹಾಳು ಮಾಡಿದ್ದವು. ನಾನು ಆತ್ಮಹತ್ಯೆಗೆ ನಿರ್ಧರಿಸಿದ್ದೆ. ನನಗೆ ಮಾನಸಿಕ ಚಿಕಿತ್ಸೆ ಅಗತ್ಯವಿದೆ ಎಂಬುದು ನನಗೆ ಗೊತ್ತಾಯಿತು. ಈ ವಿಷಯವನ್ನು ಮನೆತನದ ಹಿರಿಯರಿಗೆ ಹೇಳಿದೆ. ಆದರೆ ಮಾನಸಿಕ ಸಮಸ್ಯೆ ಬಗ್ಗೆ ಹೊರಗೆ ಗೊತ್ತಾದರೆ ಮನೆತನದ ಗೌರವಕ್ಕೆ ಬರುತ್ತೆ ಎನ್ನುವ ಕಾರಣಕ್ಕೆ

ನನಗೆ ಚಿಕಿತ್ಸೆಯನ್ನ ಕೂಡ ನೀಡಲಿಲ್ಲ ಎಂದು ಹೇಳಿದರು

 

ಹ್ಯಾರಿ ಹಾಗೂ ಮೆಗಾನ್ ದಂಪತಿಗಳು ನೀಡಿರುವ ಸಂದರ್ಶನದ ಮೂಲಕ ದೊಡ್ಡ ರಾಜಮನೆತನದಲ್ಲಿರುವ ಸಣ್ಣತನಗಳು ಜಗಜ್ಜಾಹಿರಾಗಿದೆ. ರಾಜಮನೆತನದ ನಂಟು ಕಳೆದುಕೊಂಡಿರುವ ದಂಪತಿಗಳು ಐಶಾರಾಮಿ ಕುಟುಂಬದಲ್ಲಿರುವ ಉಸಿರುಗಟ್ಟಿಸುವ ವಾತಾವರಣದ ನಿಜ ಸಂಗತಿಯನ್ನ ಬಯಲು ಮಾಡಿದ್ದಾರೆ

 

 

 

 

 

 

Please follow and like us:

Leave a Reply

Your email address will not be published. Required fields are marked *

Next Post

ಟಿಆರ್‌ಪಿ ತಿರುಚಿದ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ

Thu Mar 18 , 2021
ವದೆಹಲಿ, ಮಾರ್ಚ್ 18: ಟಿಆರ್‌ಪಿ ತಿರುಚಿದ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಕುರಿತು ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇ.ಡಿ), ಮಹಾರಾಷ್ಟ್ರ ಮೂಲದ ಕೆಲವು ಟಿವಿ ವಾಹಿನಿಗಳ ಸುಮಾರು 32 ಕೋಟಿ ಮೌಲ್ಯದ ಸಂಪತ್ತನ್ನು ಮುಟ್ಟುಗೋಲು ಹಾಕಿಕೊಂಡಿದೆ. ಫಕ್ತ್ ಮರಾಠಿ, ಬಾಕ್ಸ್ ಸಿನಿಮಾ ಮತ್ತು ಮಹಾ ಮೂವಿ ಚಾನೆಲ್‌ಗಳಂತಹ ಕೆಲವು ವಾಹಿನಿಗಳಿಗೆ ಸೇರಿದ ಆಸ್ತಿಗಳನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿ ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಮುಂಬೈ, ಇಂದೋರ್, […]

Advertisement

Wordpress Social Share Plugin powered by Ultimatelysocial